ರಾಯಚೂರು: ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿ ತಾಂತ್ರಿಕ ಸಾಧನೆ ಹಾಗೂ ಕೃಷಿಗಳಲ್ಲಿ ಆಗುವ ಬದಲಾವಣೆ ಬಗ್ಗೆ ಪರಸ್ಪರ ಚರ್ಚೆ ಅಗತ್ಯ ಎಂದು ಕೃಷಿ ವಿಜ್ಞಾನಗಳ ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ ಹೇಳಿದರು.
ಇದನ್ನೂ ಓದಿ: ಮಾ.3ರಂದು ಕೃಷಿ ಜಾಗೃತಿ ಅಭಿಯಾನ: ಟ್ರಸ್ಟ್‌ನ ಅಧ್ಯಕ್ಷ ಜೋಗೀಗೌಡ ಮಾಹಿತಿ
ನಗರದ ಕೃಷಿ ವಿಜ್ಞಾನಗಳ ವಿವಿಯ ಸಾವಯವ ಕೃಷಿ ಸಂಶೋಧನಾ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ಸಾವಯವಕೃಷಿ ಸಂಶೋಧನಾ ಸಂಸ್ಥೆ, ಮತ್ತು ಐಸಿಎಆರ್ ವತಿಯಿಂದ ಆಯೋಜಿಸಿದ್ದ ಸುಸ್ಥಿರ ಮಣ್ಣಿನ ಆರೋಗ್ಯ ಮತ್ತು ಜೀವನೋಪಾಯ ಸುರಕ್ಷತೆಯ ಕಾರ್ಯಾಗಾರದಲ್ಲಿ ಮಾತನಾಡಿದರು.
ಪ್ರತಿಯೊಬ್ಬರಿಗೂ ನೈಸರ್ಗಿಕ ಹಾಗೂ ಸಾವಯವ ಕೃಷಿ ಅತ್ಯಂತ ಮುಖ್ಯ. ಈ ಕೃಷಿ ಪದ್ಧತಿಗಳ ಕುರಿತು ಈ ಹಿಂದೆ ವಿವಿಧ ರಾಜ್ಯಗಳಲ್ಲಿ ಮಾಡಲಾದ ಸಂಶೋಧನೆಗಳು ಹಾಗೂ ಸಾಧನೆಗಳ ಕುರಿತು 21 ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಬಹುದಾಗಿದೆ. ಇದರಿಂದ ನೈಸರ್ಗಿಕ ಹಾಗೂ ಸಾವಯವ ಕೃಷಿಯಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಸಹಕಾರಿಯಾಗಲಿದೆ. ಮಣ್ಣಿನ ಆರೋಗ್ಯ ಮತ್ತು ಪೌಷ್ಟಿಕ ಆಹಾರ ಉತ್ಪಾದನೆ ಕುರಿತು ಉತ್ತಮ ಯೋಜನೆ ರೂಪಿಸಬೆಕಾಗಿದೆ ಎಂದರು.
ಧಾರವಾಡ ಕೃಷಿ ವಿಜ್ಞಾನಗಳ ವಿವಿ ವಿಶ್ರಾಂತ ಕುಲಪತಿ ಡಾ.ಡಿ.ಬಿ.ಬಿರಾದಾರ, ಬಳ್ಳಾರಿಯ ಭಾರತೀಯ ಮಣ್ಣು ಮತ್ತು ನೀರು ಸಂರಕ್ಷಣಾ ಸಂಸ್ಥೆ ಮುಖ್ಯಸ್ಥ ಡಾ.ಬಿ.ಕೃಷ್ಣ ರಾವ್, ರಾಯಚೂರು ಕೃಷಿ ವಿಜ್ಞಾನಗಳ ವಿವಿ ವಿಸ್ತರಣಾ ನಿರ್ದೇಶಕ ಎನ್.ಶಿವಶಂಕರ, ತರಬೇತಿ ನಿರ್ದೇಶಕ ಎಂ.ಎ ಬಸವಣ್ಣೆಪ್ಪ ಇತರರಿದ್ದರು.