ಮಧ್ಯ ವಯಸ್ಕನ ಜತೆ ಬಾಲಕಿ ಮದ್ವೆ: ವೈರಲ್​ ಫೋಟೋ ಹಿಂದಿದೆ ಭಯಾನಕ ಸಂಚು, ಸತ್ಯಾಂಶ ಬಹಿರಂಗ!

blank

ನವದೆಹಲಿ: ಅಪ್ರಾಪ್ತ ಬಾಲಕಿಯೊಬ್ಬಳು ವಧುವಿನ ವೇಷದಲ್ಲಿ ಮಧ್ಯ ವಯಸ್ಕನ ವ್ಯಕ್ತಿಯ ಪಕ್ಕದಲ್ಲಿ ಕುಳಿತಿರುವ ಫೋಟೋವೊಂದು ಕೋಮು ದ್ವೇಷದ ಸಂದೇಶದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ​

blank

ಅನೇಕ ಫೇಸ್​ಬುಕ್​ ಬಳಕೆದಾರರು ಫೋಟೋವನ್ನು ಶೇರ್​ ಮಾಡಿಕೊಂಡಿದ್ದು, ಹತ್ತು ವರ್ಷದ ಬಾಲಕಿ ಅನಿತಾಳನ್ನು ಶಿವನಾಥ್​ ಚತುರ್ವೇದಿ ಹೆಸರಿನ 40 ವರ್ಷದ ವ್ಯಕ್ತಿಗೆ ಮದುವೆ ಮಾಡಿಕೊಡಲಾಗಿದೆ. ಶಿವನಾಥ್,​ ಬಾಲಕಿಯ ಮೃತ ತಂದೆ ಅಶೋಕ್​ ಚತುರ್ವೇದಿಗೆ ಸೋದರ ಸಂಬಂಧಿಯಾಗಬೇಕು. ಇದೆಂಥಾ ನಾಚಿಕೆಯಿಲ್ಲದ ಧರ್ಮ. ಈ ಮದುವೆ ನಡೆಸಿಕೊಟ್ಟ ಪಂಡಿತರಿಗೂ, ಸಮಾರಂಭದಲ್ಲಿ ಭಾಗಿಯಾದವರಿಗೂ ಮತ್ತು ಬಾಲ್ಯ ವಿವಾಹವನ್ನು ಸಮರ್ಥಿಸಿಕೊಳ್ಳುವವರಿಗೂ ನಾಚಿಕೆಯಾಗಬೇಕೆಂದು ಹಿಂದಿಯಲ್ಲಿ ಅಡಿಬರಹ ಬರೆಯಲಾಗಿದೆ.

ಮಧ್ಯ ವಯಸ್ಕನ ಜತೆ ಬಾಲಕಿ ಮದ್ವೆ: ವೈರಲ್​ ಫೋಟೋ ಹಿಂದಿದೆ ಭಯಾನಕ ಸಂಚು, ಸತ್ಯಾಂಶ ಬಹಿರಂಗ!

ಇನ್ನಿತರ ಫೇಸ್​ಬುಕ್​ ಬಳಕೆದಾರರು ಫೋಟೋದಲ್ಲಿರುವ ಬಾಲಕಿ ಅಮೀನಾ, ಈಕೆಯ ಮೃತ ತಂದೆಯ ಸೋದರ ಸಂಬಂಧಿಯಾದ 40 ವರ್ಷದ ಮುಸ್ಲಿಂ ವ್ಯಕ್ತಿಗೆ ಮದುವೆ ಮಾಡಿಕೊಡಲಾಗಿದೆ. ಈ ಎರಡೂ ಫೇಸ್​ಬುಕ್​ ವಾದಗಳನ್ನು ಬಹುತೇಕ ಭಾರತೀಯರೇ ಮಾಡಿದ್ದಾರೆ.

ಮಧ್ಯ ವಯಸ್ಕನ ಜತೆ ಬಾಲಕಿ ಮದ್ವೆ: ವೈರಲ್​ ಫೋಟೋ ಹಿಂದಿದೆ ಭಯಾನಕ ಸಂಚು, ಸತ್ಯಾಂಶ ಬಹಿರಂಗ!

ಆದರೆ, ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ನಡೆಸಿದ ಫ್ಯಾಕ್ಟ್​ಚೆಕ್​ನಲ್ಲಿ ಫೋಟೋ ಕುರಿತಾದ ನಿಜಾಂಶ ಬಯಲಾಗಿದ್ದು, ಫೋಟೋ ಪಾಕಿಸ್ತಾನದಲ್ಲಿರುವ ಪಂಜಾಬ್​ ಪ್ರಾಂತ್ಯಕ್ಕೆ ಸಂಬಂಧಿಸಿದ್ದು ಎಂದು ತಿಳಿದುಬಂದಿದೆ. ವಿಧವಾ ತಾಯಿಯೊಬ್ಬಳು ತನ್ನ 10 ವರ್ಷದ ಮಗಳನ್ನು 40 ವರ್ಷದ ವ್ಯಕ್ತಿ ತರಿಖ್​ ಮೆಹ್ಮೂದ್​ಗೆ ಮಾರಲು ಯತ್ನಿಸಿದಳು. ಆದರೆ, ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ಬಾಲ್ಯ ವಿವಾಹ ಮುರಿದು ಬಿತ್ತು ಮತ್ತು ಆರೋಪಿಯನ್ನು ಬಂಧಿಸಲಾಯಿತು ಎಂಬುದು ಬಯಲಾಗಿದೆ.

ಗೂಗಲ್​ ರಿವರ್ಸ್​ ಸರ್ಚ್​ ಇಂಜಿನ್​ ಸಹಾಯದಿಂದ ಫೋಟೋವನ್ನು ಹುಡುಕಾಡಿದಾಗ ಅಸಲಿಯತ್ತು ಬಯಲಾಗಿದೆ. ಪಾಕಿಸ್ತಾನದ ಅನೇಕ ಟ್ವಿಟ್ಟಿಗರು ಫೋಟೋವನ್ನು ಪೋಸ್ಟ್​ ಮಾಡಿ, ಘಟನೆಯನ್ನು ಖಂಡಿಸಿರುವುದು ಗಮನಕ್ಕೆ ಬಂದಿದೆ. ಈ ಘಟನೆ ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯ ಅಹ್ಮೆದ್​ಪುರ್​ ಶರ್ಖಿಯಾದಲ್ಲಿ ನಡೆದಿದೆ. ಇದೇ ಸುಳಿವು ಇಟ್ಟುಕೊಂಡು ಉರ್ದು ಕೀವರ್ಡ್ಸ್​ ಸಹಾಯದಿಂದ ಜಾಲತಾಣದಲ್ಲಿ ಹುಡುಕಾಡಿದಾಗ ಪಾಕಿಸ್ತಾನದ ಅನೇಕ ನ್ಯೂಸ್​ ಪೋರ್ಟಲ್​ನಲ್ಲಿ ಈ ವಿಷಯ ಆಗಸ್ಟ್​ 18ರಂದು ವರದಿಯಾಗಿದೆ.

ವರದಿ ಪ್ರಕಾರ ಪಂಜಾಬ್​ ಪೊಲೀಸರು ಸರಿಯಾದ ಸಮಯಕ್ಕೆ ಹೋಗಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ತಪ್ಪಿಸಿದ್ದಾರೆ. ಪಂಜಾಬ್​ನ ಬಹವಾಲ್​ಪುರ ಜಿಲ್ಲೆಯ ಅಹ್ಮೆದ್​ಪುರ್​ ಶರ್ಖಿಯಾದಲ್ಲಿರುವ ರಾಮ್​ ಕಲಿ ಏರಿಯಾದಲ್ಲಿ ಮದುವೆ ನಡೆಯುತ್ತಿತ್ತು. ಬಾಲಕಿ ಕೆಲವು ವರ್ಷಗಳ ಹಿಂದೆಯೇ ತನ್ನ ತಂದೆಯನ್ನು ಕಳೆದುಕೊಂಡಿದ್ದಾಳೆ. ಹೀಗಾಗಿ ಬಾಲಕಿಯ ತಾಯಿ ಆಕೆಯನ್ನು 40 ವರ್ಷದ ತಂದೆಯ ಸೋದರಸಂಬಂಧಿಗೆ ಮಾರಲು ಯತ್ನಿಸಿದ್ದಾಳೆ. ಇದೀಗ ಆರೋಪಿಯನ್ನು ಬಂಧಿಸಲಾಗಿದ್ದು, ಬಾಲಕಿಯನ್ನು ರಕ್ಷಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಆದರೆ, ಸಾಮಾಜಿಕ ಜಾಲತಾಣದಲ್ಲಿ ಅನೇಕರು ಹೇಳಿರುವಂತೆ ಕೋಮು ದ್ವೇಷದ ನಂಟು ವೈರಲ್​ ಫೋಟೋಗೆ ಇಲ್ಲ. ಹೀಗಾಗಿ ಕೋಮು ದ್ವೇಷ ಹುಟ್ಟುಹಾಕಬೇಕೆಂಬ ದುರುದ್ದೇಶದಿಂದ ಫೋಟೋವನ್ನು ತಪ್ಪು ಸಂದೇಶದೊಂದಿಗೆ ಜಾಲತಾಣದಲ್ಲಿ ಹರಿಬಿಡಲಾಗಿದೆ ಎಂಬುದು ಫ್ಯಾಕ್ಟ್​ಚೆಕ್​ನಲ್ಲಿ ಬಯಲಾಗಿದೆ. (ಏಜೆನ್ಸೀಸ್​)

ವಧುವಿನ ಕೆನ್ನೆಗೆ ಚುಂಬಿಸುತ್ತಿರುವುದು ಮೌಲ್ವಿಯಲ್ಲ: ವೈರಲ್​ ವಿಡಿಯೋ ಹಿಂದಿನ ಸತ್ಯಾಂಶ ಇಲ್ಲಿದೆ!

Share This Article
blank

ರಸ್ತೆಯಲ್ಲಿ ಬಿದ್ದಿರುವ ಈ ವಸ್ತುಗಳನ್ನು ದಾಟುವ ತಪ್ಪನ್ನು ಎಂದಿಗೂ ಮಾಡಬೇಡಿ..ಅಪಾಯ ಖಂಡಿತ! Vastu Tips

Vastu Tips: ರಸ್ತೆ ದಾಟುವಾಗ ಕೆಲವು ವಿಚಿತ್ರವಾದ ವಸ್ತುಗಳು ಬಿದ್ದಿರುವುದನ್ನು ನೋಡುತ್ತೇವೆ.  ಅಷ್ಟೆ ಅಲ್ಲದೆ ರಸ್ತೆಯಲ್ಲಿ…

ಮಳೆ ಬಂದಾಗ ಸ್ನಾನ ಮಾಡುವುದು ಅಪಾಯಕಾರಿ! ಮೊದಲು ಈ ಕುರಿತು ತಿಳಿದುಕೊಳ್ಳಿ… lifestyle

lifestyle : ಮಳೆ ಬಂದಾಗ   ಗುಡುಗು ಮತ್ತು ಮಿಂಚಿನೊಂದಿಗೆ ಬಂದರೆ, ನಾವು ಜಾಗರೂಕರಾಗಿರಬೇಕು. ಮಳೆ ಬರುತ್ತಿರುವಾಗ…

blank