ನವದೆಹಲಿ: ರೆಕ್ಕೆಗಳಿರುವ ಶ್ವೇತ ವರ್ಣದ ಉಡುಪು, ದೇಹಕ್ಕೆ ಅಂಟಿದ ರಕ್ತದ ಕಲೆ ಮತ್ತು ಸುತ್ತಲು ಹಾರುತ್ತಿರುವ ಕೆಲವ ಗಾಳಿಪಟಗಳೊಂದಿಗೆ ಯಕ್ಷಿಣಿ ಅವತಾರದಲ್ಲಿರುವ ಮಹಿಳೆಯೊಬ್ಬಳ ಫೋಟೋ, ಮಕರ ಸಂಕ್ರಾಂತಿಯಲ್ಲಿ ಗಾಳಿಪಟ ಹಾರಿಸುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾಳೆ ಎಂಬ ಸಂದೇಶದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅಂದಹಾಗೆ ಮಕರ ಸಂಕ್ರಾಂತಿ ಹಿಂದುಗಳ ಹಬ್ಬವಾಗಿದೆ. ಸೂರ್ಯದೇವನಿಗೆ ಮೀಸಲಾಗಿದ್ದು, ಹಬ್ಬಗಳನ್ನು ಆಚರಿಸುವ ಪ್ರಮುಖ ಭಾಗಗಳಲ್ಲಿ ಗಾಳಿಪಟಗಳನ್ನು ಹಾರಿಸಲಾಗುತ್ತದೆ.
ಇದನ್ನೂ ಓದಿರಿ: ಇಲ್ಲಿ ಮೊಲ ಸಿಕ್ಕರಷ್ಟೇ ಸಂಕ್ರಾಂತಿ: ಕಾರಣ ಅಚ್ಚರಿ!
ಅನೇಕ ಫೇಸ್ಬುಕ್ ಬಳಕೆದಾರರು ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಕೋಮು ತಿರುವು ಪಡೆದುಕೊಳ್ಳುವ ಸಂದೇಶದೊಂದಿಗೆ ಹರಿಬಿಟ್ಟಿದ್ದಾರೆ. ಮಕರ ಸಂಕ್ರಾಂತಿಯಂದು ಗಾಳಿಪಟದಿಂದ ಪಕ್ಷಿಗಳು ಗಾಯಗೊಂಡಿರುವ ಪಾತ್ರವನ್ನು ಈ ಮಹಿಳೆ ಮಾಡುತ್ತಿದ್ದಾಳೆ. ಕೋಮು ಸೌಹಾರ್ದತೆಗೆ ಉದಾಹರಣೆಯಾಗಲು ಈದ್‌ನಲ್ಲಿಯೂ ಮೇಕೆಯ ಪಾತ್ರವನ್ನೂ ಅವಳು ನಿರ್ವಹಿಸಬೇಕು. ಈ ಸಂದೇಶವನ್ನು ಮಹಿಳೆಗೆ ಕಳುಹಿಸಿ ಎಂದಿದ್ದಾರೆ.
ಆದರೆ, ಇದು ಸತ್ಯವೇ ಎಂಬುದು ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್ಡಬ್ಲ್ಯುಎ) ನಡೆಸಿದ ಫ್ಯಾಕ್ಟ್ಚೆಕ್ನಲ್ಲಿ ಬಯಲಾಗಿದೆ. ವೈರಲ್ ಫೋಟೋದಲ್ಲಿರುವ ಮಹಿಳೆಗೂ ಪ್ರಸ್ತುತ ಹರಿದಾಡುತ್ತಿರುವ ಕೂಮು ಸೌಹಾರ್ದ ಕೆಡಿಸುವ ಸಂದೇಶಕ್ಕೂ ಒಂದಕ್ಕೊಂದು ಸಂಬಂಧವಿಲ್ಲ. ತಪ್ಪು ಪ್ರಚಾರ ಮಾಡುವ ಉದ್ದೇಶದಿಂದ ಫೋಟೋವನ್ನು ಹರಿಬಿಡಲಾಗಿದೆ. ಫೋಟೋದಲ್ಲಿರುವ ಮಹಿಳೆ ಪ್ರಾಣಿ ಹಕ್ಕುಗಳ ಕಾರ್ಯಕರ್ತೆ. 2017ರ ಆಗಸ್ಟ್ನಲ್ಲಿ ಪ್ರಾಣಿಗಳ ಹಕ್ಕಿಗಾಗಿ ದೆಹಲಿಯಲ್ಲಿ ನಡೆದ ಎನ್ಜಿಒ ಅಭಿಯಾನದ ವೇಳೆ ತೆಗೆಯಲಾದ ಫೋಟೋ ಆಗಿದೆ. ಗಾಳಿಪಟ ಹಾರಿಸುವುದರಿಂದ ಅದರ ದಾರ ಪಕ್ಷಿಗಳಿಗೆ ಸಿಲುಕಿ ಸಾವಿಗೀಡಾಗುವುದರ ವಿರುದ್ಧ ಅಭಿಯಾನ ನಡೆಸಲಾಗಿತ್ತು. ಆದರೆ, ವೈರಲ್ ಆಗಿರುವಂತೆ ಮಕರ ಸಂಕ್ರಾಂತಿ ಅಥವಾ ಇತರೆ ಹಬ್ಬಳಿಗೂ ಈ ಫೋಟೋ ಸಂಬಂಧಿಸಿಲ್ಲ.
ಇದನ್ನೂ ಓದಿರಿ: ಸುಂದರ ಭವಿಷ್ಯದ ಕನಸು ಕಂಡಿದ್ದ ವೈದ್ಯೆಯ ಬಾಳಲ್ಲಿ ವಿಧಿಯ ಆಟವೇ ಬೇರೆಯಾಗಿತ್ತು!
ಕೀವರ್ಡ್ಸ್ ಸಹಾಯದಿಂದ ಗೂಗಲ್ನಲ್ಲಿ ಹುಡುಕಾಡಿದಾಗ 2017ರ ಆಗಸ್ಟ್ನಲ್ಲಿ ವೆಬ್ಸೈಟ್ಗಳಲ್ಲಿ ಪ್ರಕಟವಾದ ಅನೇಕ ನ್ಯೂಸ್ಗಳು ಸಹ ಲಭ್ಯವಾಗಿವೆ. ಇದರ ಪ್ರಕಾರ ಅಭಿಯಾನದ ಹೆಸರು ಅಭಯ್ ದಾನಮ್ ಎಂದು. ಗಾಳಿಪಟದ ದಾರ ಎಷ್ಟು ಅಪಾಯಕಾರಿ ಎಂಬುದರ ಬಗ್ಗೆ ಜನರಿಗೆ ಅರಿವು ಮೂಡಿಸಲು ಅಭಿಯಾನ ನಡೆಸಲಾಗಿತ್ತು.
ಹೀಗಾಗಿ ಸಂಕ್ರಾಂತಿ ವಿರುದ್ಧ ಎಂದು ವೈರಲ್ ಆಗಿರುವ ಫೋಟೋ ಹಿಂದೆ ಅಪಪ್ರಚಾರದ ತಂತ್ರ ಅಡಗಿದೆ. ಹೀಗಾಗಿ ಫ್ಯಾಕ್ಟ್ಚೆಕ್ನಿಂದ ತಿಳಿಯುವುದೇನೆಂದರೆ, 20174ರಲ್ಲಿ ನಡೆದ ಅಭಿಯಾನವಾಗಿದ್ದು, ಯಾವುದೇ ಧರ್ಮದ ವಿರುದ್ಧ ಇಲ್ಲವೆಂಬುದು ಸ್ಪಷ್ಟವಾಗಿದೆ. (ಏಜೆನ್ಸೀಸ್)