More

    Fact Check| ಹೃದಯಾಘಾತದಿಂದ ಮೃತಪಟ್ಟವನನ್ನು ಮಲಗಿದ್ದಾನೆಂದು ಭಾವಿಸಿ ಫೋಟೋ ಕ್ಲಿಕ್ಕಿಸಿಕೊಂಡರೇ ಸಹದ್ಯೋಗಿಗಳು?

    ನವದೆಹಲಿ: ಕುರ್ಚಿಯ ಮೇಲೆ ಕುಳಿತು ಬಾಯಿ ಅಗಲಿಸಿ ನಿದ್ರಿಸುತ್ತಿರುವ ವ್ಯಕ್ತಿಯೊಟ್ಟಿಗೆ ಒಂದು ಗುಂಪಿನ ಜನ ತೆಗೆಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಫೋಟೋ ಕುರಿತು ಮಂಡಿಸಲಾಗಿರುವ ವಿಷಯ ಅಕ್ಷರಶಃ ಸುಳ್ಳು ಎಂಬುದನ್ನು ಫ್ಯಾಕ್ಟ್​ಚೆಕ್​ ಬಹಿರಂಗಪಡಿಸಿದೆ.

    “ಡು ನಾಟ್​ ಟ್ರೈ ದಿಸ್​ ಅಟ್​ ಹೋಮ್​ ಓ ಮ್ಯಾನ್​ ವಿ ಹ್ಯಾವ್​ ಟು ಡು ದಿಸ್​” ಹೆಸರಿನ ಫೇಸ್​ಬುಕ್​ ಪೇಜ್​ನಲ್ಲಿ ಫೋಟೋ ಶೇರ್​ ಮಾಡಲಾಗಿದ್ದು, ಫೋಟೋ ಕುರಿತು​ ಕುರ್ಚಿಯ ಮೇಲೆ ಕುಳಿತಿರುವ ವ್ಯಕ್ತಿ ಹೃದಯಾಘಾತದಿಂದ ಬಳಲಿ ಕಚೇರಿಯಲ್ಲೇ ಸಾವಿಗೀಡಾಗಿದ್ದಾರೆ. ಆದರೆ, ಆತ ಮಲಗಿದ್ದಾನೆಂದು ತಿಳಿದ ಸಹೋದ್ಯೋಗಿಗಳು ಗುಂಪಾಗಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ ಎಂದು ಅಡಿಬರಹ ಬರೆಯಲಾಗಿದೆ. ಈ ಫೋಟೋವನ್ನು ಸಾಕಷ್ಟು ಮಂದಿ ಶೇರ್​ ಕೂಡ ಮಾಡಿಕೊಂಡಿದ್ದಾರೆ.

    Ohhh

    Do NOT TRY This AT Home!” “Oh Man, we have to do this ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಬುಧವಾರ, ಜನವರಿ 15, 2020

    ಆದರೆ, ಫೋಟೋ ಕುರಿತು ಹೇಳಿರುವ ಮಾಹಿತಿ ಶುದ್ಧ ಸುಳ್ಳು ಎಂಬುದು ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ನಡೆಸಿದ ಫ್ಯಾಕ್ಟ್​ಚೆಕ್​ನಿಂದ ಬಹಿರಂಗವಾಗಿದೆ. ಫೋಟೋವನ್ನು ಗೂಗಲ್​ ರಿವರ್ಸ್​ ಸರ್ಚ್​ ಇಂಜಿನ್​ಗೆ ಹಾಕಿ ನೋಡಿದಾಗ ಫೋಟೋದಲ್ಲಿರುವ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿಲ್ಲ. ಬದಲಾಗಿ ಕೆಲಸ ಮಾಡುತ್ತಲ್ಲೇ ನಿದ್ರೆಗೆ ಜಾರಿದ ಸಮಯದಲ್ಲಿ ಆತನ ಸಹದ್ಯೋಗಿಗಳು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ, ಈತ ಹೇಗೆ ನಿದ್ರೆಗೆ ಜಾರಿದ ಹಾಗೂ ಆತ ಹೇಗೆ ಇಂಟರ್​ನೆಟ್​ ಮೀಮ್ಸ್​ಗೆ ಗರಿಯಾದ ಎಂಬ ಸಾಕಷ್ಟು ವರದಿಗಳು ಪತ್ತೆಯಾಗಿವೆ.​

    ಮಾಧ್ಯಮ ವರದಿಯ ಪ್ರಕಾರ 2016ರ ಹಿಂದಕ್ಕೆ ಹೋದಾಗ ಎಡ್ವರ್ಡ್​ ಪರಸ್ಚಿವೆಸ್ಕು ಎಂಬಾತ ಜಿಸಾಫ್ಟ್​ ಎಂಬ ಕಂಪನಿಯಲ್ಲಿ ತರಬೇತಿ ಉದ್ಯೋಗಿ ಆಗಿ ಸೇರಿರುತ್ತಾನೆ. ಕಂಪನಿಯ ಎರಡನೇ ದಿನ ಕೆಲಸ ಮಾಡುತ್ತಲೇ ನಿದ್ರೆಗೆ ಜಾರುತ್ತಾನೆ. ಈ ವೇಳೆ ಆತನ ಸಹದ್ಯೋಗಿಗಳು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಬಳಿಕ ಇದು ಮೀಮ್ಸ್​ಗಳಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತದೆ.

    ಹೀಗಾಗಿ ಫೋಟೋ ಕುರಿತು ಸದ್ಯ ಹರಿದಾಡುತ್ತಿರುವ ಮಾಹಿತಿ ಕೇವಲ ವದಂತಿಯಷ್ಟೇ ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂಬುದು ಫ್ಯಾಕ್ಟ್​ಚೆಕ್​ನಿಂದ ತಿಳಿದುಬರುತ್ತದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts