More

    Fact Check| ಮಹಾತ್ಮ ಗಾಂಧಿ ಹಂತಕ ನಾಥೂರಾಮ್​ ಗೋಡ್ಸೆ ಪ್ರತಿಮೆಗೆ ಪ್ರಧಾನಿ ಮೋದಿ ಸಮಸ್ಕರಿಸಿದ್ದರೇ?

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾತ್ರವಲ್ಲದೇ ಗಾಂಧಿ ಹಂತಕ ನಾಥೂರಾಮ್​ ಗೋಡ್ಸೆ ಪ್ರತಿಮೆಗೂ ಗೌರವ ಸಲ್ಲಿಸಿದ್ದಾರೆ ಎಂದು ಅಡಿಬರಹ ಬರೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಮಾಡಿರುವ ಫೋಟೋ ಹಿಂದಿನ ಅಸಲಿಯತ್ತನ್ನು ಫ್ಯಾಕ್ಟ್​ಚೆಕ್​ ಬಯಲಿಗೆ ಎಳೆದಿದೆ.

    ಪರ್ವೇಜಲಾಮ್​ ಖಾನ್​ ಹೆಸರಿನ ಫೇಸ್​ಬುಕ್​ ಖಾತೆಯಲ್ಲಿ ಗಾಂಧಿ ಪ್ರತಿಮೆಯ ಜತೆಗೆ ಮತ್ತೊಂದು ಪ್ರತಿಮೆಗೆ ಪ್ರಧಾನಿ ನಮಿಸುತ್ತಿರುವ ಫೋಟೋವನ್ನು ಒಟ್ಟಿಗೆ ಎಡಿಟ್​ ಮಾಡಿ ಪೋಸ್ಟ್​ ಮಾಡಲಾಗಿದೆ. ಫೋಟೋ ಕುರಿತು ಪ್ರಧಾನಿ ಮೋದಿ, ಗಾಂಧಿ ಮತ್ತು ಹಂತಕ ಗೋಡ್ಸೆಗೆ ಪ್ರತಿಮೆಗೆ ನಮಸ್ಕರಿಸುತ್ತಿದ್ದಾರೆ ಎಂದು ಬರೆದು ವೈರಲ್​ ಮಾಡಲಾಗಿದೆ. ಅಲ್ಲದೆ, ಈ ಪೋಸ್ಟ್​ 3 ಸಾವಿರಕ್ಕೂ ಹೆಚ್ಚು ಮಂದಿ ಶೇರ್​ ಕೂಡ ಮಾಡಿಕೊಂಡಿದ್ದಾರೆ.

    Fact Check| ಮಹಾತ್ಮ ಗಾಂಧಿ ಹಂತಕ ನಾಥೂರಾಮ್​ ಗೋಡ್ಸೆ ಪ್ರತಿಮೆಗೆ ಪ್ರಧಾನಿ ಮೋದಿ ಸಮಸ್ಕರಿಸಿದ್ದರೇ?

    ಆದರೆ, ಸತ್ಯಾಂಶ ಏನೆಂಬುದನ್ನು ತಿಳಿಯಲು ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ಫ್ಯಾಕ್ಟ್​ಚೆಕ್​ ನಡೆಸಿದ್ದು, ಅಸಲಿಗೆ ಪ್ರಧಾನಿ ಮೋದಿ ಅವರು ಗೋಡ್ಸೆ ಪ್ರತಿಮೆಗೆ ಗೌರವವನ್ನೇ ಸಲ್ಲಿಸಿಲ್ಲ ಎಂದು ತಿಳಿದುಬಂದಿದೆ. ಬದಲಾಗಿ ಭಾರತೀಯ ಜನಸಂಘದ ಮಾಜಿ ನಾಯಕ ಹಾಗೂ ಆರ್​ಎಸ್ಎಸ್​ ಆದರ್ಶವಾದಿ ದೀನ್​ ದಯಾಳ್​ ಉಪಾಧ್ಯಾಯ ಅವರ ಪ್ರತಿಮೆಗೆ ಗೌರವ ಸಲ್ಲಿಸಿದ್ದಾರೆ. ಇದೇ ಫೋಟೋವನ್ನು ಗೋಡ್ಸೆ ಎಂದು ಗಾಂಧಿ ಫೋಟೋ ಜತೆಗೆ ಎಡಿಟ್​ ಮಾಡಿ ತಪ್ಪು ಸಂದೇಶವನ್ನು ಹರಡಿಸಲಾಗಿದೆ.

    ಫೋಟೋವನ್ನು ಗೂಗಲ್​ ರಿವರ್ಸ್​ ಸರ್ಚ್​ ಇಂಜಿನ್​ಗೆ​ ಹಾಕಿ ನೋಡಿದಾಗ ಫೋಟೋ ಕುರಿತ ನಿಖರ ಮಾಹಿತಿ ಪತ್ತೆಯಾಗಿದೆ. ಇಂಟರ್​ನ್ಯಾಶನಲ್​ ಬಿಸಿನೆಸ್​ ಟೈಮ್ಸ್​ ಲೇಖನದಲ್ಲಿ ಎರಡನೇ ಫೋಟೋವನ್ನು ಬಳಸಲಾಗಿದೆ. ಅದರಲ್ಲಿ ಕಪ್ಪು ಬಣ್ಣದ ಪ್ರತಿಮೆಗೆ ಪ್ರಧಾನಿ ಮೋದಿ ನಮಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಇನ್ನಿತರ ಬಿಜೆಪಿ ನಾಯಕರೊಂದಿಗೆ 2017 ಏಪ್ರಿಲ್​ 6ರಂದು ದೀನ ದಯಾಳ್​ ಉಪಾಧ್ಯಾಯ ಪ್ರತಿಮೆಗೆ ಗೌರವ ಸಲ್ಲಿಸಿದರು. ನವದೆಹಲಿಯ ಬಿಜೆಪಿ ಮುಖ್ಯಕಚೇರಿಯಲ್ಲಿ ನಡೆದ 37ನೇ ಪಕ್ಷ ಸಂಸ್ಥಾಪನ ದಿನದಂದು ಫೋಟೋವನ್ನು ತೆಗೆಯಲಾಗಿದೆ ಎಂದು ಲೇಖನದಲ್ಲಿ ಅಡಿಬರಹ ನೀಡಲಾಗಿದೆ.

    Fact Check| ಮಹಾತ್ಮ ಗಾಂಧಿ ಹಂತಕ ನಾಥೂರಾಮ್​ ಗೋಡ್ಸೆ ಪ್ರತಿಮೆಗೆ ಪ್ರಧಾನಿ ಮೋದಿ ಸಮಸ್ಕರಿಸಿದ್ದರೇ?

    ಇನ್ನು ಗಾಂಧಿ ಪ್ರತಿಮೆಗೆ ನಮಸ್ಕರಿಸುತ್ತಿರುವ ಫೋಟೋವನ್ನು ರಾಜ್​ಕೋಟ್​ನಲ್ಲಿ ತೆಗೆಯಲಾಗಿದೆ. 2018 ಸೆಪ್ಟೆಂಬರ್​ 30ರಂದು ರಾಜ್​ಕೋಟ್​ನಲ್ಲಿನ ಮಹಾತ್ಮ ಗಾಂಧಿ ಮ್ಯೂಸಿಯಂಗೆ ಪ್ರಧಾನಿ ಮೋದಿ ಭೇಟಿ ನೀಡಿದಾಗ ಫೋಟೋ ಕ್ಲಿಕ್ಕಿಸಲಾಗಿದೆ.

    ಇದೇ ಮೊದಲೇನಲ್ಲ ಕಳೆದ ವರ್ಷ ಮಾರ್ಚ್​ ತಿಂಗಳಲ್ಲೂ ಇದೇ ರೀತಿಯಾದ ಫೋಟೋವನ್ನು ತಪ್ಪು ಸಂದೇಶ ಹರಡಿಸುವ ಹುನ್ನಾರದಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಮಾಡಲಾಗಿತ್ತು. ಈ ಬಾರಿಯೂ ಇದೇ ಪ್ರಯತ್ನ ಮುಂದುವರಿದಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts