ಮಾನ್ವಿ: ತಾಲೂಕಿನ ಹಿರೇಕೊಟ್ನೆಕಲ್ ಕೃಷಿ ಪತ್ತಿನ ಸಹಕಾರ ಬ್ಯಾಂಕಿನಲ್ಲಿ ಸೌಲಭ್ಯಗಳನ್ನು ನೀಡದೆ ವಂಚಿಸುತ್ತಿರುವ ಹಾಗೂ ಜಾತೀಯತೆ ಮಾಡುತ್ತಿರುವ ಸಿಇಒ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷೆ ಅನಿತಾ ಬಸವರಾಜ ಒತ್ತಾಯಿಸಿದರು.
ಇದನ್ನೂ ಓದಿ:ಸ್ಥಗಿತವಾಗಿರುವ ಅರಣ್ಯ ಭೂ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆಸಿ/ ರೈತ ಸಂಘದಿAದ ಒತ್ತಾಯ
ಪಟ್ಟಣದ ತಾಪಂನಲ್ಲಿ ಶುಕ್ರವಾರ ರಾಜ್ಯ ರೈತ ಸಂಘ ಹಮ್ಮಿಕೊಂಡಿದ್ದ ಧರಣಿಯಲ್ಲಿ ಮಾತನಾಡಿದರು. ಹಿರೇಕೋಟ್ನೆಕಲ್ ಭಾಗದ ಅತಿ ಸಣ್ಣ ರೈತರಿಗೆ ಸೌಲಭ್ಯ ಒದಗಿಸುವ ಕೆಲಸ ಮಾಡಬೇಕು, ಸಹಕಾರಿ ಸಿಇಒ ದೇವರೆಡ್ಡಿ ಅವಧಿಯಲ್ಲಿ ರೈತರಿಗೆ ನೀಡಿರುವ ಎಲ್ಲ ಸಾಲಗಳ ಸಮಗ್ರ ತನಿಖೆಗೊಳಪಡಿಸಬೇಕು,
ಬ್ಯಾಂಕಿನ ವ್ಯಾಪ್ತಿಗೆ ಬರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಅತಿ ಸಣ್ಣ ರೈತರಿಗೆ ಸಿಗುವ ಸಾಲ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ರೈತರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು ಹಾಗೂ ಇತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಹೊಳಪ್ಪ ಉಟಕನೂರು, ಮುಕಂಡರಾದ ಬಸವರಾಜ ನಾಯಕ, ಜಯರಾಜ ಕೊಡ್ಲಿ, ಶಾಮಸಿಂಗ್, ವಿಜಯಕುಮಾರ, ಇಲಿಯಾಸ್, ತಿಮ್ಮಣ್ಣ ಭೋವಿ, ಶ್ರೀಧರ, ರವಿಕುಮಾರ ಇತರರಿದ್ದರು.