ಹೊಳೆಹೊನ್ನೂರು: ದಿಗ್ಗೇನಹಳ್ಳಿ ಬಳಿ ಭದ್ರಾ ಬಲದಂಡೆ ಕಾಲುವೆ ಒಡೆದು ನಾಲೆಯ ನೀರು ಹಳ್ಳ ಸೇರುತ್ತಿದೆ. ಕಾಲುವೆಯಲ್ಲಿ ನೀರು ಪೋಲಾಗುತ್ತಿರುವುದರಿಂದ ತಾತ್ಕಾಲಿಕವಾಗಿ ನೀರನ್ನು ಬಂದ್ ಮಾಡಲಾಗಿದೆ.
ಭದ್ರಾ ಬಲದಂಡೆ ಮುಖ್ಯ ಕಾಲುವೆಯ ಆಗರದಹಳ್ಳಿ ಡಿವಿಜನ್ ಕಾಲುವೆಯಿಂದ ಸಾಸ್ವೆಹಳ್ಳಿ ಮೂಲಕ ಕೋಟೆ ಮಲ್ಲೂರುವರೆಗೆ ಹರಿಯುವ ನೀರಿಗೆ ಆನವೇರಿ, ದಿಗ್ಗೇನಹಳ್ಳಿ ಹಾಗೂ ನಿಂಬೆಗೊಂದಿ ಹತ್ತಿರ ಸಿಮೆಂಟ್ ಕಾಲುವೆಯಲ್ಲಿ ಸೋರಿಕೆ ಉಂಟಾಗಿತ್ತು. ಸಕಾಲದಲ್ಲಿ ದುರಸ್ತಿ ಮಾಡದ ಕಾರಣ ಕಾಲುವೆ ಒಡೆದು ನೀರು ಪೋಲಾಗಿದೆ. ಇದರಿಂದ ಆನವೇರಿ, ದಿಗ್ಗೇನಹಳ್ಳಿ, ನಿಂಬೆಗೊಂದಿ ಹಾಗೂ ಹೊನ್ನಾಳಿ ತಾಲೂಕಿನ ಹೊಟ್ಯಾಪುರ, ಕ್ಯಾಸಿನಕೆರೆ, ಸಾಸ್ವೆಹಳ್ಳಿ, ಕುಳಗಟ್ಟೆ ಮತ್ತಿತರ ಗ್ರಾಮಗಳ ಸಾವಿರಾರು ಎಕರೆಗೆ ನೀರಿನ ಕೊರತೆ ಉಂಟಾಗಿದೆ.
ಸಾಸ್ವೇಹಳ್ಳಿ ಭಾಗದಲ್ಲಿ ಇತ್ತೀಚೆಗೆ ನಾಟಿ ಮಾಡಿರುವ ಭತ್ತದ ಬೆಳೆಗೆ ನೀರಿನ ಅಭಾವವಾಗಿದೆ. ಅಡಕೆ ತೋಟಗಳು ಒಣಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಅಧಿಕಾರಿಗಳು ಕಾಲುವೆಯನ್ನು ಶೀಘ್ರ ದುರಸ್ತಿ ಮಾಡಿ ನೀರು ಬಿಡಬೇಕು ಂದು ರೈತರು ಒತ್ತಾಯಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ಅಧಿಕಾರಿಗಳು, ತಾತ್ಕಾಲಿಕವಾಗಿ ಪೈಪ್ ಅಳವಡಿಸಿ ಮುಂದಕ್ಕೆ ನೀರು ಹರಿಸುವುದಾಗಿ ತಿಳಿಸಿದ್ದಾರೆ. ಮಳೆಗಾಲದಲ್ಲಿ ಕಾಲುವೆ ದುರಸ್ತಿ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಕಾಲುವೆ ದುರಸ್ತಿಗೆ ರೈತರ ಒತ್ತಾಯ

You Might Also Like
ರಾತ್ರಿ ವೇಳೆ ಮಾವಿನ ಹಣ್ಣು ತಿನ್ನಬಾರದು! ಯಾಕೆ ಗೊತ್ತಾ? mango
mango: ಬೇಸಿಗೆಯಲ್ಲಿ ಹೆಚ್ಚು ಇಷ್ಟವಾಗುವ ಹಣ್ಣು ಮಾವಿಹಣ್ಣು. ಇದು ವಿಟಮಿನ್ ಎ, ಸಿ, ಫೈಬರ್, ಉತ್ಕರ್ಷಣ…
ಅಕ್ಷಯ ತೃತೀಯ ಹಬ್ಬಕ್ಕೂ ಮುನ್ನ ನಿಮ್ಮ ಮನೆಯಿಂದ ಈ ವಸ್ತುಗಳನ್ನು ತೆಗೆದುಹಾಕಿ.. Akshaya Tritiya
Akshaya Tritiya: ಅಕ್ಷಯ ತೃತೀಯ ಹಬ್ಬವನ್ನು ಲಕ್ಷ್ಮಿ ದೇವಿಯ ಹಬ್ಬವೆಂದು ಪರಿಗಣಿಸಲಾಗುತ್ತದೆ. ಚಿನ್ನದ ಅಂಗಡಿಗಳು ವ್ಯಾಪಾರದಿಂದ…
ಕಬ್ಬಿನ ರಸವನ್ನು ಎಷ್ಟು ದಿನ ಸಂಗ್ರಹಿಸಬಹುದು..ಈ ಜ್ಯೂಸ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳಿವು..Sugarcane Juice
Sugarcane Juice: ಕಬ್ಬಿನ ಜ್ಯೂಸ್ ಬೇಸಿಗೆಯಲ್ಲಿ ಎಲ್ಲರೂ ಹೆಚ್ಚು ಇಷ್ಟಪಡುವ ಆರೋಗ್ಯಕರ ಪಾನೀಯಗಳಲ್ಲಿ ಒಂದಾಗಿದೆ.…