More

  ಈ ಕಾಲ್​ ಸೆಂಟರೇ ನಕಲಿ, ವಂಚನೆಯೇ ಇವರಿಗೆ ಉದ್ಯೋಗ!; 42 ವಂಚಕರ ಪೈಕಿ 16 ಮಂದಿ ಮಹಿಳೆಯರು!

  ನವದೆಹಲಿ: ಸಾಮಾನ್ಯವಾಗಿ ತಕ್ಷಣಕ್ಕೆ ಏನಾದರೂ ಸಹಾಯ ಬೇಕು ಎಂದರೆ ಕಾಲ್​ ಸೆಂಟರ್​ಗೆ ಸಂಪರ್ಕ ಮಾಡಿ ನೆರವು ಕೋರುವುದು ಸಹಜ. ಅಂಥ ಕಾಲ್​ ಸೆಂಟರ್​ ನಕಲಿಯಾಗಿದ್ದರೆ, ಕರೆ ಮಾಡಿದವರು/ ಸ್ವೀಕರಿಸಿದವರು ಕೆಲವೇ ನಿಮಿಷಗಳಲ್ಲಿ ಮಾತ್​​ಮಾತಲ್ಲೇ ಮೋಸ ಹೋಗಿರುತ್ತಾರೆ. ಅಂಥದ್ದೊಂದು ನಕಲಿ ಕಾಲ್​ ಸೆಂಟರ್​ವೊಂದನ್ನು ಪೊಲೀಸರು ಪತ್ತೆ ಹಚ್ಚಿದ್ದು, 42 ಮಂದಿ ವಂಚಕರನ್ನು ಬಂಧಿಸಿದ್ದಾರೆ.

  ಇಲ್ಲೊಂದಷ್ಟು ಮಂದಿ ಕಾನೂನುಕ್ರಮ ಜರುಗಿಸುವ ಏಜೆನ್ಸಿ ಥರ ವಿದೇಶಿಯರನ್ನೇ ಟಾರ್ಗೆಟ್ ಮಾಡಿ ಹಣ ಸುಲಿಗೆ ಮಾಡುವ ಸಲುವಾಗಿ ಕಾಲ್​ ಸೆಂಟರ್​ವೊಂದನ್ನು ಏರ್ಪಾಡು ಮಾಡಿಕೊಂಡು, ಆ ಮೂಲಕ ವಂಚನೆ ಎಸಗುತ್ತಿದ್ದರು. ದೆಹಲಿಯ ಪೀರಾಗರ್ಹಿ ಎಂಬಲ್ಲಿದ್ದ ಕಾಲ್​ ಸೆಂಟರ್​ ಮೇಲೆ ದಾಳಿ ಮಾಡಿದ ಸೈಬರ್ ಸೆಲ್​ ಪೊಲೀಸರು, 42 ಮಂದಿಯನ್ನು ವಶಕ್ಕೆ ಪಡೆದಿದ್ದು, ಆ ಪೈಕಿ 16 ಮಂದಿ ಯುವತಿಯರು. ಇವರು ಹಣವನ್ನು ಬಿಟ್​ಕಾಯಿನ್ ಹಾಗೂ ಗಿಫ್ಟ್​ ಕಾರ್ಡ್​ ಮೂಲಕ ಟ್ರಾನ್ಸ್​ಫರ್ ಮಾಡಿಸಿಕೊಂಡು ವಂಚಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

  ಇದನ್ನೂ ಓದಿ: ಕೈಮುಗಿದು ಬೇಡಿಕೊಳ್ಳುತ್ತೇನೆ, ಯಾರೂ ಗೋವನ್ನು ತಿನ್ನಬೇಡಿ; ಸಿ.ಎಂ. ಇಬ್ರಾಹಿಂ ಮನವಿ

  ಸೋಷಿಯಲ್​ ಸೆಕ್ಯುರಿಟಿ ಅಡ್ಮಿನಿಸ್ಟ್ರೇಷನ್​, ಡ್ರಗ್​ ಎನ್​ಫೋರ್ಸ್​ಮೆಂಟ್ ಅಡ್ಮಿನಿಸ್ಟ್ರೇಷನ್​ ಮತ್ತು ಯುಎಸ್ ಮಾರ್ಷಲ್ಸ್​ ಸರ್ವಿಸ್.. ಹೀಗೆ ನಾನಾ ಸಂಸ್ಥೆಗಳ ಹೆಸರಿನಲ್ಲಿ ವಿದೇಶಿಯರಿಗೆ ಕರೆ ಮಾಡುತ್ತಿದ್ದ ಈ ವಂಚಕರು, ವಿದೇಶಿಯರನ್ನು ಬೆದರಿಸಿ ಹಣ ಟ್ರಾನ್ಸ್​ಫರ್ ಮಾಡಿಸಿಕೊಳ್ಳುತ್ತಿದ್ದರು. ಅಪರಾಧ ಪ್ರಕರಣಗಳಲ್ಲಿ ನಿಮ್ಮ ಸುಳಿವು ಸಿಕ್ಕಿದೆ, ನಿಮ್ಮ ಖಾತೆ ಮೂಲಕ ಕಾನೂನುಬಾಹಿರ ವಹಿವಾಟು ನಡೆದಿದೆ ಎಂಬಿತ್ಯಾದಿ ಆರೋಪಗಳನ್ನು ಹೊರಿಸಿ, ತಕ್ಷಣವೇ ನಿಮ್ಮ ಎಲ್ಲ ಖಾತೆ ಸೀಜ್ ಮಾಡುವ, ಬಂಧನವನ್ನೂ ಮಾಡುವ ಮೂಲಕ ನಿಮ್ಮ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದೆಲ್ಲ ಹೇಳಿ ತಮ್ಮ ಕರೆಗೆ ಪ್ರತಿಕ್ರಿಯಿಸಿದವರನ್ನು ಬೆದರಿಸುತ್ತಿದ್ದರು ಎಂದು ಸೈಬರ್ ಕ್ರೈಮ್​ ಡಿಸಿಪಿ ಅನ್ಯೇಶ್ ರಾಯ್​ ತಿಳಿಸಿದ್ದಾರೆ.

  ಈ ನಕಲಿ ಕಾಲ್​ ಸೆಂಟರ್​ನಲ್ಲಿ ಕೆಲಸ ಮಾಡುತ್ತಿರುವವರಿಗೆ 25 ರಿಂದ 75 ಸಾವಿರದ ವರೆಗೆ ವೇತನ ನಿಗದಿ ಮಾಡಿದ್ದು, ಬೇರೆ ರೀತಿಯ ಇನ್​ಸೆಂಟಿವ್ಸ್ ಕೂಡ ಇವೆ. ಬೇರೆಬೇರೆ ಕಡೆಯಿಂದ ಕೆಲಸ ಅರಸಿ ದೆಹಲಿಗೆ ಬರುವ ಪದವೀಧರರನ್ನು ಇದಕ್ಕೆ ದಾಳವಾಗಿಸಿ ಉದ್ಯೋಗ ಕೊಡುತ್ತಿದ್ದರು. ಅವರಿಂದಲೇ ಮತ್ತಷ್ಟು ಜನರನ್ನು ಉದ್ಯೋಗಕ್ಕೆ ಸೇರಿಸಿಕೊಳ್ಳುತ್ತಿದ್ದರು. ಹೀಗೆ ಕರೆ ಮೂಲಕ ಜನರನ್ನು ವಂಚಿಸುತ್ತಿದ್ದ ಈ ತಂಡ ಕಳೆದ 3 ವರ್ಷಗಳಲ್ಲಿ ದಿನಕ್ಕೆ ಇಬ್ಬರು ಮೂವರಂತೆ ಇದುವರೆಗೆ ಹಲವರಿಗೆ ಮೋಸ ಮಾಡಿದ್ದಾರೆ. ಈ ಬಗ್ಗೆ ಇನ್ನಷ್ಟು ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

  ಇದನ್ನೂ ಓದಿ: ನೀವು ಪದವೀಧರರಾ? ಹಾಗಿದ್ದರೆ ಏರ್​ಪೋರ್ಟ್​ ಅಥಾರಿಟಿಯಲ್ಲಿವೆ 368 ಹುದ್ದೆಗಳು

  ‘ಅಯ್ಯೋ ನಿಂಗೆ ಕ್ಯಾನ್ಸರ್​ ಇದೆ! ಟ್ರೀಟ್ಮೆಂಟ್​ ತಗೊಳ್ದಿದ್ರೆ ಸತ್ತೇ ಹೋಗ್ತೀಯ’ ಅಂತ ಹೇಳುತ್ತಲೇ 1.47 ಕೋಟಿ ರೂ. ವಂಚಿಸಿದ ವೈದ್ಯೆ!

  ಬಿಜೆಪಿ- ಜೆಡಿಎಸ್​ ವಿಲೀನ ಆಗುತ್ತಾ? ಸಿಎಂ ಯಡಿಯೂರಪ್ಪ ಏನೆಂದ್ರು ನೋಡಿ…

  ಸೆಕ್ಸ್​ ವರ್ಕರ್​ ಇರಲಿಲ್ಲ, ಹೋಟೆಲ್​ ಸಿಬ್ಬಂದಿಯನ್ನೇ ರೇಪ್​ ಮಾಡಿಬಿಟ್ಟರು! ವಿಚಾರಣೆ ವೇಳೆ ಹೊರಬಿತ್ತು ಭಯಾನಕ ರಹಸ್ಯ!

  ಗಂಡನ ರಾಸಲೀಲೆ ವೃತ್ತಾಂತ ಬಿಚ್ಚಿಟ್ಟ ಹೆಂಡತಿ! ಈತನ ಚಾನ್ಸ್​ ಆಸೆಗೆ ಬಲಿಯಾದ್ರೆ ಬದುಕೇ ನರಕ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts