ಪಡುಬಿದ್ರಿ: ದೈವ ದೇವರ ಬಗ್ಗೆ ಮೊದಲಿನಿಂದಲೂ ನಂಬಿಕೆ ಹೊಂದಿದವನಾಗಿದ್ದು, ಮಾರಿಯಮ್ಮ ದೇವಳ ಕಂಡಾಗ ದೈವ ದೇವರ ಮೇಲಿನ ವಿಶ್ವಾಸ ದುಪ್ಪಟ್ಟುಗೊಂಡಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಶನಿವಾರ ಪತ್ನಿಯೊಂದಿಗೆ ಭೇಟಿ ನೀಡಿ ಮಾರಿಯಮ್ಮ ಹಾಗೂ ಉಚ್ಚಂಗಿ ದೇವಿ ದರ್ಶನ ಪಡೆದು ಕಾಮಗಾರಿ ವೀಕ್ಷಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಕಲೆ, ವಾಸ್ತುಶಿಲ್ಪದಿಂದ ಅದ್ಭುತವಾಗಿ ನಿರ್ಮಾಣಗೊಂಡ ದೇವಳ ಮನಸ್ಸಿಗೆ ಪ್ರಸನ್ನವಾಗುವಂತಿದೆ. ದೇವರ ಅನುಗ್ರಹವಿದ್ದರೆ ಏನು ಬೇಕಾದರೂ ಆಗಬಹುದು ಎನ್ನುವುದನ್ನು ಇಲ್ಲಿ ಕಾಣಬಹುದು ಎಂದರು.
ಅನುಗ್ರಹ ಪ್ರಸಾದ ನೀಡಿ ಸಚಿವರನ್ನು ಗೌರವಿಸಲಾಯಿತು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರ್ಮೆ ಸುರೇಶ್ ಶೆೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ತಹಸೀಲ್ದಾರ್ ಪ್ರತಿಭಾ ಆರ್., ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಕೆ.ರವಿಕಿರಣ್, ಬ್ರಹ್ಮಕಲಶೋತ್ಸವ ಸಮಿತಿ ಕಾಯಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಶೇಖರ ಸಾಲ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಪಕ್ಷದ ಪ್ರಮುಖರಾದ ಉದಯಕುಮಾರ್ ಶೆಟ್ಟಿ, ನಯನ ಗಣೇಶ್, ಶಿಲ್ಪಾ ಜಿ.ಸುವರ್ಣ, ಗೀತಾಂಜಲಿ ಎಂ.ಸುವರ್ಣ, ರೇಷ್ಮಾ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಶ್ರೀಕಾಂತ ನಾಯಕ್, ಜಿತೇಂದ್ರ ಶೆಟ್ಟಿ ಉದ್ಯಾವರ, ಗೋಪಾಲಕೃಷ್ಣ ರಾವ್, ನವೀನ್ ಎಸ್.ಕೆ., ಸುಮಾ ಶೆಟ್ಟಿ, ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಉಪಾಧ್ಯಕ್ಷೆ ಸರಿತಾ ಶಿವಾನಂದ್ ಮತ್ತಿತರರು ಉಪಸ್ಥಿತರಿದ್ದರು.

ಸಾಮಾನ್ಯವಾಗಿ ಕೇಂದ್ರದ ಅನುದಾನ ಬಿಡುಗಡೆಗೆ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಕೆಯಾಗಬೇಕು. ಈವರೆಗೆ ರಾಜ್ಯ ಸರ್ಕಾರದಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ. ಸ್ಥಳೀಯ ಶಾಸಕರು ಹಾಗೂ ಸಂಸದರು ಅನುದಾನಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ದೇವಳಕ್ಕೆ ಸಹಾಯ ಮಾಡುವಂತೆ ರಾಜ್ಯ ಮುಜರಾಯಿ ಸಚಿವರಿಗೂ ನಾನು ವಿನಂತಿ ಮಾಡುತ್ತೇನೆ. ಅನುದಾನ ಬಿಡುಗಡೆಗಾಗಿ ಎಲ್ಲ ರೀತಿಯ ಪ್ರಯತ್ನ ಮಾಡುತ್ತೇನೆ.
– ಪ್ರಲ್ಹಾದ ಜೋಶಿhttps://www.vijayavani.net/health-awareness-program-in-kota