ಸಾಲಬಾಧೆಯಿಂದ ರೈತ ಆತ್ಮಹತ್ಯೆ

ಶ್ರೀರಂಗಪಟ್ಟಣ: ಸಾಲಬಾಧೆಯಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ತಾಲೂಕಿನ ಹೆಬ್ಬಾಡಿಹುಂಡಿ ಗ್ರಾಮದ ದೊಡ್ಡೇಗೌಡರ ಮಗ ಈಶ್ವರ್(50) ಮೃತರು.
ಜಮೀನಿನಲ್ಲಿ ಬೋರ್ ಕೊರೆಸಲು ಹಾಗೂ ಬೆಳೆ ಬೆಳೆಯಲು ನಗುವನಹಳ್ಳಿ ಎಸ್‌ಬಿಐ ಶಾಖೆಯಲ್ಲಿ 4 ಲಕ್ಷ ರೂ., ಹೆಬ್ಬಾಡಿಹುಂಡಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2 ಲಕ್ಷ ರೂ. ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖಾಸಗಿ ವ್ಯಕ್ತಿಗಳಿಂದ 3-4 ಲಕ್ಷ ರೂ. ಸಾಲ ಮಾಡಿದ್ದರು.
ಆದರೆ, ಕೊರೆಸಿದ್ದ ಎರಡೂ ಬೋರ್‌ಗಳು ವಿಫಲವಾಗಿದ್ದು, ಸತತ ಬೆಳೆ ನಷ್ಟದಿಂದ ಕಂಗೆಟ್ಟಿದ್ದರು. ಜತೆಗೆ, ಸಾಲಗಾರರ ಒತ್ತಡ ಅಧಿಕಗೊಂಡಿತ್ತು. ಇದರಿಂದ ಮನನೊಂದು ಮಂಗಳವಾರ ಸಂಜೆ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ನಂತರ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.