ಮೊದಲ ಭಯೋತ್ಪಾದಕ ಹಿಂದು ಎಂದಿದ್ದ ಕಮಲ್​ ಹಾಸನ್​ರಿಂದ ಈಗ ಮತ್ತೊಂದು ವಿವಾದ…

ನವದೆಹಲಿ: ದೇಶದ ಮೊದಲ ಭಯೋತ್ಪಾದಕ ಹಿಂದು ಎಂದು ಹೇಳುವ ಮೂಲಕ ಬಹುದೊಡ್ಡ ವಿವಾದ ಸೃಷ್ಟಸಿದ್ದ ನಟ, ಮಕ್ಕಳ್​ ನೀದಿ ಮೈಯಂ ಪಕ್ಷದ ಸಂಸ್ಥಾಪಕ ಕಮಲ್​ಹಾಸನ್​ ಈಗ ಹಿಂದು ವಿಚಾರವಾಗಿ ಇನ್ನೊಂದು ಹೇಳಿಕೆ ನೀಡಿದ್ದು ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹಿಂದು ಭಯೋತ್ಪಾದಕ ಹೇಳಿಕೆ ವಿರುದ್ಧ ಅನೇಕರು ಸಿಟ್ಟಿಗೆದ್ದಿದ್ದಾರೆ. ಕಮಲ್​ ಹಾಸನ್​ ಕಡೆಗೆ ಚಪ್ಪಲಿ, ಮೊಟ್ಟೆ, ಕಲ್ಲು ಎಸೆದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಆ ಮಾತಿನ ಬಿಸಿ ಆರುವ ಮುನ್ನವೇ ಮತ್ತೊಂದು ವಿವಾದಾತ್ಮಕ ಟ್ವೀಟ್​ ಮಾಡಿದ್ದಾರೆ.

ಹಿಂದು ಎನ್ನುವ ಶಬ್ದದ ಮೂಲ ಭಾರತದ್ದು ಅಲ್ಲ. ಅದು ವಿದೇಶಿಯರು ಕೊಟ್ಟಿದ್ದು. ಕ್ರಿಸ್ತ ಪೂರ್ವದಲ್ಲಿದ್ದ ದಕ್ಷಿಣ ಭಾರತದ ಶಿವ, ವೈಷ್ಣವ ಆರಾಧಕ ಕವಿ ಸಂತರಾದ ನಯನ್ಮಾರರು, ಆಳ್ವಾರರು ಹಿಂದುಗಳ ಬಗ್ಗೆ ಒಂದೇ ಒಂದು ವಾಕ್ಯ ಹೇಳಿದ ದಾಖಲೆಯಿಲ್ಲ ಎಂದು ತಮಿಳು ಪೋಸ್ಟ್​ ಹಾಕಿ ಟ್ವೀಟ್​ ಮಾಡಿದ್ದಾರೆ.

ನಮಗೆ ಹಿಂದುಗಳೆಂದು ಕರೆದಿದ್ದು ಮೊಘಲರು ಹಾಗೂ ಅವರಂತಹ ವಿದೇಶೀ ಆಡಳಿತಗಾರರಿಂದ. ನಂತರ ಈ ಹೊಸ ಶಬ್ದವನ್ನು ಬ್ರಿಟಿಷರೂ ದೃಢಪಡಿಸಿಕೊಂಡರು. ಹೀಗೇ ಯಾರೋ ನಮ್ಮವರಲ್ಲದವರು, ನಂಬಿಕೆಗೆ ಯೋಗ್ಯರಲ್ಲದವರು, ಹೆಸರೇ ಗೊತ್ತಿಲ್ಲದವರು ಏನನ್ನಾದರೂ ಕೊಟ್ಟರೆ ಅದನ್ನು ನಿರ್ಲಕ್ಷ್ಯ ಮಾಡಬೇಕು ಎಂದು ಟ್ವೀಟ್​ನಲ್ಲಿ ಹೇಳಿದ್ದಾರೆ.

Leave a Reply

Your email address will not be published. Required fields are marked *