ಜಾತ್ರೆಗಳು ಸಾಮರಸ್ಯದ ಕೊಂಡಿಗಳು

Fairs are links of harmony

ಲೋಕಾಪುರ: ಜಾತ್ರೆಗಳು ಸಮಾಜದ ಸಾಮರಸ್ಯ ಬೆಸೆಯುವ ಕೊಂಡಿಗಳಾಗಿವೆ ಎಂದು ಕರ್ನಾಟಕ ರಾಜ್ಯ ಸಹಕಾರ ಕುರಿ ಮಹಾಮಂಡಳ ಉಪಾಧ್ಯಕ್ಷ ಕಾಶಿನಾಥ ಹುಡೇದ ಹೇಳಿದರು.

blank

ಪಟ್ಟಣದ ವೆಂಕಟಾಪುರ ಓಣಿಯ ಕಾಶಿಲಿಂಗೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಕಲಾ ಸಿಂಚನ ಮೆಲೋಡಿಸ್ ಅವರಿಂದ ಜಾನಪದ ಹಾಸ್ಯ ರಸಮಂಜರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಶಿಲಿಂಗೇಶ್ವರ ದೇವಸ್ಥಾನ ನಾಡು- ನುಡಿಗೆ ಅಪಾರ ಕೊಡುಗೆ ನೀಡಿದೆ. ಧಾರ್ಮಿಕ, ಸಾಮಾಜಿಕ ಹಿನ್ನಲೆ ಹೊಂದಿರುವ ಕುರುಬ ಸಮುದಾಯದ ಈ ಜಾತ್ರೆ ಭಕ್ತರಲ್ಲಿ ಜಾಗೃತಿ ಮೂಡಿಸಿದೆ ಎಂದರು.

ವಾಯುಪುತ್ರ ಸೌಹಾರ್ದ ಬ್ಯಾಂಕ್ ಅಧ್ಯಕ್ಷ ಲೋಕಣ್ಣ ಕತ್ತಿ ಮಾತನಾಡಿ, ಜಾತ್ರಾ ಮಹೋತ್ಸವಗಳು ಎಲ್ಲ ಸಮುದಾಯದವರನ್ನು ಒಗ್ಗಟ್ಟಿಸುವ ಸಾಮರಸ್ಯದ ಸಂಕೇತವಾಗಿವೆ. ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಮಾತ್ರ ನಮ್ಮ ಬದುಕಿಗೆ ನಿಜವಾದ ಅರ್ಥ ಬರುತ್ತದೆ. ಆದರೆ ಪ್ರಸ್ತುತ ದಿನಗಳಲ್ಲಿ ಜನರು ಧಾರ್ಮಿಕ ನೆಲೆಗಟ್ಟು ಕಳೆದುಕೊಳ್ಳುತ್ತಿರುವುದು ವಿಷಾದದ ಸಂಗತಿ ಎಂದರು.

ಅಂಜುಮನ್ ಇಸ್ಲಾಂ ಕಮೀಟಿ ಮಾಜಿ ಅಧ್ಯಕ್ಷ ಹಾಗೂ ಬಾಲಾಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಲ್ಲಾಸಾಬ ಯಾದವಾಡ ಹಾಗೂ ಕಾಶಿಲಿಂಗೇಶ್ವರ ಜೀರ್ಣೋದ್ಧಾರ ಸೇವಾ ಸಮಿತಿ ಅಧ್ಯಕ್ಷ ಮುತ್ತಪ್ಪ ಗಡ್ಡದವರ ಮಾತನಾಡಿದರು.

ಹಿರಿಯ ಪಾರಿಜಾತ ಕಲಾವಿದ ಹಯತ್‌ಸಾಬ ಮದರಖಾನ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದುರಗವ್ವ ಕಾಳಮ್ಮನವರ, ದುರಗವ್ವ ರೊಡ್ಡಪ್ಪನವರ, ಕನ್ನಡ ಜಾನಪದ ಪರಿಷತ್ ಮಹಿಳಾ ವಲಯ ಘಟಕದ ಅಧ್ಯಕ್ಷ ರೇಖಾ ನರಹಟ್ಟಿ, ಕಲಾವಿದ ಲೋಕಣ್ಣ ಸುರಪುರ ಅವರನ್ನು ಜಾತ್ರಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಪೂಜಾರಿಗಳಾದ ಸಿದ್ದಪ್ಪ ಗಡ್ಡದವರ, ಮುತ್ತಪ್ಪ ಗಡ್ಡದವರ ನೇತೃತ್ವ ವಹಿಸಿದ್ದರು. ವೇದಿಕೆಯಲ್ಲಿ ಪವನ ಉದಪುಡಿ, ಯಮನಪ್ಪ ಹೊರಟ್ಟಿ, ಪ್ರಕಾಶ ಚುಳಕಿ, ಲಕ್ಷ್ಮಣ ಮಾಲಗಿ, ಗಣಪತಿ ಗಸ್ತಿ, ಗೋವಿಂದ ಕೌಲಗಿ, ಲಿಂಗಾನಂದ ಹಿರೇಮಠ, ಬೀರಪ್ಪ ಮಾಯಣ್ಣವರ, ಪ್ರಮೋದ ತೆಗ್ಗಿ, ಲೋಕಣ್ಣ ಉಳ್ಳಾಗಡ್ಡಿ, ಕಿರಣ ವಾಸನದ, ಮಹೇಶ ಹುಗ್ಗಿ, ಅರುಣ ನರಗುಂದ, ರೆಹಮಾನ್ ತೊರಗಲ್, ಸಿದ್ದು ಕಿಲಾರಿ, ರಮೇಶ ಕಂಬಾರ, ಕೃಷ್ಣ ಭಜಂತ್ರಿ, ಅಯ್ಯಪ್ಪಗೌಡ ಪಾಟೀಲ, ಮಹೇಶ ಮಳಲಿ, ಸೈದುಸಾಬ ನಧಾಪ, ಕುಮಾರ ಕಾಳಮ್ಮನವರ, ಉದಯ ಶೆಟ್ಟಿ, ಅಬ್ದುಲ್ ರಜಾಕ ಮತ್ತಿತರರಿದ್ದರು. ಕೆ.ಪಿ.ಯಾದವಾಡ ನಿರೂಪಿಸಿದರು, ಮುತ್ತು ತುಂಗಳ ವಂದಿಸಿದರು.

Share This Article
blank

ನಿಮ್ಮ ಬೆಳಿಗ್ಗೆಯನ್ನು ಹೀಗೆ ಆರಂಭಿಸಿ.. ಈ ಅಭ್ಯಾಸಗಳು ನಿಮ್ಮ ಜೀವನವನ್ನು ಬದಲಾಯಿಸುತ್ತವೆ..! healthy morning

healthy morning: ನಾವು ನಮ್ಮ ಬೆಳಿಗ್ಗೆಯನ್ನು ಹೇಗೆ ಪ್ರಾರಂಭಿಸುತ್ತೇವೆ ಎಂಬುದು ದಿನವಿಡೀ ನಮ್ಮ ಆಲೋಚನೆಗಳು ಮತ್ತು…

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

blank