ನಕಲಿ ಪಾಸ್​ಪೋರ್ಟ್​ ತೋರಿಸಿದ ನೇಪಾಳ ಯುವತಿ ಬಂಧನ

ಬೆಂಗಳೂರು: ನಕಲಿ ಪಾಸ್​ಪೋರ್ಟ್​ ಬಳಸಿ ವಿದೇಶಕ್ಕೆ ಹೊರಟಿದ್ದ ನೇಪಾಳ ಮೂಲದ ಯುವತಿಯನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಟಮಾಂಗ್​ ರಬೀನಾ (22) ಬೆಂಗಳೂರಿನಿಂದ ಶಾರ್ಜಾಗೆ ತೆರಳುತ್ತಿದ್ದಳು. ಇಮಿಗ್ರೇಷನ್​ ಕ್ಲಿಯರೆನ್ಸ್​ನವರು ಪಾಸ್​ಪೋರ್ಟ್​ ಪರಿಶೀಲಿಸಿದಾಗ ಅದು ನಕಲಿ ಎಂದು ಅಧಿಕಾರಿಗಳಿಗೆ ಅನುಮಾನ ಬಂದಿದೆ. ನೇಪಾಳದ ಎಂಬಸಿಗೆ ಕರೆ ಮಾಡಿ ವಿಚಾರಿಸಿದಾಗ ನಕಲಿ ಪಾಸ್​ಪೋರ್ಟ್​ ಎಂಬುದು ಖಚಿತಗೊಂಡಿದೆ. ಯುವತಿಯನ್ನು ಕೆಐಎ ಅಧಿಕಾರಿಗಳ ವಶಕ್ಕೆ ಪಡೆದಿದ್ದಾರೆ.