20 ಕೆ.ಜಿ. ಕೇಕ್​​ನಲ್ಲಿ ಅರಳಿದ ಐಸಿಸಿ ಏಕದಿನ ವಿಶ್ವಕಪ್​​​ ಟ್ರೋಫಿ, ಕ್ರಿಕೆಟ್​ ಅಭಿಮಾನಿಗಳ ದಿಲ್​ ಖುಷ್

ಪಂಜಾಬ್​​: 12ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್​​​ ಇಂದಿನಿಂದ ಇಂಗ್ಲೆಂಡ್​​ನಲ್ಲಿ ಆರಂಭವಾಗಲಿದೆ. ಭಾರತದ ಕ್ರಿಕೆಟ್​​ ಅಭಿಮಾನಿಗಳು ಟೀಂ ಇಂಡಿಯಾ ಆಟವನ್ನು ವೀಕ್ಷಿಸಲು ಬಹಳ ಕಾತರದಿಂದ ಕಾಯುತ್ತಿದ್ದಾರೆ. ಪಂಜಾಬ್​​ನಲ್ಲಿ ಅಭಿಮಾನಿಯೊಬ್ಬ ವಿಶ್ವಕಪ್​​​​ ಟ್ರೋಫಿಯನ್ನು ಕೇಕ್​​ನಲ್ಲಿ ಅರಳಿಸುವ ಮೂಲಕ ತನ್ನ ಅಭಿಮಾನ ಮೆರೆದಿದ್ದಾರೆ.

ಲೂದಿಯಾನದ ಬೇಕರಿ ಮಾಲೀಕ ಹರೀಂದರ್​​​ ಸಿಂಗ್​​​​​​​​ ಕುರೇಜಾ ಅವರು 20 ಕೇಕ್​​ನಲ್ಲಿ ವಿಶ್ವಕಪ್​​ ಟ್ರೋಫಿಯನ್ನು ತಯಾರಿಸುವ ಮೂಲಕ ಕ್ರಿಕೆಟ್​​ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಭಾರತ ತಂಡ ಮೂರನೇ ಬಾರಿ ವಿಶ್ವಕಪ್​ ಗೆಲ್ಲುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತ ಮೂರನೇ ಬಾರಿ ವಿಶ್ವಕಪ್​​​ ಗೆಲ್ಲುತ್ತದೆ. ಅದಕ್ಕಾಗಿಯೇ ಈ ಕೇಕ್​​ ತಯಾರಿಸಿದ್ದೇವೆ. ಪ್ರಸ್ತುತ ಟೀಂ ಇಂಡಿಯಾ ಎಲ್ಲ ತಂಡಗಳಿಗಿಂತ ಬಲಿಷ್ಠವಾಗಿದ್ದು, ಎದುರಾಳಿ ಪಡೆಗಳನ್ನು ಮಣಿಸಿ ಟ್ರೋಫಿ ಎತ್ತಲಿ ಎಂದು ಹರೀಂದರ್​​ ಸಿಂಗ್​ ತಿಳಿಸಿದ್ದಾರೆ.

ಕೇಕ್​​ನಲ್ಲಿ ಭಾರತ ಕ್ರಿಕೆಟ್​​ ನಿಯಂತ್ರಣ ಮಂಡಳಿ(ಬಿಸಿಸಿಐ) ಲೋಗೊ, ಬ್ಯಾಟ್​​​, ಸ್ಪಂಪ್ಸ್​​, ಕೈಚೀಲ ಮತ್ತು ಕಾಲಿನ ಪ್ಯಾಡ್​​​​ ಸೇರಿದಂತೆ ನಾಯಕ ವಿರಾಟ್​​ ಕೊಹ್ಲಿ ಮತ್ತು ವಿಕೆಟ್​​ ಕೀಪರ್​​​​​​​​​​ ಮಹೇಂದ್ರ ಸಿಂಗ್​​ ಧೋನಿ ಅವರ ಚಿತ್ರಗಳನ್ನು ಬಿಡಿಸಲಾಗಿದೆ.

ಭಾರತ ತಂಡ ಮೊದಲ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್​​ ವಿರುದ್ಧ ಸೋತರೆ, ಬಾಂಗ್ಲಾದೇಶ ವಿರುದ್ಧದ ಎರಡನೇ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿ ಗೆಲುವು ಸಾಧಿಸಿತ್ತು. ಲೀಗ್​ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಸೆಣಸಲಿದೆ. (ಏಜನ್ಸೀಸ್​)

Leave a Reply

Your email address will not be published. Required fields are marked *