25.9 C
Bengaluru
Wednesday, January 22, 2020

FACT CHECK| ಪ್ರಖ್ಯಾತ ಉದ್ಯಮಿ ಜಾಕ್​ ಮಾ ಬಾಲ್ಯದ ಫೋಟೋ ಎನ್ನಲಾದ ಈ ವೈರಲ್​ ಫೋಟೋ ಹಿಂದಿನ ವಾಸ್ತವವೇ ಬೇರೆ!

Latest News

ಆರೋಪಿ ಆದಿತ್ಯರಾವ್​ನನ್ನು ಮಾನಸಿಕ ಅಸ್ವಸ್ಥ ಎಂದು ಹೇಳಿಲ್ಲ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟಿದ್ದ ಆರೋಪಿ ಆದಿತ್ಯರಾವ್​ನನ್ನು ಮಾನಸಿಕ ಅಸ್ವಸ್ಥ ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ...

ತಾಪಂ ಆಡಳಿತ ಶೀಘ್ರ ಕಾರ್ಯಾರಂಭ

ಅಜ್ಜಂಪುರ: ತಾಪಂ ಆಡಳಿತ ಕಾರ್ಯ ಶೀಘ್ರ ಆರಂಭಿಸಲಾಗುವುದು. ಇದಕ್ಕೆ ಪೂರಕವಾಗಿ ಅಜ್ಜಂಪುರ ವ್ಯಾಪ್ತಿಯ ತಾಲೂಕು ಪಂಚಾಯಿತಿ ಸದಸ್ಯರನ್ನು ತರೀಕೆರೆಯಿಂದ ಪ್ರತ್ಯೇಕಿಸುವ ಕಾರ್ಯ ಪ್ರಗತಿಯಲ್ಲಿದೆ...

ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಭದ್ರತೆ

ಚಿಕ್ಕಮಗಳೂರು: ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಘಟನೆ ಹಿನ್ನೆಲೆಯಲ್ಲಿ ಪ್ರಮುಖ ಧಾರ್ವಿುಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು, ಬಾಬಾಬುಡನ್​ಗಿರಿ, ಮುಳ್ಳಯ್ಯನಗಿರಿ, ಭದ್ರಾ ಅಣೆಕಟ್ಟೆ ಪ್ರದೇಶದಲ್ಲಿ ಪೊಲೀಸ್...

ದೊರೆತ ಉದ್ಯೋಗದಲ್ಲೇ ನಿಷ್ಠೆ ತೋರಿ: ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ಶಾಸಕ ಎಸ್.ವಿ ರಾಮಚಂದ್ರ ಸಲಹೆ

ಜಗಳೂರು: ಸರ್ಕಾರಿ ಕೆಲಸಕ್ಕೆ ಅಲಂಬಿತರಾಗದೇ ಸಿಕ್ಕ ಉದ್ಯೋಗವನ್ನು ನಿಷ್ಠೆಯಿಂದ ಮಾಡಿದರೆ ಮುಂದೆ ಅವಕಾಶದ ಬಾಗಿಲುಗಳು ತೆರೆಯುತ್ತವೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು. ಇಲ್ಲಿನ...

ಕೋತಿ ಹಾವಳಿಗೆ ಹಣ್ಣಿನ ಗಿಡ ಮದ್ದು

ಚಿಕ್ಕಮಗಳೂರು: ಕಡೂರಿನ ಹಲವೆಡೆ ತಲೆದೋರಿರುವ ಮಂಗಗಳ ಹಾವಳಿ ತಡೆಗೆ ಗ್ರಾಮಗಳ ಹೊರಭಾಗದಲ್ಲಿ ಹಣ್ಣಿನ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಅವುಗಳನ್ನು ಆಕರ್ಷಿಸಬಹುದು. ಈ...

ನವದೆಹಲಿ: ಚೀನಾದ ವಿಶ್ವ ಪ್ರಖ್ಯಾತ ಉದ್ಯಮಿ ಹಾಗೂ ಆಲಿಬಾಬಾ ಗ್ರೂಪ್​ನ ಸಂಸ್ಥಾಪಕರಾಗಿರುವ ಜಾಕ್​ ಮಾ ಅವರದ್ದು ಎನ್ನಲಾದ ಬಾಲ್ಯದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆದರೆ, ಫೋಟೋದ ನಿಜ ಬಣ್ಣ ಏನೆಂಬುದನ್ನು ಫ್ಯಾಕ್ಟ್​ಚೆಕ್​ ಬಹಿರಂಗಪಡಿಸಿದೆ.

ವೈರಲ್​ ಆಗಿರುವ ಚಿತ್ರದಲ್ಲಿ ಕೊಳೆ ಮಿಶ್ರಿತ ಹರಿದ ಹಳದಿ ಟೀಶರ್ಟ್​​​ ಧರಿಸಿರುವ ಬಾಲಕನನ್ನು ಜಾಕ್​​ ಮಾ ಎಂದು ಹೇಳಲಾಗಿದ್ದು, ಅವರು ಸಾಕಷ್ಟು ಕಷ್ಟಪಟ್ಟು ಜೀವನದಲ್ಲಿ ಮುಂದೆ ಬಂದರು ಎಂದು ಸಾಮಾಜಿಕ ಜಾಲತಾಣದಲ್ಲಿ ವಾದಿಸಲಾಗಿದೆ.

ಆದರೆ, ಇಂಡಿಯಾ ಟುಡೆ ನಡೆಸಿದ ಫ್ಯಾಕ್ಟ್​ಚೆಕ್​ನಲ್ಲಿ ಕಂಡು ವಾಸ್ತವವೇ ಬೇರೆಯಾಗಿದೆ. ಅಸಲಿಗೆ ಚಿತ್ರದಲ್ಲಿ ಜಾಕ್​ ಮಾ ಎಂದು ವಾದಿಸಲಾಗಿರುವ ಬಾಲಕನ ನಿಜವಾದ ಹೆಸರು ಫ್ಯಾನ್ ಕ್ಸಿಯಾವೋಕಿನ್. 8 ವರ್ಷದ ಈ ಬಾಲಕ ನೋಡಲು ಜಾಕ್​ ಮಾ ತದ್ರೂಪಿಯಂತಿದ್ದಾನೆ. ಆದರೆ, ಜಾಕ್​ ಮಾ ಪ್ರಖ್ಯಾತ ಉದ್ಯಮಿ ಹೆಸರನ್ನು ಪಡೆಯಲು ಸಾಕಷ್ಟು ಶ್ರಮಿಸಿರುವುದು ಮಾತ್ರ ಸತ್ಯವಾಗಿದೆ. ಏಕೆಂದರೆ ಯಶಸ್ಸು ಅಷ್ಟು ಸುಲಭವಾಗಿ ದಕ್ಕುವುದಿಲ್ಲ. ​

ಕಳೆದ ಸೆಪ್ಟೆಂಬರ್​ 2018ರಿಂದಲೂ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಸಾಕಷ್ಟು ನೆಟ್ಟಿಗರು ಇದನ್ನು ಹೆಚ್ಚಾಗಿ ಶೇರ್​ ಮಾಡಿಕೊಂಡಿದ್ದಾರೆ. ಫೋಟೋವನ್ನು ಗೂಗಲ್​ ರಿವರ್ಸ್​ ಸರ್ಚ್​ ಇಂಜಿನ್​ಗೆ ಹಾಕಿ ನೋಡಿದಾಗಲೂ ಹಲವು ವಿಚಾರಗಳು ತೆರೆದುಕೊಂಡಿವೆ. ಜಾಕ್​ ಮಾ ರೀತಿಯಿರುವ ಫ್ಯಾನ್ ಕ್ಸಿಯಾವೋಕಿನ್​ನನ್ನು ಚೀನಾದ ಮಿನಿ ಜಾಕ್​ ಮಾ ಎಂತಲೂ ಕರೆಯುತ್ತಾರೆ. ವೈರಲ್​ ಫೋಟೋದಲ್ಲಿ ಕ್ಸಿಯಾವೋಕಿನ್​ ತಮ್ಮ ಕುಟುಂಬದ ಜತೆ ಪೋಸ್​ ನೀಡಿದ್ದಾರೆ.

2016ರಲ್ಲೂ ಕ್ಸಿಯಾವೋಕಿನ್ ಫೋಟೋ ಮತ್ತು ವಿಡಿಯೋ ಚೀನಾದಲ್ಲಿ ವೈರಲ್​ ಆಗಿ ನೋಡಲು ಜಾಕ್​ ಮಾನಂತೆ ಇದ್ದಾನೆಂದು ಭಾರಿ ಚರ್ಚೆಯಾಗಿತ್ತು. ಬಿಬಿಸಿ ವರದಿಯ ಪ್ರಕಾರ ಕ್ಸಿಯಾವೋಕಿನ್ ಕುಟಂಬ ಚೀನಾದ ಜಿಯಾಂಗ್ಸಿ ಪ್ರಾಂತ್ಯದಲ್ಲಿ ನೆಲೆಸಿದೆ. ತುಂಬಾ ಬಡಕುಟುಂಬವಾಗಿದ್ದು, ಸರ್ಕಾರ ನೀಡಿರುವ ಯೋಜನಾಫಲವನ್ನು ಅವಲಂಬಿಸಿದೆ.

2018ರ ವಿಶ್ವ ಆರ್ಥಿಕ ಫೋರಮ್​ ಶೃಂಗಸಭೆಯಲ್ಲಿ ಮಾತನಾಡಿದ್ದ ಜಾಕ್​ ಮಾ, ತಾವು ಬಡತನ ಕುಟುಂಬದಲ್ಲಿ ಹುಟ್ಟಿದ್ದಾಗಿ ಮತ್ತು ಎಂದಿಗೂ ಉತ್ತಮ ಶಿಕ್ಷಣವನ್ನೇ ಪಡೆಯದಿದ್ದಾಗಿ ಹೇಳಿಕೊಂಡಿದ್ದರು. ಅಲ್ಲದೆ, ಸಾಕಷ್ಟು ಏಳುಬೀಳುಗಳ ಬಗ್ಗೆ ಮಾತನಾಡಿದ್ದರು.

ಹೀಗಾಗಿ ವೈರಲ್​ ಆಗಿರುವ ಫೋಟೋದಲ್ಲಿರುವ ಬಾಲಕನಿಗೂ ಜಾಕ್​ ಮಾ ಅವರಿಗೂ ಸಂಬಂಧವಿಲ್ಲ. ಆದರೆ, ಬಾಲಕ ನೋಡಲು ಜಾಕ್​ ಮಾ ರೀತಿಯಿದ್ದು, ಈತನನ್ನು ಮಿನಿ ಜಾಕ್​ ಮಾ ಎಂದು ಕರೆಯಲಾಗುತ್ತಿದೆ. (ಏಜೆನ್ಸೀಸ್​)

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...