ಯುವರೈತ ಆತ್ಮಹತ್ಯೆಗೆ ಶರಣು

ಮೇಲುಕೋಟೆ: ಸಾಲಬಾಧೆಯಿಂದ ಯುವರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸುಂಕತೊಣ್ಣೂರು ಗ್ರಾಮದ ಕುಳ್ಳೇಗೌಡರ ಮಗ ಚಂದ್ರಶೇಖರ್(35) ಮೃತರು. ಒಂದು ಎಕರೆ ಸ್ವಂತ ಭೂಮಿ ಮತ್ತು ಗುತ್ತಿಗೆ ಪಡೆದ ಜಮೀನುಗಳಲ್ಲಿ ಹೂ ಹಾಗೂ ಟೊಮ್ಯಾಟೊ ಬೆಳೆದು 6 ಲಕ್ಷ ರೂ. ನಷ್ಟ ಅನುಭವಿಸಿದ್ದರು. ಇದರಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮನೆ ಮುಂದೆ ನಿಲ್ಲಿಸಿದ್ದ ಆಟೋದಲ್ಲೇ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಆಟೋದಲ್ಲಿ ನೇಣು ಹಾಕಿಕೊಳ್ಳುವುದು ಸಾಧ್ಯವೇ ಎಂಬ ಅನುಮಾನ ವ್ಯಕ್ತವಾಗಿದೆ.
ಮೃತನಿಗೆ ಮೂರು ತಿಂಗಳ ಗರ್ಭಿಣಿ ಪತ್ನಿ ಹಾಗೂ 3 ವರ್ಷದ ಮಗಳು ದೀಕ್ಷಾ ಇದ್ದಾರೆ.