ಎಸ್​ಆರ್​ಎಚ್​ ಪ್ಲೇ ಆಫ್​ ಕನಸಿಗೆ ಎಳ್ಳುನೀರು ಬಿಟ್ಟ ಆರ್​​ಸಿಬಿ: ಹೈದರಾಬಾದ್​​ ತಂಡವನ್ನು ನೆಟ್ಟಿಗರು ಟ್ರೋಲ್​ ಮಾಡಿದ್ದು ಹೀಗೆ…

ಬೆಂಗಳೂರು: ಶನಿವಾರ ರಾತ್ರಿ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಮತ್ತು ಸನ್​​ ರೈಸರ್ಸ್​ ಹೈದರಾಬಾದ್​​​ ನಡುವಿನ ಐಪಿಎಲ್​​ ಅಂತಿಮ ಪಂದ್ಯದಲ್ಲಿ ಎಸ್​​ಆರ್​​ಎಚ್​​ ಸೋತು ಪ್ಲೇ ಆಫ್​​ ಪ್ರವೇಶಿಸುವಲ್ಲಿ ವಿಫಲವಾಯಿತು.

ಈ ಪಂದ್ಯದ ಬಗ್ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿಮ ವಿವಿಧ ರೀತಿಯಲ್ಲಿ ಕಾಮೆಂಟ್​​ ಮಾಡುವ ಮೂಲಕ ಟ್ರೋಲ್​​ ಮಾಡಿದ್ದಾರೆ. ಹೈದರಾಬಾದ್​​ ಈ ಪಂದ್ಯದಲ್ಲಿ ಜಯ ಸಾಧಿಸಿದ್ದರೆ, 14 ಅಂಕಗಳೊಂದಿಗೆ ಪ್ಲೇ ಆಫ್​​ ಪ್ರವೇಶಿಸುತ್ತಿತ್ತು. ಆದರೆ ಬೆಂಗಳೂರಿನ ಶಿಮ್ರೋನ್​​​ ಹೇಟ್ಮೆರ್​​​ ಮತ್ತು ಗುರ್​​ರ್ಕೀತ್​ ಸಿಂಗ್​​​​​​​​​​ ಅವರಿಗೆ ಅವಕಾಶ ನೀಡಲಿಲ್ಲ.

ಕೊಹ್ಲಿ ಪಡೆ ಅಂತಿಮ ಪಂದ್ಯದಲ್ಲಿ ಉತ್ತಮ ಆಟವಾಡಿ ಅಭಿಮಾನಿಗಳನ್ನು ಖುಷಿಪಡಿಸಿತು. ಎಸ್​​ಆರ್​​ಎಚ್​​ ಸೋಲಿನ ಬಳಿಕ ಆರ್​ಸಿಬಿ ಮತ್ತು ಇತರೆ ತಂಡಗಳ ಅಭಿಮಾನಿಗಳು ಸಾಮಾಜಿಕ ಜಾಲತಾಣಗಲ್ಲಿ ವಿವಿಧ ರೀತಿಯಲ್ಲಿ ಪೋಸ್ಟ್​​ಗಳನ್ನು ಹಾಕುವ ಮೂಲಕ ಟ್ರೋಲ್​​ ಮಾಡಿದ್ದಾರೆ.

ಎಚ್​​ಆರ್​ಎಚ್​​ ನೀಡಿದ್ದ ಸ್ಪರ್ಧಾತ್ಮಕ ಗುರಿಯನ್ನು(175) ಬೆನ್ನಟ್ಟಿದ ಆರ್​ಸಿಬಿ ಆರಂಭದಲ್ಲಿಯೇ ಪಾರ್ಥಿವ್​​ ಪಟೇಲ್​, ವಿರಾಟ್​​ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್​ ವಿಕೆಟ್​​​​​​​​ ಕಳೆದುಕೊಂಡಿತು. ಬಳಿಕ ಕ್ರೀಸ್​ಗೆ ಬಂದ ಶಿಮ್ರೋನ್​​​ ಹೇಟ್ಮೆರ್​​​ ಮತ್ತು ಗುರ್​​ರ್ಕೀತ್​ ಸಿಂಗ್​​​​​​​​​ ಜೋಡಿ ಉತ್ತಮ ಇನಿಂಗ್ಸ್​​ ಕಟ್ಟಿತು. ಈ ಜೋಡಿ 144 ರನ್​​​​​​​​ ಜತೆಯಾಟವಾಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿತು.

ಆರ್​ಸಿಬಿ 2013ರ ಬಳಿಕ ಕೊಹ್ಲಿ ಮತ್ತು ಎಬಿಡಿ ಇಲ್ಲದೇ ಮೊದಲ ಬಾರಿಗೆ ನೂರು ರನ್ ​​ಜತೆಯಾಟವಾಡಿದೆ.(ಏಜನ್ಸೀಸ್​)

ಆರ್​ಸಿಬಿ ಗೆಲುವಿನ ಬಳಿಕ ಅಭಿಮಾನಿಗಳು ಯಾವ ರೀತಿ ಟ್ರೋಲ್​​​​​​ ಮಾಡಿದ್ದಾರೆ ನೋಡಿ.