More

    Fact Check| ಬಂಡಲ್​ಗಟ್ಟಲೆ ನೋಟುಗಳಿರುವ ವೈರಲ್​ ಫೋಟೋ ಆರ್​ಎಸ್​ಎಸ್​ಗೆ ಸಂಬಂಧಿಸಿದ್ದು ಎಂಬುವುದು ಎಷ್ಟು ಸತ್ಯ?

    ನವದೆಹಲಿ: ಕೆಲ ಪೊಲೀಸ್​ ಸಿಬ್ಬಂದಿಯೊಂದಿಗೆ ಬಂಡಲ್​ಗಟ್ಟಲೆ ನೋಟುಗಳಿರುವ ಮೂರು ಫೋಟೋಗಳನ್ನು ಒಟ್ಟಿಗೆ ಸೇರಿಸಿ ಎಡಿಟ್​ ಮಾಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಫೋಟೋ ಕುರಿತು ಗುಜರಾತ್​ನಲ್ಲಿರುವ ಆರ್​ಎಸ್​ಎಸ್​ ಬೆಂಬಲಿಗರ ಕಾರಿನಲ್ಲಿ ವಶಪಡಿಸಿಕೊಂಡು ನಕಲಿ ನೋಟುಗಳು ಎಂದು ವಾದಿಸಲಾಗಿದೆ. ಆದರೆ, ಇದರ ಹಿಂದಿನ ಅಸಲಿಯತ್ತು ಏನೆಂಬುದು ಫ್ಯಾಕ್ಟ್​​ಚೆಕ್​ನಿಂದ ಬಯಲಾಗಿದೆ.

    “ಆಮ್​ ಆದ್ಮಿ ಜಿಂದಾಬಾದ್​” ಮತ್ತು “ಮೊಬೈಲ್​ ಟೆಕ್ನಾಲಜಿ” ಹೆಸರಿನ ಫೇಸ್​ಬುಕ್​ ಪೇಜ್​ ಸೇರಿದಂತೆ ಹಲವು ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಎಡಿಟ್​ ಮಾಡಿರುವ ಫೋಟೋ ವೈರಲ್​ ಆಗಿದ್ದು, ಹಿಂದಿ ಭಾಷೆಯಲ್ಲಿ ಅಡಿಬರಹವನ್ನು ನೀಡಲಾಗಿದೆ. ಅದನ್ನು ತರ್ಜುಮೆ ಮಾಡಿದಾಗ ಬಂಡಲ್​ಗಟ್ಟಲೇ ನಕಲಿ ನೋಟುಗಳನ್ನು ಗುಜರಾತ್​ನಲ್ಲಿ ವಶಪಡಿಸಿಕೊಳ್ಳಲಾಗಿದೆ. ನೋಟುಗಳನ್ನು ಆರ್​ಎಸ್​ಎಸ್​ನ ನಿಷ್ಠಾವಂತ ಕಾರ್ಯಕರ್ತ ಕೇಟನ್​ ಡೇವ್​ ಎಂಬುವರ ಕಾರಿನಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಬರೆದು ಫೋಟೋ ವೈರಲ್​ ಮಾಡಿದ್ದಾರೆ.

    ಅನೇಕ ಫೇಸ್​ಬುಕ್​ ಬಳಕೆದಾರರು ಹಿಂದೆ ಮುಂದೆ ನೋಡದೆ ಫೋಸ್ಟ್​ ಅನ್ನು ಶೇರ್​ ಮಾಡಿಕೊಂಡಿದ್ದಾರೆ. ಅಲ್ಲದೆ, ಬಂಗಾಳಿ ಭಾಷೆಯಲ್ಲಿಯೋ ಒಂದು ಪೋಸ್ಟ್​ ಶೇರ್​ ಆಗಿದೆ. ಆದರೆ, “ಆಮ್​ ಆದ್ಮಿ ಜಿಂದಾಬಾದ್​” ಮತ್ತು “ಮೊಬೈಲ್​ ಟೆಕ್ನಾಲಜಿ” ಪೇಜ್​ನಲ್ಲಿ ಪೋಸ್ಟ್​ ವೈರಲ್​ ಆದ ಬಳಿಕ ಡಿಲೀಟ್​ ಮಾಡಲಾಗಿದೆ. ಆದರೂ ಅದರ ಸ್ಕ್ರೀನ್​ ಶಾಟ್​ ನೀವಿಲ್ಲಿ ಕಾಣಬಹುದಾಗಿದೆ.

    Fact Check| ಬಂಡಲ್​ಗಟ್ಟಲೆ ನೋಟುಗಳಿರುವ ವೈರಲ್​ ಫೋಟೋ ಆರ್​ಎಸ್​ಎಸ್​ಗೆ ಸಂಬಂಧಿಸಿದ್ದು ಎಂಬುವುದು ಎಷ್ಟು ಸತ್ಯ?

    ಇದು ಎಷ್ಟು ಸತ್ಯ ಎಂದು ತಿಳಿಯಲು ಇಂಡಿಯಾ ಟುಡೇ ಆ್ಯಂಟಿ ನ್ಯೂಸ್​ ವಾರ್​ ರೂಮ್​ ಫ್ಯಾಕ್ಟ್​ಚೆಕ್​ ನಡೆಸಿದೆ. ಇದರಲ್ಲಿ ತಿಳಿದುಬಂದು ಪ್ರಮುಖವಾದ ಅಂಶವೆಂದರೆ ವೈರಲ್​ ಪೋಸ್ಟ್​ನಲ್ಲಿರುವ ಫೋಟೋ ಗುಜರಾತ್​ಗೆ ಸಂಬಂಧಿಸಿದ್ದಲ್ಲ. ಬದಲಾಗಿ ತೆಲಂಗಾಣಕ್ಕೆ ಸಂಬಂಧಿಸಿದ್ದು, ಅಪಪ್ರಚಾರ ನಡೆಸಲು ಫೋಟೋವನ್ನು ಬಳಸಿಕೊಳ್ಳಲಾಗಿದೆ ಎಂಬ ಸತ್ಯಾಂಶ ಹೊರಬಿದ್ದಿದೆ.

    Fact Check| ಬಂಡಲ್​ಗಟ್ಟಲೆ ನೋಟುಗಳಿರುವ ವೈರಲ್​ ಫೋಟೋ ಆರ್​ಎಸ್​ಎಸ್​ಗೆ ಸಂಬಂಧಿಸಿದ್ದು ಎಂಬುವುದು ಎಷ್ಟು ಸತ್ಯ?

    ವೈರಲ್​ ಫೋಟೋವನ್ನು ಗೂಗಲ್​ ರಿವರ್ಸ್​ ಸರ್ಚ್​ ಇಂಜಿನ್​ಗೆ ಹಾಕಿ ನೋಡಿದಾಗ ಹಲವು ಪತ್ರಿಕೆಗಳಲ್ಲಿ ವೈರಲ್​ ಫೋಟೋ ಬಳಕೆಯಾಗಿರುವುದು ಪತ್ತೆಯಾಗಿದೆ. ತೆಲಂಗಾಣ ಟುಡೇ ಮತ್ತು ಟೈಮ್ಸ್​ ಆಫ್​ ಇಂಡಿಯಾದ ಪತ್ರಿಕೆ ಪ್ರಕಾರ ನವೆಂಬರ್​ 2, 2019ರಂದು ತೆಲಂಗಾಣ ಪೊಲೀಸರು, ಐದು ಮಂದಿಯುಳ್ಳ ಗ್ಯಾಂಗ್​ ಒಂದನ್ನು ಭೇದಿಸಿ ಅವರಿಂದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿತ್ತು ಎಂದು ವರದಿಯಾಗಿದೆ. ಖಮ್ಮಾಮ್​ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗ್ಯಾಂಗ್​ನಿಂದ 6 ಕೋಟಿ ರೂ.ಗೂ ಅಧಿಕ ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

    ಕೇಟನ್​ ಡೇವ್​ಗೂ ಆರ್​ಎಸ್​ಎಸ್​ಗೂ ಸಂಬಂಧವಿಲ್ಲ
    ಕೇಟನ್​ ಡೇವ್​ ಗುಜರಾತ್​ ನಕಲಿ ನೋಟುಗಳು ಎಂಬ ಕೀವರ್ಡ್ಸ್​ ಸಹಾಯದಿಂದ ಅಂತರ್ಜಾಲದಲ್ಲಿ ಹುಡುಕಾಡಿದಾಗ ಕೇಟನ್​ ಡೇವ್​ ಹೆಸರಿನ ರಾಜ್​ಕೋಟ್​ ಮೂಲದ ಫೈನಾನ್ಶಿಯರ್ ಅನ್ನು 2017ರಲ್ಲಿ ವಂಚನೆ ಪ್ರಕರಣದಲ್ಲಿ ಗುಜರಾತ್​ನ ರಾಜ್​ಕೋಟ್​ ಬಳಿ ಬಂಧಿಸಲಾಗಿತ್ತು. ಆತನ ಕಾರಿನಲ್ಲಿ 2000 ಮುಖಬೆಲೆಯ 3.92 ಕೋಟಿ ರೂ. ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆತನೇ ನೋಟುಗಳನ್ನು ಮುದ್ರಿಸಿದ್ದಾನೆ ಎಂದು ಶಂಕೆ ವ್ಯಕ್ತವಾಗಿತ್ತು. ಇದನ್ನು ಹಲವು ಮಾಧ್ಯಮಗಳೂ ಕೂಡ ವರದಿ ಮಾಡಿದ್ದವು. ಆದರೆ, ಸದ್ಯ ಜೈಲಿನಲ್ಲಿರುವ ಕೇಟನ್​ ಡೇವ್​ಗೂ ಆರ್​ಎಸ್​ಎಸ್​ಗೂ ಸಂಬಂಧವಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ.

    ಕೊನೆಗೆ ಫ್ಯಾಕ್ಟ್​ಚೆಕ್​ ತಿಳಿಸುವುದೇನೆಂದರೆ ಎರಡು ಪ್ರತ್ಯೇಕ ಪ್ರಕರಣವನ್ನು ಅಪಪ್ರಚಾರ ನಡೆಸಲು ಬಳಸಿಕೊಳ್ಳಲಾಗಿದೆ. ತೆಲಂಗಾಣದ ಫೋಟೋ ಬಳಸಿಕೊಂಡು ಗುಜರಾತ್​ನ ಆರ್​ಎಸ್​ಎಸ್​ಗೆ ಸಂಬಂಧಿಸಿದ್ದು ಎಂದಿಸಿರುವುದು ಅಕ್ಷರಶಃ ಸುಳ್ಳು ಎಂಬುದನ್ನು ಫ್ಯಾಕ್ಟ್​ಚೆಕ್​ ಬಹಿರಂಗಪಡಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts