ಗುಂಡ್ಲುಪೇಟೆ: ಕಾರು ಗುದ್ದಿ ಜಮೀನಿನ ಬಳಿ ಬೈಕಿನಲ್ಲಿ ಕೂತಿದ್ದ ರೈತ ಮೃತಪಟ್ಟಿದ್ದಾರೆ.

ರಾಘವಾಪುರ ಗ್ರಾಮದ ನಾಗರಾಜಶೆಟ್ಟಿ(45) ಮೃತ ದುರ್ದೈವಿ.
ಭಾನುವಾರ ಬೆಳಗ್ಗೆ ಹಳ್ಳದಮಾದಹಳ್ಳಿ ಗೇಟ್ ಬಳಿ ತಮ್ಮ ಜಮೀನಿನಲ್ಲಿ ಕಟ್ಟಿದ್ದ ಹಸುಗಳ ಹಾಲು ಕರೆಯಲು ನಾಗರಾಜಶೆಟ್ಟಿ ತೆರಳಿದ್ದರು. ಬೆಂಗಳೂರಿನಿಂದ ಊಟಿಯತ್ತ ಸಾಗುತ್ತಿದ್ದ ಕಾರು ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯಿಂದ ದುರ್ಘಟನೆ ಸಂಭವಿಸಿದೆ. ಕಾರು ರಸ್ತೆಯಿಂದ ಏಕಾಏಕಿ ಬಲಕ್ಕೆ ತಿರುಗಿ ಬೈಕಿಗೆ ಗುದ್ದಿ, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದ ಬಳಿಕ ಕಾರಿನಲ್ಲಿದ್ದವರು ಪರಾರಿಯಾಗಿದ್ದಾರೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.