ಆರ್​ಸಿಬಿ ಆಟಕ್ಕೆ ಸಿಟ್ಟಾಗಿ ಟ್ರೋಲ್​ ಮೂಲಕ ವಿರಾಟ್​ ಪಡೆ ವಿರುದ್ಧ ಮುಗಿಬಿದ್ದ ಅಭಿಮಾನಿಗಳು

ಬೆಂಗಳೂರು: ಪ್ರತಿ ಐಪಿಎಲ್​ ಆವೃತ್ತಿಗೂ ಮುನ್ನ ಈ ಸಲ ಕಪ್​ ನಮ್ದೆ ಎಂದು ಹೇಳಿಕೊಳ್ಳುತ್ತಾ ತಂಡದ ಮೇಲೆ ಭಾರಿ ವಿಶ್ವಾಸ ಇಡುತ್ತಿರುವ ರಾಯಲ್​ ಚಾಲೆಂಜರ್ಸ್ ಬೆಂಗಳೂರು​ ತಂಡದ ಅಭಿಮಾನಿಗಳಿಗೆ ಪ್ರತಿ ಬಾರಿಯೂ ನಿರಾಸೆಯಾಗುತ್ತಿದ್ದು, ಇದರಿಂದ ತುಸು ಬೇಸರಗೊಂಡಿರುವ ಅಭಿಮಾನಿಗಳು ಆರ್​ಸಿಬಿ ವಿರುದ್ಧ ಟ್ರೋಲ್​ ಮಾಡುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಒಮ್ಮೆಯೂ ಐಪಿಎಲ್​ ಕಿರೀಟವನ್ನು ಮುಡಿಗೇರಿಸಿಕೊಳ್ಳದ ಆರ್​​ಸಿಬಿ ಒಂದು ಬಾರಿಯಾದರೂ ಟ್ರೋಫಿ ಎತ್ತಿ ಹಿಡಿಯಬೇಕೆಂಬುದು ಆರ್​ಸಿಬಿ ಅಭಿಮಾನಿಗಳ ಆಸೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಹಾಡು, ಫೊಟೋಗಳ ಮೂಲಕ ಈ ಸಲ ಕಪ್​ ನಮ್ದೇ ಎಂದು ಹೇಳುತ್ತಾ, ಬೆಂಬಲ ನೀಡುತ್ತಾ ನಿರೀಕ್ಷೆಯ ಮೂಟೆಯನ್ನು ಹೊತ್ತಿದ್ದಾರೆ. ಈ ಬಾರಿಯಾದರೂ ಆರ್​ಸಿಬಿ ಅದನ್ನು ಈಡೇರಿಸುತ್ತಾ ಎಂಬ ಆಸೆಗೆ ಆರ್​ಸಿಬಿ ತನ್ನ ಕಳಪೆ ಪ್ರದರ್ಶನದ ಮೂಲಕ ಉತ್ತರ ನೀಡುತ್ತಿರುವುದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಇದುವರೆಗೂ ಒಟ್ಟು ಮೂರು ಪಂದ್ಯಗಳನ್ನು ಆಡಿರುವ ಆರ್​ಸಿಬಿ ಮೂರರಲ್ಲೂ ಸೋತಿದೆ. ಟೂರ್ನಿಯ ಆರಂಭದಲ್ಲೇ ಚೆನ್ನೈ ವಿರುದ್ಧ ಮುಗ್ಗರಿಸಿದ ಆರ್​ಸಿಬಿ ನಂತರ ಮುಂಬೈ ಇಂಡಿಯನ್ಸ್ ವಿರುದ್ಧ ದುರಾದೃಷ್ಟದ ಸೋಲನ್ನು ಅನುಭವಿಸಿತು. ಬಳಿಕ ನಡೆದ ಮೂರನೇ​ ಪಂದ್ಯದಲ್ಲಿಯೂ ಸನ್​ ರೈಸರ್ಸ್​ ಹೈದರಾಬಾದ್​ ವಿರುದ್ಧ ಹೀನಾಯವಾಗಿ ಸೋತಿತು. ಪಂದ್ಯದಲ್ಲಿ ಸ್ಟಾರ್​ ಆಟಗಾರರಿದ್ದರು ಯಾರೂ ಉತ್ತಮ ನಿರ್ವಹಣೆ ತೋರುತ್ತಿಲ್ಲ. ಇತ್ತ ನಾಯಕ ವಿರಾಟ್​ ಕೊಹ್ಲಿಯು ಕೂಡ ನಾಯಕತ್ವದಲ್ಲಿ ಎಡುವುತ್ತಿದ್ದಾರೆ. ಇದೇ ಕಾರಣದಿಂದ ಐಪಿಎಲ್ ಟೂರ್ನಿ​ ಅಂಕಪಟ್ಟಿಯಲ್ಲಿ ಆರ್​ಸಿಬಿ ಕೊನೆ ಸ್ಥಾನದಲ್ಲಿದೆ. ಇದರಿಂದ ಸಿಟ್ಟಾಗಿರುವ ಅಭಿಮಾನಿಗಳು ಟ್ರೋಲ್​ ಮೂಲಕ ತಂಡದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಅಭಿಮಾನಿಗಳು ಮಾಡಿರುವ ಟ್ರೋಲ್​​ ನಗೆಗಡಲಲ್ಲಿ ತೇಲಿಸುವಂತಿದೆ.

ಕ್ರೀಡಾಭಿಮಾನಿಗಳು ಮಾಡಿರುವ ಟ್ರೋಲ್​ ಹೀಗಿದೆ…

One Reply to “ಆರ್​ಸಿಬಿ ಆಟಕ್ಕೆ ಸಿಟ್ಟಾಗಿ ಟ್ರೋಲ್​ ಮೂಲಕ ವಿರಾಟ್​ ಪಡೆ ವಿರುದ್ಧ ಮುಗಿಬಿದ್ದ ಅಭಿಮಾನಿಗಳು”

Comments are closed.