ಕುಲಗೋಡ ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ

ಕುಲಗೋಡ: ಇಲ್ಲಿಯ ರೈತ ವೆಂಕಪ್ಪ ಮುಶೆಪ್ಪ ದಳವಾಯಿ(38) ಸಾಲಬಾಧೆ ತಾಳಲಾರದೆ ಟ್ರಾೃಕ್ಟರ್ ಹುಡ್‌ಗೆ ಮಂಗಳವಾರ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ.

ಮೃತ ವೆಂಕಪ್ಪ ಒಣ ಬೇಸಾಯದ 12 ಏಕರೆ ಭೂಮಿ ಹೊಂದಿದ್ದಾರೆ. ನೀರಿಗಾಗಿ 4 ವರ್ಷದಲ್ಲಿ 6 ಬೋರ್‌ವೆಲ್ ಕೊರೆಯಿಸಿದರೂ ಪ್ರಯೋಜನವಾಗಿರಲಿಲ್ಲ. ಸಮಯಕ್ಕೆ ಸರಿಯಾಗಿ ಮಳೆಯಾಗದೆ ಬೆಳೆ ಬಾರದ್ದರಿಂದ ಸಾಲ ತೀರಿಸುವ ಚಿಂತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಂಡಿಕೇಟ್ ಬ್ಯಾಂಕ್‌ನಲ್ಲಿ 5 .50 ಲಕ್ಷ ರೂ. ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಡಲಗಿ ಶಾಖೆಯಲ್ಲಿ 12 ಲಕ್ಷ ರೂ. ಬೆಳೆ ಸಾಲ ಹಾಗೂ ಪೈಪ್‌ಲೈನ್ ಸಲುವಾಗಿ ಒಟ್ಟು 17.50 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಸವಾರ ಸಾವು

ಸಮೀಪದ ಹೊಸ ಯರಗುದ್ರಿ ಗ್ರಾಮದಿಂದ ಹಳೇ ಯರಗುದ್ರಿ ಗ್ರಾಮಕ್ಕೆ ಸೋಮವಾರ ರಾತ್ರಿ ಬೈಕ್ ಮೇಲೆ ವೇಗವಾಗಿ ಹೋಗುವಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೂಡಲಗಿ ತಾಲೂಕಿನ ಹೊಸಯರಗುದ್ರಿ ಗ್ರಾಮದ ಈರಪ್ಪ ಯಂಕಪ್ಪ ನಾಯಿಕ(30) ಮೃತ ಸವಾರ. ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.