ರಾಯಬಾಗ: ಸೌಲಭ್ಯ ಸದುಪಯೋಗ ಪಡಿಸಿಕೊಳ್ಳುವ ಮೂಲಕ ಹೆಣ್ಣು ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಬೇಕು. ಅಂದಾಗ ಮಾತ್ರ ಕುಟುಂಬ ಮತ್ತು ಸಮಾಜ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ಪಟ್ಟಣದ ಡಾ.ಬಾಬು ಜಗಜೀವನರಾಂ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ, ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿವಿಧ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ದಾಖಲಾತಿ ಹೆಚ್ಚುತ್ತಿರುವುದು ಸಂತಸವಾಗಿದೆ. ಉಪನ್ಯಾಸಕರು ವಿದ್ಯಾರ್ಥಿಗಳ ಕಲಿಕಾ ಮಟ್ಟ ಅರಿತು ಉತ್ತಮ ಬೋಧನೆ ಮಾಡುವ ಮೂಲಕ ಸುಸಂಸ್ಕೃತರನ್ನಾಗಿಸಬೇಕು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ರಾಜಕುಮಾರ ಕಾಗೆ, ಡಾ.ಎಲ್.ಬಿ.ಬನಶಂಕರಿ, ಡಾ.ವಿವೇಕಾನಂದ ಮಾನೆ, ಡಾ.ಶಂಕರ ರಾಠೋಡ, ಸಂತೋಷ ಸಮಾಜೆ, ಡಾ.ವಿಜಯಲಕ್ಷ್ಮೀ, ಡಾ.ಉತ್ತಮ ಕಾಂಬಳೆ, ಎಂ.ಎಸ್.ಯಾದವಾಡೆ, ಡಾ.ಪ್ರಸಾದ ಆರ್.ಎ., ಅಜೀಜ ಸನದಿ, ಡಾ.ರವಿ ಎಂ.ವಿ., ಮನೋಜಕುಮಾರ ಕಾಂಬಳೆ ಇತರರಿದ್ದರು.