ರಾಜಕೀಯ ನಾಯಕರು ಶೇರ್​ ಮಾಡಿರುವ ಅಭಿನಂದನ್​ ಫೋಟೋ ಇರುವ ಪೋಸ್ಟ್​ಗಳನ್ನು ತೆಗೆಯಲು ಫೇಸ್​ಬುಕ್​ಗೆ ನಿರ್ದೇಶನ

ನವದೆಹಲಿ: ಇಲ್ಲಿನ ವಿಶ್ವಾಸನಗರದ ಶಾಸಕ ಸೇರಿ ಹಲವರು ಫೇಸ್​ಬುಕ್​ನಲ್ಲಿ ಶೇರ್​ ಮಾಡಿಕೊಂಡಿದ್ದ ಫೋಟೋಗಳನ್ನು ಅಲ್ಲಿಂದ ತೆಗೆಯಲು ಚುನಾವಣಾ ಆಯೋಗ ಫೇಸ್​ಬುಕ್​ಗೆ ಸೂಚನೆ ನೀಡಿದೆ.

ಶಾಸಕ ಓಂಪ್ರಕಾಶ್​ ಶರ್ಮಾ ಮಾ.1ರಂದು ಎರಡು ಪೋಸ್ಟ್​ಗಳನ್ನು ಶೇರ್​ ಮಾಡಿದ್ದರು. ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್, ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ಜತೆ ತಮ್ಮ ಫೋಟೋ ಇರುವ ಪೋಸ್ಟ್​ ಇದಾಗಿತ್ತು. ಸೈನ್ಯವನ್ನು, ಯೋಧರನ್ನು ರಾಜಕೀಯ ಪರ ಪ್ರಚಾರಕ್ಕೆ ಬಳಸಿಕೊಳ್ಳದಿರಲು ಚುನಾವಣಾ ಆಯೋಗ ಈಗಾಗಲೇ ರಾಜಕೀಯ ಪಕ್ಷಗಳಿಗೆ ಸೂಚನೆ ನೀಡಿದ್ದು, ಅಂಥ ಫೋಟೋಗಳನ್ನು ಯಾರಾದರೂ ರಾಜಕೀಯ ನಾಯಕರು ಹಾಕಿದರೆ ಅದನ್ನು ಫಿಲ್ಟರ್​ ಮಾಡುವಂತೆ ಫೇಸ್​ಬುಕ್​, ಟ್ವಿಟರ್​ಗಳಿಗೂ ಸೂಚನೆ ನೀಡಿದೆ.

ಚುನಾವಣೆ ಸುಗಮಗೊಳಿಸಲು ಎರಡು ತಿಂಗಳಿನಿಂದ ಚುನಾವಣಾ ಆಯೋಗ ಸಾಮಾಜಿಕ ಜಾಲತಾಣದ ಅಧಿಕಾರಿಗಳ ಜತೆ ಸಭೆ, ಚರ್ಚೆ ನಡೆಸುತ್ತಿದೆ ಎನ್ನಲಾಗಿದೆ.