ಬಿದಿರು ಮಾರಾಟ ಮಾಡಲು ಕೃಷಿಕರು ಸ್ವತಂತ್ರರು

ಗೋಣಿಕೊಪ್ಪ: ಅರಣ್ಯ ಕಾಯ್ದೆ ನಿಯಮದಿಂದ ಬಿದಿರನ್ನು ಕೈ ಬಿಟ್ಟಿರುವುದರಿಂದ ಬಿದಿರು ಮಾರಾಟ ಮಾಡಲು ಕೃಷಿಕರು ಸ್ವತಂತ್ರರು ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಮುಖ್ಯಸ್ಥ ಡಾ. ಚೆಪ್ಪುಡೀರ ಕುಶಾಲಪ್ಪ ಅಭಿಪ್ರಾಯಪಟ್ಟರು.

ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಹಾಗೂ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಸಹಯೋಗದಲ್ಲಿ ಕೆವಿಕೆ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕೃಷಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಬಿದಿರನ್ನು ಕಡಿದು ಮಾರಾಟ ಮಾಡಲು ಇದ್ದ ನಿಯಮವನ್ನು ಸರ್ಕಾರ ಕಾಯ್ದೆಯಿಂದ ಕೈಬಿಟ್ಟಿದೆ. ಇದರಿಂದ ಯಾರು ಬೇಕಾದರು ಬೆಳೆದು ಕಡಿದು ಮಾರಾಟ ಮಾಡಲು ಅವಕಾಶವಿದೆ ಎಂದರು.

ಹವಾಮಾನ ಅಸಮತೋಲನದಿಂದ ವಾರ್ಷಿಕ ಬೆಳೆಯಿಂದ ಸ್ಥಳೀಯ ಕೃಷಿಕರು ಹೆಚ್ಚು ನಷ್ಟ ಎದುರಿಸುತ್ತಿದ್ದಾರೆ. ಇದನ್ನು ಸರಿದೂಗಿಸಲು ಹೆಚ್ಚಾಗಿ ಬಹುವಾರ್ಷಿಕ ಬೆಳೆಗೆ ಕೃಷಿಕರು ಮುಂದಾಗುತ್ತಿದ್ದಾರೆ. ಬಿದಿರು ಕೂಡ ಬಹುವಾರ್ಷಿಕ ಬೆಳೆಯಾಗಿರುವುದರಿಂದ ಲಾಭವಿದೆ ಎಂದು ಹೇಳಿದರು.

ಭಾರತಕ್ಕೆ ಬಿದಿರು ಆಮದು ಆಗುತ್ತಿರುವುದರಿಂದ ಹೆಚ್ಚು ನಷ್ಟವಾಗುತ್ತಿದೆ. ನಾವು ಹೆಚ್ಚು ಬೆಳೆದಷ್ಟು ಆಮದು ಆಗುವುದನ್ನು ನಿಯಂತ್ರಿಸಬಹುದು. ಬಿದಿರು ಕೃಷಿ ಮಾತ್ರವಲ್ಲ, ಉದ್ದಿಮೆಯಾಗಿ ಕಾಣಲು ಅವಕಾಶವಿದೆ ಎಂದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಕೃಷಿ ವಿಜ್ಞಾನಿ ಡಾ.ರಾಮಕೃಷ್ಣ ಹೆಗ್ಡೆ ಪವರ್ ಪಾಯಿಂಟ್ ಮೂಲಕ ಬಿದಿರು ಕೃಷಿ ಮಾಹಿತಿ ನೀಡಿದರು.

ಬೇಸಾಯ ಕ್ರಮ, ತಳಿಗಳ ಅಯ್ಕೆ, ಗೊಬ್ಬರ, ಪೋಶಕಾಂಶ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ.ಸಾಜು ಜಾರ್ಜ್, ವಿಜ್ಞಾನಿ ಡಾ. ಪ್ರಭಾಕರ್ ಉಪಸ್ಥಿತರಿದ್ದರು.Leave a Reply

Your email address will not be published. Required fields are marked *