ಫೇಸ್‌ಬುಕ್‌ ಪರಿಚಯ: ಹನಿಟ್ರ್ಯಾಪ್‌ ಮಾಡುತ್ತಿದ್ದ ಮೂವರ ಬಂಧನ

ಬೆಂಗಳೂರು: ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಾಣಾವರದ ಅರ್ಪಿತಾ, ಪವನ್, ತೀರ್ಥ ಬಂಧಿತರು.

ಫೇಸ್​ಬುಕ್​ನಲ್ಲಿ ಅರ್ಪಿತಾಳ ಡಿಫರೆಂಟ್ ಫೋಟೋವನ್ನು ಅಪ್‌ಲೋಡ್‌ ಮಾಡಿ ಬಳಿಕ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಪರಿಚಯ ಮಾಡಿಕೊಳ್ಳುತ್ತಿದ್ದರು. ನಂತರ ಸ್ನೇಹ ಬೆಳೆಸಿಕೊಂಡು ಮೊಬೈಲ್ ನಂಬರ್ ತೆಗೆದುಕೊಂಡು ಪರಿಚಯವಾದವರೊಂದಿಗೆ ಆತ್ಮೀಯವಾಗಿ ಸಮಯ ಕಳೆಯುತ್ತಿದ್ದರು.

ಪವನ್‌ ಎಂಬಾತ ಇವೆಲ್ಲವನ್ನೂ ಕದ್ದು ವಿಡಿಯೋ ಮಾಡುತ್ತಿದ್ದ. ಸ್ನೇಹಿತರೆಂದು ತನ್ನ ಮನೆಗೆ ಕರೆಸಿಕೊಳ್ಳುತ್ತಿದ್ದ ಅರ್ಪಿತಾ, ಬಳಿಕ ಪೊಲೀಸರು, ಮಾಧ್ಯಮದವರ ಸೋಗಿನಲ್ಲಿ ಬೆದರಿಕೆ ಒಡ್ಡಿ ಹಣ, ಚಿನ್ನಾಭರಣ ಕಸಿಯುತ್ತಿದ್ದರು.

ಈ ಕುರಿತು ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.