ನಿಖಿಲ್ ಕುಮಾರಸ್ವಾಮಿ ಸೋತಿದ್ದಕ್ಕೆ ಬೆರಳನ್ನೇ ಕತ್ತರಿಸಿಕೊಂಡ ಅಭಿಮಾನಿ? ಫೋಟೊ ವೈರಲ್‌

ಮಂಡ್ಯ: ದೇಶಾದ್ಯಂತ ಗಮನ ಸೆಳೆದಿದ್ದ, ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಫಲಿತಾಂಶ ಹೊರಬಿದ್ದು ಮತದಾರ ಸುಮಲತಾ ಅಂಬರೀಷ್‌ ಅವರನ್ನು ಕೈಹಿಡಿದಿದ್ದಾನೆ. ಎದುರಾಳಿಯಾಗಿ ಸ್ಪರ್ಧಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಸೋತಿದ್ದಕ್ಕೆ ಅಭಿಮಾನಿಗಳು ಫುಲ್‌ ಬೇಸರಗೊಂಡಿದ್ದಾರೆ.

ಜೆಡಿಎಸ್‌ ಭದ್ರಕೋಟೆ ಎಂದೇ ಹೇಳಲಾಗುತ್ತಿದ್ದ ಮಂಡ್ಯದಲ್ಲಿ ನಿಖಿಲ್‌ ಕುಮಾರಸ್ವಾಮಿ ಸೋತಿದ್ದಕ್ಕೆ ಬೇಸರಗೊಂಡ ಅಭಿಮಾನಿಯೊಬ್ಬ ಮತ ಚಲಾಯಿಸಿದ್ದ ಬೆರಳನ್ನೇ ಕತ್ತರಿಸಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಬೆರಳು ಕತ್ತರಿಸಿಕೊಂಡಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮಂಡ್ಯ ಜಿಲ್ಲೆ, ಮದ್ದೂರು ತಾಲೂಕಿನ ಹಳ್ಳಿಯೊಂದರಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.

ನಿಖಿಲ್ ಸೋತ ಮೇಲೆ ಮತ ಹಾಕಿದ ಬೆರಳು ಕೂಡ ಬೇಡ ಎಂದು ಕೈಗೆ ಶಾಯಿ ಹಾಕಿಸಿಕೊಂಡಿದ್ದ ಬೆರಳನ್ನೇ ಅಭಿಮಾನಿ ಕತ್ತರಿಸಿಕೊಂಡಿದ್ದಾನೆ. ಯುವಕನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. (ದಿಗ್ವಿಜಯ ನ್ಯೂಸ್)

2 Replies to “ನಿಖಿಲ್ ಕುಮಾರಸ್ವಾಮಿ ಸೋತಿದ್ದಕ್ಕೆ ಬೆರಳನ್ನೇ ಕತ್ತರಿಸಿಕೊಂಡ ಅಭಿಮಾನಿ? ಫೋಟೊ ವೈರಲ್‌”

  1. Mugda (innocent ) and emotional illiterate uneducated people motivated by castiesum. Let us pray almighty Shiva to give wisdom to mugdha Kannadigas

  2. Yake kai beralu katruskondidya talene kaltuskolbekittu ninna bavishya ninna kayallide huchuchagi aa thara cut madkondidyalla ninna family nodode nikil bartara idee jeevamana

Leave a Reply

Your email address will not be published. Required fields are marked *