More

  ಹಾರ್ದಿಕ್​ ವಿರುದ್ಧ ಕೇಳಿಬರುತ್ತಿರುವ ಮಾತು ಇದೊಂದೇ… ಮುಂಬೈ ಮ್ಯಾನೆಜ್​ಮೆಂಟ್​ ತಪ್ಪಿಗಿಲ್ಲ ಕ್ಷಮೆ!

  ಮುಂಬೈ: ನಿನ್ನೆ (ಏ.01) ಮುಂಬೈನ ವಾಂಖಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 14ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಎರಡು ಟೀಮ್​ಗಳ ಮಧ್ಯೆ ಭರ್ಜರಿ ಪೈಪೋಟಿ ಕೂಡ ನಡೆಯಿತು. ಆದರೆ, ಅಂತಿಮವಾಗಿ ಮತ್ತೊಮ್ಮೆ ಗೆಲುವು ದಾಖಲಿಸುವಲ್ಲಿ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ವಿಫಲವಾಯಿತು.

  ಇದನ್ನೂ ಓದಿ: ಪ್ರಶಸ್ತಿ ಹರಾಜು ಹಾಕಿದ ವಿಜಯ್ ದೇವರಕೊಂಡ; ಈ ಹಣವನ್ನು ಏನು ಮಾಡಿದ್ರು ಗೊತ್ತಾ?

  ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಆರ್​ಆರ್​ ಮುಂಬೈ ಬ್ಯಾಟ್ಸ್​ಮನ್​ಗಳನ್ನು ಅಬ್ಬರಿಸಲು ಬಿಡದೆ 20 ಓವರ್​ಗಳಲ್ಲಿ ಕೇವಲ 124 ರನ್​ ಕಲೆಹಾಕುವಂತೆ ಮಾಡಿತು. ಇನ್ನು ಈ ಗುರಿಯನ್ನು ಬೆನ್ನಟ್ಟಿದ ಸಂಜು ಸ್ಯಾಮ್​ಸ್ಸನ್​ ಪಡೆ ಬರೀ 15.3 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ ಟಾರ್ಗೆಟ್​ ತಲುಪುವ ಮೂಲಕ ಭರ್ಜರಿ ಗೆಲುವನ್ನು ದಾಖಲಿಸಿತು. ಇದು ಮತ್ತೊಮ್ಮೆ ಹಾರ್ದಿಕ್​ ಕ್ಯಾಪ್ಟನ್ಸಿಗೆ ಕುತ್ತು ತಂದೊಡ್ಡಿತು.

  ಐಪಿಎಲ್​ ಆರಂಭಕ್ಕೂ ಮುನ್ನವೇ ಹಾರ್ದಿಕ್​ ಪಾಂಡ್ಯ ವಿರುದ್ಧ ಛೀಮಾರಿ ಹಾಕುವುದು, ಅಸಡ್ಡೆಯಿಂದ ಮಾತನಾಡುವುದು ತಪ್ಪಿಲ್ಲ. ನಾಯಕತ್ವ ಬದಲಾವಣೆ ಆದಾಗಿನಿಂದ ಮುಂಬೈ ತಂಡದಲ್ಲಿ ಯಾವುದು ಸರಿಯಿಲ್ಲ. ರೋಹಿತ್​ರಿಂದ ನಾಯಕತ್ವ ಕಸಿದ ಹಾರ್ದಿಕ್​ ಪಾಂಡ್ಯಗೆ ಮುಂಬೈ ಅಭಿಮಾನಿಗಳಿಂದ ಸಿಗುತ್ತಿರುವುದು ಕೇವಲ ಅಸಮಾಧಾನದ ಮಾತು, ವ್ಯಂಗ್ಯ, ಲೇವಡಿ ಮಾತ್ರ. ಎಂಐ ಆಡುವ ಯಾವುದೇ ಸ್ಟೇಡಿಯಂ ಇರಲಿ, ಪಾಂಡ್ಯ ಕ್ರೀಡಾಂಗಣಕ್ಕೆ ಬಂದರೆ ಸಾಕು ಅಲ್ಲಿ ಸೇರಿರುವ ಕ್ರಿಕೆಟ್ ಫ್ಯಾನ್ಸ್​ಗಳಿಂದ​ ಟೀಕಾ ಪ್ರಹಾರ ಪ್ರಾರಂಭವಾಗುತ್ತವೆ.

  ಇದನ್ನೂ ಓದಿ: ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲದ ನೂತನ ತೇರಿಗೆ ಕಳಸ ಪ್ರತಿಷ್ಠಾಪನೆ

  ಗುಜರಾತ್​ ಟೈಟಾನ್​ ವಿರುದ್ಧದ ಪಂದ್ಯದಲ್ಲಿ ಮೈದಾನಕ್ಕೆ ನಾಯಿ ನುಗ್ಗಿದಾಗ ಕ್ರೀಡಾಂಗಣದಲ್ಲಿ ನೆರೆದಿದ್ದ ಅನೇಕರು ಹಾರ್ದಿಕ್​ ಹೆಸರನ್ನು ಮುಂದಿಟ್ಟು, ಹಾರ್ದಿಕ್​…ಹಾರ್ದಿಕ್​ ಎಂದು ಕೂಗುವ ಮೂಲಕ ಅವಮಾನ ಮಾಡಿದ್ದರು. ಇದಲ್ಲದೆ, ಎಲ್​ಇಡಿ ಪರದೆ ಮೇಲೆ ಹಾರ್ದಿಕ್​ ಬಂದಾಗಲೆಲ್ಲ ಬೂ….. ಎಂದು ಕೂಗಿ ಅಪಹಾಸ್ಯ ಮಾಡುತ್ತಿದ್ದಾರೆ. ಸನ್​​ ರೈಸರ್ಸ್​ ಹೈದರಾಬಾದ್​ ಪಂದ್ಯ ಸೇರಿದಂತೆ ನಿನ್ನೆಯ ರಾಜಸ್ಥಾನ ರಾಯಲ್ಸ್​ ನಡುವಿನ ಪಂದ್ಯದಲ್ಲಿಯೂ ಇದು ಮರುಕಳಿಸಿತ್ತು.

  ಆರ್​ಆರ್​ ಪಂದ್ಯದ ಟಾಸ್​ ಸಮಯದಲ್ಲಿ ಹಾರ್ದಿಕ್​ ಹೆಸರು ಹೇಳುತ್ತಿದ್ದಂತೆ ಬೂ…ಎಂದು ಕೂಗಿದರು. ಇದರಿಂದ ಬೇಸರಗೊಂಡ ಮಾಜಿ ಕ್ರಿಕೆಟಿಗ, ಕಮೆಂಟೇಟರ್​ ಸಂಜಯ್​ ಮಂಜ್ರೇಕರ್​ ಸರಿಯಾಗಿ ವರ್ತಿಸಿ ಎಂದು ನೆರೆದಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದರು. ಇಷ್ಟಾದರೂ ಸಹ ಶಾಂತರಾಗದ ಜನರು, ಕೇವಲ ಸ್ಟೇಡಿಯಂ ಮಾತ್ರವಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಕೂಡ ಹಾರ್ದಿಕ್​ ನಾಯಕತ್ವದ ವಿರುದ್ಧ ವ್ಯಾಪಕ ಟೀಕೆ, ವ್ಯಂಗ್ಯವಾಡುತ್ತಿದ್ದಾರೆ. ಇದನ್ನೆಲ್ಲ ಗಮನಿಸಿದ ಹಲವರು ಹಾರ್ದಿಕ್​ಗೆ ಕ್ಯಾಪ್ಟನ್​ ಸ್ಥಾನ ಕೊಟ್ಟಿದ್ದು ಮ್ಯಾನೆಜ್​ಮೆಂಟ್​ ತಪ್ಪೋ? ಅಥವಾ ಸ್ಥಾನ ಪಡೆದಿದ್ದು ಹಾರ್ದಿಕ್ ಪಾಂಡ್ಯ ತಪ್ಪೋ? ಎಂದು ಪ್ರಶ್ನಿಸುತ್ತಿದ್ದಾರೆ.

  2021ರಲ್ಲಿ ಮುಂಬೈ ಇಂಡಿಯನ್ಸ್​ ಬಿಟ್ಟಿದ್ದೂ ಇದೇ ಕಾರಣಕ್ಕೆ… ಮುಖಕ್ಕೆ ಹೊಡದಂಗೆ ಹೇಳಿದ್ರು ರವಿಶಾಸ್ತ್ರಿ

  ಏಪ್ರಿಲ್ 2-6ರವರೆಗೆ ಈ ರಾಜ್ಯದಲ್ಲಿ ಸುರಿಯಲಿದೆ ಭಾರೀ ಮಳೆ! ಬಿಸಿಲ ಬೇಗೆಯ ಮಧ್ಯೆ ಐಎಂಡಿ ಮುನ್ಸೂಚನೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts