ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಹುಕ್ಕೇರಿ: ತಾಲೂಕಿನ ಹರಗಾಪುರ ಗ್ರಾಮದ ರೈತ ಪ್ರಕಾಶ ಸಾತಪ್ಪ ಪಾಟೀಲ(ಕಳಸಗೌಡ) (46) ಶನಿವಾರ ಮಧ್ಯಾಹ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

38 ಗುಂಟೆ ಜಮೀನು ಹೊಂದಿರುವ ಮೃತ ರೈತ ಪಿ.ಕೆ.ಪಿ.ಎಸ್.ನಲ್ಲಿ 35 ಸಾವಿರ ರೂ. ಮತ್ತು ಯಮಕನಮರಡಿ ಕೋ-ಆಪ್ ಬ್ಯಾಂಕ್‌ನಲ್ಲಿ 50 ಸಾವಿರ ರೂ. ಸಾಲ ಮಾಡಿದ್ದ. ಯಮಕನಮರಡಿ ಬ್ಯಾಂಕ್ ಸಾಲಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣವಿದ್ದು, ಅದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಕುಟುಂಬ ಮೂಲಗಳು ತಿಳಿಸಿವೆ. ಮೃತನಿಗೆ ಪತ್ನಿ ಮತ್ತು ಇಬ್ಬರು ಪುತ್ರರು ಇದ್ದಾರೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.