ಭಾರತೀಯ ವಿದ್ಯಾರ್ಥಿಗಳಿಗೆ ಬ್ರಿಟನ್​ನಲ್ಲಿ ಕೆಲಸದ ಅವಕಾಶ

ನವದೆಹಲಿ: ಶಿಕ್ಷಣ ಪೂರೈಸಿದ ನಂತರ 2 ವರ್ಷ ಬ್ರಿಟನ್​ನಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸುವ ಉದ್ಯೋಗ ವೀಸಾ (ವರ್ಕ್ ವೀಸಾ) ನಿಯಮವನ್ನು ಬ್ರಿಟನ್ ಸರ್ಕಾರ ಪ್ರಕಟಿಸಿದ್ದು ಇದರಿಂದ ಭಾರತ ಸಹಿತ ಎಲ್ಲ ವಿದೇಶಿ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ. ‘ಪದವಿ ಮಾರ್ಗ’ (ಗ್ರಾಜ್ಯುಯೇಟ್ ರೂಟ್) ಎನ್ನಲಾಗುವ ಈ ನಿಯಮ 2020-21ನೇ ಸಾಲಿನಿಂದ ಬ್ರಿಟನ್ ವಿವಿಗಳಲ್ಲಿ ಪದವಿ ಕೋರ್ಸ್​ಗಳಿಗೆ ನೋಂದಾ ಯಿಸಿ ಕೊಳ್ಳುವವರಿಗೆ ಅನ್ವಯ ಆಗಲಿದೆ.

ಬ್ರಿಟನ್​ನಲ್ಲಿ ಅಧ್ಯಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ಪದವೀಧರ ರಾದ ಮೇಲೆ 2 ವರ್ಷ ಅವಧಿಗೆ ಅಲ್ಲಿ ವೃತ್ತಿಯಲ್ಲಿ ತೊಡಗಬಹುದು. ‘ಬ್ರಿಟನ್​ನಲ್ಲಿ ಕಲಿಯುವ ಭಾರತೀಯ ವಿದ್ಯಾರ್ಥಿಗಳಿಗೆ ಇದೊಂದು ಅದ್ಭುತ ಸುದ್ದಿಯಾಗಿದೆ’ ಎಂದು ಭಾರತದಲ್ಲಿನ ಬ್ರಿಟನ್ ಹೈಕಮಿಷನರ್ ಸರ್ ಡಾಮಿನಿಕ್ ಅಸ್ಕ್ವಿತ್ ಹೇಳಿದರು.

‘ಭಾರತೀಯ ವಿದ್ಯಾರ್ಥಿಗಳು ಪದವಿ ನಂತರ ಹೆಚ್ಚು ಸಮಯ ಬ್ರಿಟನ್​ನಲ್ಲಿ ಕಳೆಯಬಹುದು. ಹೆಚ್ಚಿನ ಕೌಶಲ ಹಾಗೂ ಅನುಭವ ಗಳಿಸಲು ಇದು ನೆರವಾಗುತ್ತದೆ’ ಎಂದರು. ‘ಪ್ರತಿಭಾವಂತ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಬ್ರಿಟನ್​ನಲ್ಲಿ ಅಧ್ಯಯನ ನಡೆಸಬಹುದಾಗಿದೆ. ಯಶಸ್ವಿ ವೃತ್ತಿಜೀವನ ನಡೆಸಿ ಅಮೂಲ್ಯ ಅನುಭವ ಗಳಿಸಲು ಸಾಧ್ಯವಾಗುತ್ತದೆ. ಇದು ಪದವಿ ಮಾರ್ಗದ ಅನುಕೂಲ’ ಎಂದು ಬ್ರಿಟನ್ ಗೃಹ ಸಚಿವೆ ಪ್ರೀತಿ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *