ಮುಷ್ಕರ ತಿರಸ್ಕಾರ

Latest News

ಉಚಿತ ಇಸಿಜಿ ಯಂತ್ರ ಕೊಡುಗೆ

ಕಲಾದಗಿ: ಗ್ರಾಮೀಣ ಪ್ರದೇಶದ ಜನರಿಗೆ ಹೃದ್ರೋಗಕ್ಕೆ ತಕ್ಷಣ ಸೂಕ್ತ ಮಾರ್ಗದರ್ಶನ ಹಾಗೂ ಚಿಕಿತ್ಸೆ ದೊರೆಯಬೇಕು ಎಂದು ಸದುದ್ದೇಶದಿಂದ ಮಣಿಪಾಲದ ಕಸ್ತೂರಾಬಾ ಆಸ್ಪತ್ರೆಯ ಖ್ಯಾತ...

ನಕ್ಸಲರು ನಡೆಸಿದ ದಾಳಿಯಲ್ಲಿ ಮೂವರು ಪೊಲೀಸರು ಹುತಾತ್ಮ

ರಾಂಚಿ: ಚುನಾವಣೆಗೆ ಹೊಸ್ತಿಲಲ್ಲಿರುವ ಜಾರ್ಖಂಡ್​ನಲ್ಲಿ ನಕ್ಸಲರು ನಡೆಸಿದ ದಾಳಿಯಲ್ಲಿ ಮೂವರು ಪೊಲೀಸರು ಹುತಾತ್ಮರಾಗಿದ್ದಾರೆ. ಲಾಥೆಹಾರ್​ ಜಿಲ್ಲೆಯ ಛಾಂಡ್ವಾ ಪೊಲೀಸ್​ ಸ್ಟೇಷನ್ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ...

ಸಂಶೋಧನೆ ಸಮಾಜಮುಖಿ ಇರಲಿ

ಜಮಖಂಡಿ: ಸಂಶೋಧನೆ ಯಶಸ್ವಿಗೆ ಸೃಜನಶೀಲತೆ ಜತೆಗೆ ತಾಳ್ಮೆ, ನಿಷ್ಠೆ ಮತ್ತು ಶ್ರಮ ಅವಶ್ಯ. ಸಂಶೋಧನೆ ಸಮಾಜಮುಖಿಯಾಗಿರಬೇಕು ಎಂದು ಸಂಕೇಶ್ವರದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ...

ಜಿಪಂ ಸಿಇಒ ಕಚೇರಿಗೆ ರೈತರ ಮುತ್ತಿಗೆ

ಚಾಮರಾಜನಗರ: ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ನಡೆದಿದೆ ಎನ್ನಲಾದ ಅವ್ಯವಹಾರವನ್ನು ತನಿಖೆಗೊಳಪಡಿಸಬೇಕೆಂದು ಒತ್ತಾಯಿಸಿ ರೈತರ ಸಂಘದ ಕಾರ್ಯಕರ್ತರು ನಗರದ ಜಿಲ್ಲಾಡಳಿತ...

ಎಲ್ಲರಂತೆ ಸಮಾನವಾಗಿ ಬದುಕುವ ಹಕ್ಕು ಮಕ್ಕಳಿಗಿದೆ

ಯಳಂದೂರು: ಇಂದಿನ ಮಕ್ಕಳು ಮುಂದಿನ ಪ್ರಜೆಗಳು ಎಂಬ ನಾಣ್ಣುಡಿಯನ್ನು ಬದಲಿಸಿ ಇಂದಿನ ಮಕ್ಕಳು ಇಂದಿನ ಪ್ರಜೆಗಳು ಎಂಬುದಾಗಿ ಮಾರ್ಪಾಡು ಮಾಡಿಕೊಳ್ಳಬೇಕು ಎಂದು ಯರಗಂಬಳ್ಳಿ...

ಬೆಂಗಳೂರು: ಹತ್ತಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶದ 10 ಪ್ರಮುಖ ಕಾರ್ವಿುಕ ಸಂಘಟನೆಗಳ ನೇತೃತ್ವದಲ್ಲಿ ಕರೆ ನೀಡಲಾಗಿದ್ದ ಎರಡು ದಿನಗಳ ದೇಶವ್ಯಾಪಿ ಮುಷ್ಕರವನ್ನು ಜನತೆ ಮೊದಲ ದಿನವೇ ತಿರಸ್ಕರಿಸಿದ್ದಾರೆ. ಮಂಗಳವಾರ ಬೆಳಗ್ಗೆಯಿಂದಲೇ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಸಂಚಾರ ಸ್ಥಗಿತಗೊಳ್ಳುವ ಮುನ್ಸೂಚನೆ ನೀಡಿದ್ದ ಆಟೋ, ಬಸ್ಸು, ಟ್ಯಾಕ್ಸಿಗಳು ಸ್ವಲ್ಪ ತಡವಾಗಿ ರಸ್ತೆಗಿಳಿಯುವುದರೊಂದಿಗೆ ಪ್ರತಿಭಟನೆ ಕಾವು ಕಳೆದುಕೊಂಡಿತು. ಕೆಲವೆಡೆ ಪ್ರತಿಭಟನೆಗಳು ನಡೆದವಾದರೂ ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಎಡಪಕ್ಷಗಳ ಪ್ರಾಬಲ್ಯವಿರುವ ಕೇರಳ, ಪಶ್ಚಿಮ ಬಂಗಾಳದ ಕೆಲವೆಡೆ ಹಿಂಸಾಚಾರದ ಪ್ರಕರಣ ವರದಿಯಾಗಿದೆಯಾದರೂ ಒಟ್ಟಾರೆ ದೇಶದ ಜನರು ಮುಷ್ಕರವನ್ನು ತಿರಸ್ಕರಿಸಿದ್ದಾರೆ. ಇದರಿಂದಾಗಿ ಬುಧವಾರ ಪ್ರತಿಭಟನೆ ಹೊರತುಪಡಿಸಿ ಮುಷ್ಕರ ನಡೆ ಯುವುದು ಅನುಮಾನವಾಗಿದೆ.

ವೈದ್ಯ ಸೇವೆ ವ್ಯತ್ಯಯವಿಲ್ಲ

ರಾಜ್ಯದಲ್ಲಿನ ಎಲ್ಲ ಆಸ್ಪತ್ರೆ ಹಾಗೂ ಕ್ಲಿನಿಕ್​ಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದು, ಪ್ರತಿಭಟನೆಯ ಬಿಸಿ ರೋಗಿಗಳಿಗೆ ತಾಕಲಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಸೋಮವಾರವೇ ಎಲ್ಲ ವೈದ್ಯರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿತ್ತು. ಔಷಧ ಮಳಿಗೆಗಳೂ ತೆರೆದಿದ್ದವು. ಬುಧವಾರವೂ ವೈದ್ಯಕೀಯ ಸೇವೆ ಎಂದಿನಂತೆ ಇರಲಿದೆ.

ಇಂದು ಏನಾಗುತ್ತೆ?

ಬುಧವಾರವೂ ಮುಷ್ಕರ ಮುಂದುವರಿ ಸುವುದಾಗಿ ಸಂಘಟನೆಗಳು ಹೇಳಿರುವುದರಿಂದ ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಬಸ್ ಸಂಚಾರದಲ್ಲಿ ಸ್ವಲ್ಪ ಪ್ರಮಾಣದ ವ್ಯತ್ಯಯವಾಗುವ ಸಾಧ್ಯತೆಯಿದೆ. ಉಳಿದಂತೆ ಸಹಜ ಸ್ಥಿತಿ ಮುಂದುವರಿಯಲಿದೆ.

ಕೆಲವು ಶಾಲೆಗಳಿಗೆ ರಜೆ

ಮುಂಜಾಗ್ರತಾ ಕ್ರಮವಾಗಿ ಕೆಲ ಜಿಲ್ಲೆಗಳಲ್ಲಿ ಬುಧವಾರವೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದರೆ ಬೆಂಗಳೂರಿನಲ್ಲಿ ಕೆಲವು ಸಂಸ್ಥೆಗಳನ್ನು ಹೊರತುಪಡಿಸಿ ಉಳಿದ ಶಾಲಾ-ಕಾಲೇಜುಗಳು ಕಾರ್ಯನಿರ್ವಹಿಸಲಿವೆ.

ಟ್ಯಾಕ್ಸಿ, ಆಟೋ ಉಂಟು

ಮೆಟ್ರೋ, ಆಪ್ ಆಧಾರಿತ ಟ್ಯಾಕ್ಸಿ, ಆಟೋ ಸಂಚಾರ ಎಂದಿನಂತೆ ಇರಲಿದೆ.

ಅಂಗನವಾಡಿ ಸಹಾಯಕಿ ಸಾವು

ಮುಂಡಗೋಡ: ಮುಷ್ಕರ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸಿಐಟಿಯು ನೇತೃತ್ವದಲ್ಲಿ ಮಂಗಳವಾರ ನಡೆದ ಪ್ರತಿಭಟನಾ ಮೆರವಣಿಗೆ ಸಂದರ್ಭದಲ್ಲಿ ಕುಸಿದು ಬಿದ್ದು ಅಂಗನವಾಡಿ ಸಹಾಯಕಿಯೊಬ್ಬರು ಮೃತಪಟ್ಟಿದ್ದಾರೆ. ಶಾಂತಾ ಬಸವಣ್ಣೆಪ್ಪ ಚಕ್ರಸಾಲಿ(57) ಮೃತ ಮಹಿಳೆೆ. ಕಳೆದ 30 ವರ್ಷದಿಂದ ತಾಲೂಕಿನ ಶಿಡ್ಲಗುಂಡಿ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿದ್ದ ಅವರು ಕಾರ್ವಿುಕ ಸಂಘಟನೆಗಳ ಮುಷ್ಕರ ದಲ್ಲಿ ಭಾಗಿಯಾಗಿದ್ದರು. ಮೃತರಿಗೆ ಪತಿ, ಪುತ್ರ, ಇಬ್ಬರು ಪುತ್ರಿಯರಿದ್ದಾರೆ. ಪ್ರತಿಭಟನಾ ಮೆರವಣಿಗೆ ಸಾಗುತ್ತಿದ್ದಾಗ ತಾಲೂಕು ಪಂಚಾಯಿತಿ ಕಚೇರಿ ಮುಂದೆ ದಿಢೀರ್ ಕುಸಿದು ಬಿದ್ದರು. ತಕ್ಷಣವೇ ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆಂದು ವೈದ್ಯರು ತಿಳಿಸಿದ್ದಾರೆ.

ಜನಜೀವನ ಸುಗಮ

ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಂಗಳವಾರ ಬೆಳಗ್ಗೆ 5 ಗಂಟೆಯಿಂದಲೇ ಕೆಎಸ್​ಆರ್​ಟಿಸಿ, ಆಟೋ, ಬಿಎಂಟಿಸಿ, ಮೆಟ್ರೋ, ಆಪ್ ಆಧಾರಿತ ಟ್ಯಾಕ್ಸಿಗಳು ಎಂದಿನಂತೆ ಕಾರ್ಯಾಚರಣೆ ನಡೆಸಿದವು. ಪೆಟ್ರೋಲ್ ಬಂಕ್, ಮಾಲ್, ಚಿತ್ರಮಂದಿರ, ಹೋಟೆಲ್, ಇಂದಿರಾ ಕ್ಯಾಂಟಿನ್ ಹೀಗೆ ಹೆಚ್ಚಿನವುಗಳ ವ್ಯಾಪಾರ ವಹಿವಾಟು, ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣೆಯೂ ಎಂದಿನಂತಿತ್ತು. ಮುಂಜಾಗ್ರತಾ ಕ್ರಮವಾಗಿ ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ಹೆಚ್ಚು ಸಮಸ್ಯೆ ಆಗಲಿಲ್ಲ. ಐಟಿ ಕಂಪನಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಆಯ್ಕೆ ನೀಡಿದ್ದ ಕಾರಣದಿಂದ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಈ ಹಿನ್ನೆಲೆಯಲ್ಲಿ ಕೆಎಸ್​ಆರ್​ಟಿಸಿ, ಬಿಎಂಟಿಸಿ ಹಲವು ಟ್ರಿಪ್ ಕಡಿತಗೊಳಿಸಿದ್ದವು.

ಮುಷ್ಕರಕ್ಕೆ ನೈತಿಕ ಬೆಂಬಲವಿದೆ. ಬುಧವಾರ ಆಪ್ ಆಧಾರಿತ ಟ್ಯಾಕ್ಸಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

| ತನ್ವೀರ್ ಪಾಷಾ ಓಲಾ, ಊಬರ್ ಟ್ಯಾಕ್ಸಿ ಚಾಲಕರ ಸಂಘ

ತಟ್ಟಲಿಲ್ಲ ಕಾರ್ವಿುಕರ ಮುಷ್ಕರ ಬಿಸಿ

ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ 2 ದಿನಗಳ ಕಾಲ ಕರೆ ನೀಡಲಾಗಿದ್ದ ಮುಷ್ಕರಕ್ಕೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ನೀರಸ ಮತ್ತು ಕೆಲವೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 2ನೇ ದಿನವಾದ ಬುಧವಾರ ಮುಷ್ಕರ ನಡೆಯುವುದೇ ಅನುಮಾನವಾಗಿದ್ದು, ಹಲವು ಕಡೆ ಶಾಲಾ-ಕಾಲೇಜುಗಳು ಪ್ರಾರಂಭವಾಗಲಿವೆ. ಆದರೆ, ಹಾವೇರಿ ಜಾನಪದ ವಿವಿ ಹಾಗೂ ಹಂಪಿ ಕನ್ನಡ ವಿವಿ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಮುಂಜಾಗ್ರತಾ ಕ್ರಮವಾಗಿ ಮುಂದೂಡಿವೆ. ಇದೇ ವೇಳೆ, ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ ಅಂಗಡಿಯೊಂದನ್ನು ಬಲವಂತವಾಗಿ ಮುಚ್ಚಿಸಲು ಬಂದಿದ್ದ ಪ್ರತಿಭಟನಾಕಾರರಿಗೆ ಮಾಲೀಕ ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದು ಕೊಂಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಸ್ತೆಗಿಳಿದ ಕೆಲವೇ ಬಸ್​ಗಳು

ವಾಯವ್ಯ ರಾಜ್ಯ ರಸ್ತೆ ಸಾರಿಗೆ ನಿಗಮದ 3,178 ಬಸ್ ಪೈಕಿ ಕೇವಲ 114 ಬಸ್ ಹಾಗೂ ಈಶಾನ್ಯ ರಾಜ್ಯ ರಸ್ತೆ ಸಾರಿಗೆ ನಿಗಮದ 2,582 ಬಸ್ ಪೈಕಿ ಕೇವಲ 256 (ಶೇ.9.9) ಬಸ್​ಗಳು ರಸ್ತೆಗಿಳಿದಿದ್ದವು. ಮುಷ್ಕರದ ಸುದ್ದಿ ತಿಳಿದು ಜನರೇ ಪ್ರಯಾಣಕ್ಕೆ ಹಿಂದೇಟು ಹಾಕಿದ್ದಾರೆ ಎಂದು ಕೆಎಸ್​ಆರ್​ಟಿಸಿ ಕಾರ್ಯಾಚರಣೆ ವಿಭಾಗದ ಮುಖ್ಯ ಸಂಚಾರ ವ್ಯವಸ್ಥಾಪಕ ಆಂಟನಿ ಜಾರ್ಜ್ ವಿಜಯವಾಣಿಗೆ ತಿಳಿಸಿದ್ದಾರೆ. ಕೆಎಸ್​ಆರ್​ಟಿಸಿಯಲ್ಲಿ 2,513 ಮುಂಗಡವಾಗಿ ಕಾಯ್ದಿರಿಸಿದ ಸೀಟು ರದ್ದು ಮಾಡಿದ್ದು, 17.19 ಲಕ್ಷ ರೂ. ಮರುಪಾವತಿಸಲಾಗಿದೆ.

ಬೆಳಗ್ಗೆ ಸಂಚಾರ ಸಂಪೂರ್ಣ ಸ್ಥಗಿತ

ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಗ್ಗೆ 9 ಗಂಟೆಯವರೆಗೆ ಹಾಸನ, ಶಿವಮೊಗ್ಗ, ತುಮಕೂರು, ಚಿಕ್ಕಮಗಳೂರು, ಧರ್ಮಸ್ಥಳ, ದಾವಣಗೆರೆ, ಹುಬ್ಬಳ್ಳಿ ಸೇರಿ ಕೆಲ ನಗರಗಳಿಗೆ ಬಸ್ ಸೇವೆ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು.

ನೀರಸವಾಗಿದ್ದ ಜಿಲ್ಲೆಗಳಿವು

ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು, ಬೆಳಗಾವಿ, ಶಿವಮೊಗ್ಗ, ಹಾವೇರಿ, ಚಿತ್ರದá-ರ್ಗ, ಚಿಕ್ಕಮಗಳೂರು

ಈ ಭಾಗದಲ್ಲಿ ಮಿಶ್ರ ಪ್ರತಿಕ್ರಿಯೆ

ಮೈಸೂರು, ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯಪುರ, ಬಾಗಲಕೋಟೆ, ಉಡುಪಿ, ಮಂಗಳೂರು, ಕಲಬುರಗಿ, ಯಾದಗಿರಿ, ಬೀದರ್, ಧಾರವಾಡ, ಗದಗ, ಉತ್ತರಕನ್ನಡ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು

ವಿಧಾನಸೌಧಕ್ಕೆ ತಟ್ಟದ ಬಿಸಿ

ವಿಧಾನಸೌಧ-ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಿಗೆ ಮುಷ್ಕರ ಬಿಸಿ ತಟ್ಟಲಿಲ್ಲ. ಎಂದಿನಂತೆ ಎಲ್ಲ ಕಚೇರಿಗಳಲ್ಲಿ ಅಧಿಕಾರಿಗಳು, ನೌಕರರು ಕಾರ್ಯ ನಿರ್ವಹಿಸಿದರು. ಕೆಲವು ಶಾಸಕರು ಕೆಲಸಗಳನ್ನು ಮಾಡಿಸಿಕೊಳ್ಳುತ್ತಿರುವುದೂ ಕಂಡುಬಂತು. ಸಾರ್ವಜನಿಕರೂ ಭೇಟಿ ನೀಡಿದ್ದರು.

ಅಂಗಡಿ ಮುಚ್ಚಲು ಬಂದವರಿಗೆ ತರಾಟೆ

ಗಂಗೊಳ್ಳಿ (ಉಡುಪಿ): ರಾಷ್ಟ್ರವ್ಯಾಪಿ ಮುಷ್ಕರ ಹಿನ್ನೆಲೆಯಲ್ಲಿ ಗಂಗೊಳ್ಳಿ ಸಮೀಪದ ಗುಜ್ಜಾಡಿ-ನಾಯಕವಾಡಿ ಎಂಬಲ್ಲಿ ಬಲವಂತವಾಗಿ ಅಂಗಡಿ ಮುಚ್ಚಲು ಬಂದ ಸಿಪಿಎಂ ಕಾರ್ಯಕರ್ತರನ್ನು ಅಂಗಡಿ ಮಾಲೀಕ, ಬಿಜೆಪಿ ಕಾರ್ಯಕರ್ತ ಮೋಹನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

‘ಮುಖ್ಯಮಂತ್ರಿ ಮಾಂಸ ತಿಂದು ದೇವಸ್ಥಾನಕ್ಕೆ ಹೋಗುತ್ತೇನೆ ಎಂದರೆ ಸ್ಟ್ರೈಕ್ ಇಲ್ಲ. ಒಳ್ಳೆಯ ಪ್ರಧಾನ ಮಂತ್ರಿಯಾದರೆ ಸ್ಟ್ರೈಕ್ ನಿಮ್ದು. ದೇಶದ ಬಗ್ಗೆ ಚಿಂತೆ ಮಾಡಿ, ಅದು ಮಾನವೀಯತೆ. ನರೇಂದ್ರ ಮೋದಿ ಸರ್ಕಾರ ಇಷ್ಟು ಸವಲತ್ತು ಕೊಟ್ಟಿದೆ. ಬೆಲೆ ಏರಿಕೆ ಬಗ್ಗೆ ಚರ್ಚೆ ಮಾಡುವ ಬನ್ನಿ. 2014ರ ಮತ್ತು 2019ರ ಲಿಸ್ಟ್ ತೋರಿಸುತ್ತೇನೆ. ದೇಶಕ್ಕೆ ಇಂತಹ ಪ್ರಧಾನಿ ಸಿಗುವುದೇ ಪುಣ್ಯ. ನೀವು ಕೇರಳಕ್ಕೆ ಹೋಗಿ ಸ್ಟ್ರೈಕ್ ಮಾಡಿ. ಶಬರಿಮಲೆಗೆ ಕಚಡಾ ತಿಂದುಕೊಂಡು ಹೋದರಲ್ಲ, ಅದ್ಕೆ ಸ್ಟ್ರೈಕ್ ಮಾಡಲಿಕ್ಕೆ ಜೀವ ಇಲ್ಲ ಇವರಿಗೆ’ ಎಂದಿದ್ದಾರೆ. ಆಗ ಬಂದಿದ್ದವರು ಸ್ಥಳದಿಂದ ಕಾಲ್ಕಿತ್ತ ದೃಶ್ಯ ವಿಡಿಯೋದಲ್ಲಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜನತೆಯಿಂದ ತಿರಸ್ಕಾರವೆಂದ ಬಿಜೆಪಿ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಡ ಹಾಗೂ ಕಾರ್ವಿುಕರ ಪರ ನೀತಿಗಳನ್ನು ದೇಶದ ಜನತೆ ಮುಕ್ತ ಮನಸ್ಸಿನಿಂದ ಸ್ವಾಗತಿಸಿರುವ ಕಾರಣದಿಂದ ಎಡಪಕ್ಷಗಳು ದಿಕ್ಕೆಟ್ಟಿದ್ದು, ಕಾಂಗ್ರೆಸ್ ಬೆಂಬಲದೊಂದಿಗೆ ಕರೆ ನೀಡಿದ್ದ ಭಾರತ ಮುಷ್ಕರ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ಬಣ್ಣಿಸಿದೆ. ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೇಂದ್ರ ಸರ್ಕಾರ ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರಿಗೆ ಕ್ರಮವಾಗಿ 2 ಸಾವಿರ ರೂ. ಹಾಗೂ 1,500 ರೂ. ಗೌರವ ಧನ ಹೆಚ್ಚಳ ಮಾಡಿದ್ದರಿಂದ ಈಗ ಅಂಗನವಾಡಿ ಶಿಕ್ಷಕಿಯರಿಗೆ 9,500 ರೂ., ಸಹಾಯಕಿಯರಿಗೆ 4,500 ರೂ. ಹಾಗೂ ಆಶಾ ಕಾರ್ಯಕರ್ತೆಯರಿಗೆ 3,750 ರೂ. ಗೌರವ ಧನ ಸಿಗುತ್ತಿದೆ ಎಂದು ಸಮರ್ಥಿಸಿಕೊಂಡರು.

ಕಾರ್ವಿುಕ ಸಂಘಟನೆಗಳು ಕರೆ ಕೊಟ್ಟ ಮುಷ್ಕರ ವಿಫಲವಾಗಿದೆ. ಚುನಾವಣೆ ಸಂದರ್ಭ ಕೇಂದ್ರ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶವನ್ನು ಜನ ನಿರ್ಲಕ್ಷಿಸಿದ್ದಾರೆ.

| ಕೋಟ ಶ್ರೀನಿವಾಸ ಪೂಜಾರಿ, ಮೇಲ್ಮನೆ ಪ್ರತಿಪಕ್ಷ ನಾಯಕ

ದೇಶವ್ಯಾಪಿ ಮಿಶ್ರ ಪ್ರತಿಕ್ರಿಯೆ

ನವದೆಹಲಿ: ಕಾರ್ವಿುಕ ಸಂಘಟನೆಗಳ ದೇಶವ್ಯಾಪಿ ಮುಷ್ಕರದ ಕರೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಬಹುತೇಕ ಕಡೆ ರೈಲು ಮತ್ತು ಬಸ್ ಸಂಚಾರ ಅಸ್ತವ್ಯಸ್ತವಾಗಿತ್ತು. ಶಾಲಾ- ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಕೇರಳದಲ್ಲಿ ಹಿಂಸಾಚಾರ ನಡೆದಿದೆ. ದೇಶಾದ್ಯಂತ ನಡೆದ ಪ್ರತಿಭಟನೆಯಲ್ಲಿ ಸೆಂಟ್ರಲ್ ಟ್ರೇಡ್ ಯೂನಿಯನ್​ನ (ಸಿಟಿಯು) ಲಕ್ಷಾಂತರ ಸದಸ್ಯರು ಭಾಗವಹಿಸಿದ್ದರು.

ಈ ಮೂರೂ ರಾಜ್ಯಗಳಲ್ಲಿ ಟೈರ್​ಗಳಿಗೆ ಬೆಂಕಿ ಹಚ್ಚಿ, ಬಸ್​ಗಳ ಮೇಲೆ ದಾಳಿ ನಡೆಸಲಾಗಿದೆ. ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಸಿಪಿಎಂ ಮತ್ತು ತೃಣಮೂಲ ಕಾಂಗ್ರೆಸ್​ಗಳ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ಭುವನೇಶ್ವರದಲ್ಲಿ ಸಿಟಿ ಯು ಸದಸ್ಯರು ರಾಷ್ಟ್ರೀಯ ಹೆದ್ದಾರಿ 16ರಲ್ಲಿ ರಸ್ತೆ ತಡೆ ನಡೆಸಿದ ಕಾರಣ ವಾಹನಗಳು ಕಿ.ಮೀ.ಗಟ್ಟಲೆ ಸಾಲುಗಟ್ಟಿ ನಿಲ್ಲುವಂತಾಯಿತು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಜಟಾಪಟಿ ನಡೆಯಿತು. ಒಡಿಶಾದಲ್ಲಿ ಅಂಗಡಿ, ಉದ್ದಿಮೆಗಳು ಮುಚ್ಚಿದ್ದವು. ಕೇರಳದಲ್ಲಿ ಪ್ರತಿಭಟನಾಕಾರರು ರೈಲು ಹಳಿ ಮೇಲೆ ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಘರ್ಷಣೆ ಉಂಟಾಯಿತು.

ದೆಹಲಿಯಲ್ಲಿ ಎಐಸಿಸಿಟಿಯು ಪ್ರತಿಭಟನೆ: ದೆಹಲಿಯಲ್ಲಿ ಅಖಿಲ ಭಾರತ ಕಾರ್ವಿುಕ ಒಕ್ಕೂಟಗಳ ಕೇಂದ್ರೀಯ ಮಂಡಳಿ (ಎಐಸಿಸಿಟಿಯು) ಸದಸ್ಯರು ಪ್ರತಿಭಟನೆ ನಡೆಸಿದರು. ಸರ್ಕಾರಿ ವಲಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡುವುದರ ವಿರುದ್ಧ, ಸಾರಿಗೆ ವಲಯದ ಅಸಂಘಟಿತ ಕಾರ್ವಿುಕರ ಕನಿಷ್ಠ ವೇತನವನ್ನು -ಠಿ;24 ಸಾವಿರಕ್ಕೆ ಏರಿಸಬೇಕು ಮತ್ತು ಸಾಮಾಜಿಕ ಭದ್ರತಾ ಕಾಯ್ದೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಘೋಷಣೆ ಕೂಗಿದರು. ಮಹಾರಾಷ್ಟ್ರದಲ್ಲಿ ಮುಂಬೈ-ಬರೋಡಾ-ಜೈಪುರ್-ದೆಹಲಿ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಲಾಯಿತು. ಪುದುಚೇರಿಯಲ್ಲಿ ತಮಿಳುನಾಡು ಸಾರಿಗೆ ಬಸ್ ಮೇಲೆ ಕಲ್ಲುತೂರಾಟ ನಡೆಯಿತು. ದೂರಸಂಪರ್ಕ, ಆರೋಗ್ಯ, ಶಿಕ್ಷಣ, ಕಲ್ಲಿದ್ದಲು, ಉಕ್ಕು, ವಿದ್ಯುಚ್ಛಕ್ತಿ, ಬ್ಯಾಂಕ್, ವಿಮೆ, ಸಾರಿಗೆ ವಲಯದ ಕಾರ್ವಿುಕರು ಮುಷ್ಕರದಲ್ಲಿ ಭಾಗವಹಿಸಿದ್ದರು.

ಇಂದು ರ್ಯಾಲಿ: ಬುಧವಾರ ದೆಹಲಿಯ ಮಂಡಿ ಹೌಸ್​ನಿಂದ ಸಂಸತ್ ಭವನದವರೆಗೆ ಕಾರ್ವಿುಕ ಸಂಘಟನೆಗಳು ರ‍್ಯಾಲಿ ನಡೆಸಲಿವೆ.-ಏಜೆನ್ಸೀಸ್

- Advertisement -

Stay connected

278,675FansLike
576FollowersFollow
612,000SubscribersSubscribe

ವಿಡಿಯೋ ನ್ಯೂಸ್

ಪಿಂಕ್​ ಬಾಲ್​ ಟೆಸ್ಟ್​: ಐತಿಹಾಸಿಕ ಪಂದ್ಯದಲ್ಲಿ ಟಾಸ್​ ಗೆದ್ದು ಸಂಭ್ರಮಿಸಿದ...

ಕೋಲ್ಕತ: ಐತಿಹಾಸಿಕ ಪಿಂಕ್​ ಬಾಲ್​ ಟೆಸ್ಟ್​ ಪಂದ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, ಟಾಸ್​ ಗೆದ್ದ ಬಾಂಗ್ಲಾದೇಶ ಭಾರತದ ವಿರುದ್ಧ ಬ್ಯಾಟಿಂಗ್​ ಆಯ್ದುಕೊಳ್ಳುವ ಮೂಲಕ ಚೊಚ್ಚಲ ಹಗಲು-ಇರುಳು ಪಂದ್ಯದಲ್ಲೇ ಟಾಸ್​ ಗೆದ್ದು...

VIDEO| ಡಿಆರ್​ಐ ಅಧಿಕಾರಿಗಳ ದಾಳಿ ವೇಳೆ 6ನೇ ಮಹಡಿಯಿಂದ ಕೆಳಗೆ...

ಕೋಲ್ಕತ: ಪಶ್ಚಿಮ ಬಂಗಾಳದ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್​ಐ) ಅಧಿಕಾರಿಗಳು ಬುಧವಾರ ಮಧ್ಯಾಹ್ನ ಕೇಂದ್ರ ಕೋಲ್ಕತದ ಬೆಂಟಿಂಕ್ ಸ್ಟ್ರೀಟ್​ನಲ್ಲಿನ ಖಾಸಗಿ ಕಚೇರಿಯೊಂದಕ್ಕೆ ದಾಳಿ ನಡೆಸಿದ್ದ ವೇಳೆ ಕಟ್ಟಡದ ಆರನೇ ಮಹಡಿಯಿಂದ ನೋಟಿನ...

VIDEO| ಹಾಡುಗಳ ಮೂಲಕವೇ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರದ...

ಬೆಂಗಳೂರು: ಪೋಸ್ಟರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರತಂಡ ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಿಕೊಂಡಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ದತ್ತಣ್ಣ, ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯಾ...

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...