21.7 C
Bengaluru
Tuesday, January 21, 2020

ನೆಲಕಚ್ಚಿ ಮತ್ತೆ ರೆಕ್ಕೆಬಿಚ್ಚಿದ ರಿಯಲ್ ಎಸ್ಟೇಟ್

Latest News

ಉಬರ್ ಈಟ್ಸ್​ ವ್ಯವಹಾರ ಸ್ವಾಧೀನ ಪಡಿಸಿಕೊಂಡ ಜೊಮ್ಯಾಟೋ | ಭಾರತದಲ್ಲಿ ವಹಿವಾಟು ಕೊನೆಗೊಳಿಸಿದ ಉಬರ್ ಈಟ್ಸ್​

ನವದೆಹಲಿ: ಆಲ್ ಸ್ಟಾಕ್ ಡೀಲ್ ಮೂಲಕ ಉಬರ್ ಈಟ್ಸ್​ನ ವ್ಯವಹಾರವನ್ನು ಭಾರತದಲ್ಲಿ ಸಂಪೂರ್ಣವಾಗಿ ಸ್ವಾಧೀನ ಪಡಿಸಿಕೊಂಡಿರುವುದಾಗಿ ಜೊಮ್ಯಾಟೋ ಮಂಗಳವಾರ ಘೋಷಿಸಿದೆ. ಈ ಮೂಲಕ...

ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ಹೂಡಿಕೆದಾರರಿಗೆ ಹಣ ವಾಪಸ್

ಬೆಂಗಳೂರು: ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ನಲ್ಲಿ ಹೂಡಿಕೆ ಮಾಡಿದ್ದವರು ಹಣ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಂಚನೆಗೆ ಒಳಗಾದ ದೂರುದಾರರು ಜು.31ರವರೆಗೆ ಅರ್ಜಿ ಸಲ್ಲಿಸಬಹುದು. ದೇಶವ್ಯಾಪಿ...

ಚಿತ್ರದುರ್ಗ: ರಾಜ್ಯ ಕಟ್ಟಡ ಹಾಗೂ ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು. ಹಳೇ ಮಿಡ್ಲ್...

ಯಾದಗಿರಿ ಬಸ್​ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್​ ಪತ್ತೆ; ಆತಂಕವಿಲ್ಲ ಎಂದ ತಪಾಸಣೆ ನಡೆಸಿದ ಪೊಲೀಸರು

ಯಾದಗಿರಿ: ಇಲ್ಲಿನ ಕೇಂದ್ರ ಬಸ್​ನಿಲ್ದಾಣ ಮತ್ತು ಅಜೀಜ್​ ಮಸೀದಿ ಬಳಿ ತಲಾ ಒಂದೊಂದು ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು ಆತಂಕ ಸೃಷ್ಟಿಯಾಗಿತ್ತು. ಮಂಗಳೂರಿನಲ್ಲಿ ಬಾಂಬ್ ಪತ್ತೆ ಹಿನ್ನೆಲೆಯಲ್ಲಿ...

ಸೆನ್ಸೆಕ್ಸ್​ 200ಕ್ಕೂ ಹೆಚ್ಚು ಅಂಶ ಕುಸಿತ; ನಿಫ್ಟಿ 12,200ರಲ್ಲಿ ವಹಿವಾಟು ಶುರು

ಮುಂಬೈ: ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ50ಗಳು ಮಂಗಳವಾರದ ವಹಿವಾಟನ್ನು ಕುಸಿತದೊಂದಿಗೆ...

|ದೇವರಾಜ್ ಎಲ್. ಬೆಂಗಳೂರು

ದೇಶದಲ್ಲಿ 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟು ಅಮಾನ್ಯೀಕರಣ ಘೋಷಣೆಯಾಗಿ ಎರಡು ವರ್ಷಗಳು ಕಳೆದಿವೆ. ನೋಟ್ ಬ್ಯಾನ್​ನಿಂದ ಹೆಚ್ಚಿನ ನಷ್ಟ ಅನುಭವಿಸಿದ್ದ ರಿಯಲ್ ಎಸ್ಟೇಟ್ ಕ್ಷೇತ್ರದ ವಹಿವಾಟು ಈಗ ಚೇತರಿಸಿಕೊಳ್ಳುತ್ತಿದೆ.

ಕಳೆದ ಎರಡು ವರ್ಷಗಳಲ್ಲಿ ಬಂಡವಾಳ ಹೂಡಿಕೆದಾರರಿಗೆ ಲಾಭ-ನಷ್ಟದ ಸಮಸ್ಯೆ ಕಾಡಿತ್ತು. ನೋಟು ಅಮಾನ್ಯೀಕರಣದ ನಂತರ ಬಂದ ಜಿಎಸ್​ಟಿ, ರೇರಾ ಕೂಡ ರಿಯಲ್ ಎಸ್ಟೇಟ್ ಮೇಲೆ ಮತ್ತಷ್ಟು ಪರಿಣಾಮ ಬೀರಿತ್ತು. ಮತ್ತೊಂದೆಡೆ ಭಾರಿ ಮಳೆಯಿಂದಾಗಿ ಬೆಂಗಳೂರಿನ ಹೊರ ವಲಯದ ನಗರ ಪ್ರದೇಶಗಳು ಮುಳುಗಡೆಯಾಗಿ ರಿಯಲ್ ಎಸ್ಟೇಟ್ ಮತ್ತೆ ನೆಲಕಚ್ಚುವಂತೆ ಮಾಡಿತ್ತು. ಆದರೆ, ಅದೆಲ್ಲವನ್ನೂ ಮೀರಿ ರಿಯಾಲ್ಟಿ ಕ್ಷೇತ್ರ ಮತ್ತೆ ರೆಕ್ಕೆ ಬಿಚ್ಚಿದೆ.

ರಿಯಲ್ ಎಸ್ಟೇಟ್​ನಲ್ಲಿ ನೋಟಿನ ವಹಿವಾಟು ಹೆಚ್ಚಾಗಿರುತ್ತದೆ. ನೋಟು ಅಮಾನ್ಯೀಕರಣದ ಶಾಕ್​ಗೆ ಒಳಗಾದ ಜನರು ತಮ್ಮ ಬಳಿ ಇರುವ ಹಳೇ ನೋಟುಗಳ ಬದಲಾವಣೆ ಕಡೆ ಹೆಚ್ಚಿನ ಗಮನ ನೀಡುತ್ತಿದ್ದರೇ ಹೊರತು ರಿಯಲ್ ಎಸ್ಟೇಟ್ ಕಡೆ ಅಲ್ಲ. ಅಂತಿಮವಾಗಿ ರಿಯಲ್ ಎಸ್ಟೇಟ್ ಗ್ರಾಹಕರು ಪ್ರತಿನಿತ್ಯ ಬ್ಯಾಂಕ್​ಗಳ ಮುಂದೆ ನಿಂತು ನೋಟು ಪಡೆಯುವಲ್ಲೇ ದಿನಗಳನ್ನು ಕಳೆದು ಬಿಟ್ಟರು. ದುಡ್ಡಿನ ಕಂತೆಯ ಮೇಲೆ ವ್ಯವಹಾರ ನಡೆಸುತ್ತಿದ್ದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೆಚ್ಚಿನ ಹೊಡೆತ ಬಿದ್ದ ಸ್ಥಳಗಳ ಪೈಕಿ ದೆಹಲಿ ಮೊದಲಿನ ಸ್ಥಾನ ಪಡೆದರೆ, ಮುಂಬೈ, ಬೆಂಗಳೂರು, ಹೈದರಾಬಾದ್ ಆನಂತರದ ಸ್ಥಾನಗಳನ್ನು ಪಡೆದವು. 2017ರ ಮಾರ್ಚ್​ನಲ್ಲಿ ಆಸ್ತಿ ಖರೀದಿಸುವುದು ಮತ್ತು ಮಾರಾಟ ಮಾಡುವುದಕ್ಕೆ ದೊಡ್ಡ ಬ್ರೇಕ್ ಬಿತ್ತು. ಇದು ಈ ಉದ್ಯಮದ ಮೇಲೆ ಉಂಟಾದ ಆಘಾತವಾಗಿತ್ತು. ಬ್ಯಾಂಕ್​ಗಳು ಸಹ ಸಾಲ ನೀಡುವುದಕ್ಕೆ ಹಿಂದೇಟು ಹಾಕಿದವು. ಇದರ ಪರಿಣಾಮ 2016ರ ಮೂರನೇ ತ್ರೖೆಮಾಸಿಕಕ್ಕೆ ಹೋಲಿಕೆ ಮಾಡಿದರೆ, 2016ರ ನಾಲ್ಕನೇ ತ್ರೖೆಮಾಸಿಕದಲ್ಲಿ ಶೇ.45 ಕ್ಕೆ ಕುಸಿಯಿತು. ಹೊಸದಾಗಿ ಮನೆ, ನಿವೇಶನ, ಫ್ಲ್ಯಾಟ್ ಖರೀದಿಸುವುದು ಮತ್ತು ಮಾರಾಟ ಮಾಡುವುದಕ್ಕೆ ಬ್ರೇಕ್ ಬಿತ್ತು. ಕೆಲ ತಿಂಗಳುಗಳ ನಂತರ ಇದು ಸುಧಾರಿಸಿಕೊಳ್ಳುವುದರೊಂದಿಗೆ ಬಿಲ್ಡರ್​ಗಳ ಮುಖದಲ್ಲಿ ಮಂದಹಾಸ ಮೂಡಿತ್ತು.

ಮೆಟ್ರೋದಿಂದಲೂ ರಿಯಾಲ್ಟಿ ಕುಸಿದಿತ್ತು

ಬೆಂಗಳೂರಿಗೆ ‘ನಮ್ಮ ಮೆಟ್ರೋ’ ಬಂದಿದ್ದರಿಂದ ಆರಂಭದಲ್ಲಿ ರಿಯಲ್ ಎಸ್ಟೇಟ್ ವಹಿವಾಟು ಕುಸಿಯಲು ಕಾರಣವಾಗಿತ್ತು. 4,410 ಕೋಟಿ ರೂ. ವೆಚ್ಚದಲ್ಲಿ ರಸ್ತೆ ವಿಸ್ತರಣೆಗೆ ಮುಂದಾಗಿದ್ದು. ಬಹುತೇಕರು ಆಸ್ತಿ ಕಳೆದುಕೊಳ್ಳುವ ಭಯದಲ್ಲಿದ್ದರು. ಇದರಿಂದಾಗಿ ಹೊಸದಾಗಿ ಪ್ರಾಜೆಕ್ಟ್ ಗಳ ಆರಂಭದ ವಿಚಾರದಲ್ಲಿ 2016ರಲ್ಲಿ ನಾಲ್ಕನೇ ತ್ರೖೆಮಾಸಿಕ ವನ್ನು 3ನೇ ತ್ರೖೆಮಾಸಿಕಕ್ಕೆ ಹೋಲಿಕೆ ಮಾಡಿದರೆ, ಶೇ.65 ಕುಸಿದಿತ್ತು. ಮೊದಲ ಹಂತದ ಮೆಟ್ರೋ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಮುಕ್ತವಾದ ಬಳಿಕ ಕುಸಿದಿದ್ದ ರಿಯಾಲ್ಟಿ ವಹಿವಾಟಿಗೆ ಮತ್ತೆ ಶುಕ್ರದೆಸೆ ಆರಂಭವಾಗಿತ್ತು.

ಬೆಂಗಳೂರು ಪ್ರದೇಶ

ಬೆಂಗಳೂರು ಪ್ರದೇಶದಲ್ಲಿ ಉತ್ತರ ಮತ್ತು ಪಶ್ಚಿಮ ವಲಯಗಳಲ್ಲಿ ರಿಯಲ್ ಎಸ್ಟೇಟ್ ಹೆಚ್ಚು ಬೆಳವಣಿಗೆ ಸಾಧಿಸುವ ಪ್ರದೇಶವಾಗಿತ್ತು. ಆದರೆ, ನೋಟು ಅಮಾನ್ಯೀಕರಣದ ಪರಿಣಾಮ ಮೊದಲೆರಡು ಮತ್ತು 3 ತಿಂಗಳು ಮಾರುಕಟ್ಟೆ ಮೌಲ್ಯ ಕುಸಿಯಿತು. ಹೊಸದಾಗಿ ಯಾವುದೇ ಪ್ರಾಜೆಕ್ಟ್​ಗಳು ತಲೆ ಎತ್ತಲಿಲ್ಲ. ಈ ಹಿಂದೆ ಅಲ್ಪ-ಸ್ವಲ್ಪ ಮುಂಗಡ ಹಣ ಕೊಟ್ಟು ನಿವೇಶನ ಖರೀದಿಗೆ ಮುಂದಾಗಿದ್ದ ಗ್ರಾಹಕರು ಇದನ್ನೇ ಬಂಡವಾಳವಾಗಿಸಿಕೊಂಡು ಚೌಕಾಸಿಗೆ ಮುಂದಾದರು. ಆದರೆ, ಹೊಸ ನೋಟುಗಳ ವಹಿವಾಟು ಹೆಚ್ಚಾದಂತೆಲ್ಲ ನಿಧಾನವಾಗಿ ರಿಯಲ್ ಎಸ್ಟೇಟ್ ವಹಿವಾಟು ಕೂಡ ಗರಿಬಿಚ್ಚಿತ್ತು.

ಅರ್ಧಕ್ಕೆ ನಿಂತ ಪ್ರಾಜೆಕ್ಟ್

ನೋಟು ಅಮಾನ್ಯೀಕರಣದ ಮೊದಲು ಸಾಕಷ್ಟು ಪ್ರದೇಶಗಳಲ್ಲಿ ಹೊಸ ಕಟ್ಟಡಗಳ ನಿರ್ಮಾಣ ಪ್ರಗತಿಯಲ್ಲಿದ್ದವು. ಆದರೆ, ನೋಟು ಅಮಾನ್ಯೀಕರಣವಾದ ತಕ್ಷಣವೇ ಕಟ್ಟಡ ಕಾಮಗಾರಿ ಸಹ ಸ್ಥಗಿತವಾಯಿತು. ಇದಕ್ಕೆ ಪ್ರಮುಖ ಕಾರಣ ಕಚ್ಚಾ ಸಾಮಗ್ರಿಗಳ ಸರಬರಾಜಿನಲ್ಲಿನ ವ್ಯತ್ಯಯವಾಗಿದ್ದು. ನಿರ್ಮಾಣ ಹಂತದಲ್ಲಿದ್ದ

ಅಪಾರ್ಟ್​ವೆುಂಟ್​ಗಳ ಪ್ರಮಾಣ 2017ರಲ್ಲಿ ಶೇ.22ಕ್ಕೆ ಇಳಿಕೆ ಆಯ್ತು. 2016ರಲ್ಲಿ ಇದರ ಪ್ರಮಾಣ ಶೇ.36 ಇತ್ತು. 2018ರ ವೇಳೆ ಇದರ ಪ್ರಮಾಣ ಸಹಜ ಸ್ಥಿತಿಗೆ ಮರಳಿದೆ ಎನ್ನುತ್ತಾರೆ ಆರ್ಥಿಕ ತಜ್ಞರು.

 

ವಿಡಿಯೋ ನ್ಯೂಸ್

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...