ಕಣ್ಣುಗಳಿಂದ ಮಾನಸಿಕ ಆರೋಗ್ಯ ಸುಧಾರಣೆ ಸಾಧ್ಯವೆಂದ ಅಧ್ಯಯನ!

ವಾಷಿಂಗ್ಟನ್​: ವೇಗವಾಗಿ ಬೆಳೆಯುತ್ತಿರುವ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಕೆಲಸದ ಒತ್ತಡವು ಒಂದು ಜಟಿಲ ಸಮಸ್ಯೆಯಾಗಿ ಉಳಿದುಕೊಂಡಿದೆ. ಇದರಿಂದಾಗಿ ಮಾನವನಲ್ಲಿ ಒತ್ತಡದ ಸಮಸ್ಯೆ ಕಾಡಲಾಂಭಿಸಿದ್ದು, ಇದರಿಂದ ಹೊರಬರಲಾರದೇ ಪ್ರತಿನಿತ್ಯ ನರಕಯಾತನೆ ಪಡುತ್ತಿದ್ದಾನೆ. ಆದರೆ, ಈ ಸಮಸ್ಯೆಗೆ ನಮ್ಮಲ್ಲಿರುವ ಕಣ್ಣುಗಳೇ ಪರಿಹಾರ ಎಂಬುದು ಹೊಸ ಅಧ್ಯಯನ ಒಂದರಿಂದ ತಿಳಿದುಬಂದಿದೆ.

ಹೌದು, ನಮ್ಮ ಕಣ್ಣುಗಳು ನಮ್ಮಲ್ಲಿರುವ ಒತ್ತಡಕ್ಕೆ ಪರಿಹಾರಕ್ಕೆ ಸೂಚಿಸುತ್ತವೆ ಎಂದು ಆಧ್ಯಯನ ಹೇಳುತ್ತಿದೆ. ಅಮೆರಿಕದ ಮಿಸ್ಸೋರಿ-ಕೊಲೋಂಬಿಯಾ ವಿಶ್ವವಿದ್ಯಾಲಯದ ಸಂಶೋಧನಾ ತಂಡ ಒಬ್ಬ ವ್ಯಕ್ತಿಯು ಮಾನಸಿಕ ಸ್ಥಿತಿಯನ್ನು ತೆಗೆದುಕೊಂಡು ಅಧ್ಯಯನ ನಡೆಸಿದ್ದು, ವ್ಯಕ್ತಿಯ ಕಣ್ಣುಗಳು ಬಹುಕಾರ್ಯಗಳಿಗೆ ಪರಿಹಾರವನ್ನು ಒದಗಿಸುತ್ತದೆ. ಅದರಲ್ಲಿ ಒತ್ತಡವನ್ನು ನಿಭಾಯಿಸುವುದು ಒಂದು ಮಾರ್ಗವಾಗಿದೆ ಎಂದು ಹೇಳಿದೆ.

ನಿಮ್ಮ ಆರೋಗ್ಯದಲ್ಲಿ ಏರುಪೇರಾದರೇ, ವೈದ್ಯರು ನಿಮ್ಮ ದೇಹದಲ್ಲಿ ಏನಾಗಿದೆ ಎಂದು ಕಂಡುಹಿಡಿಯುತ್ತಾರೆ. ಆದರೆ, ಮಾನಸಿಕ ಸ್ಥಿತಿಯ ಬಗ್ಗೆ ಖಚಿತವಾಗಿ ತಿಳಿದುಕೊಳ್ಳಲು ತುಸು ಕಷ್ಟವಾಗುತ್ತದೆ. ಆದರೆ, ಕಣ್ಣಿನ ಪಾಪೆಯ ಗಾತ್ರದಿಂದ ಮತ್ತೊಬ್ಬರ ಮಾನಸಿಕ ಸ್ಥಿತಿಯನ್ನು ಅಳೆಯಬಹುದು ಎಂದು ಸಂಶೋಧಕ ಜಂಗ್ ಹೈಪ್ ಕಿಮ್ ಅವರು ತಿಳಿಸಿದ್ದಾರೆ.

ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನು ಸಂಶೋಧನಾ ತಂಡ ಮಾನಸಿಕ ಒತ್ತಡವನ್ನು ಅಳೆಯಲು ತಮ್ಮ ಅಧ್ಯಯನಕ್ಕೆ ಬಳಸಿಕೊಂಡಿತ್ತು. ಕೆಲಸದ ಒತ್ತಡದ ಆಧಾರದ ಮೇಲೆ ಉದ್ಯೋಗಿಗಳ ಕಣ್ಣಿನ ಪಾಪೆಯನ್ನು ಅಧ್ಯಯನ ನಡೆಸಿ ಫಲಿತಾಂಶವನ್ನು ತಾಳೆ ನೋಡಿದ್ದಾರೆ.

ಕಣ್ಣಿನ ಟ್ರ್ಯಾಕಿಂಗ್ ತಂತ್ರಜ್ಞಾನ ಹಾಗೂ ಅದರ ಚಲನೆಯ ಮೂಲಕ ಅನಿಲ ಸಂಸ್ಕರಣಾಗಾರ ಸಸ್ಯ ನಿಯಂತ್ರಣ ಕೊಠಡಿ ಹಾಗೂ ಕೃತಕ ಆಯಿಲ್​ ಅನ್ನು ಬಳಸಿಕೊಂಡು ಉದ್ಯೋಗಿಗಳನ್ನು ಆಧ್ಯಯನ ನಡೆಸಿದ್ದಾರೆ. ಈ ವೇಳೆ ಉದ್ಯೋಗಿಗಳಲ್ಲಿ ಕೆಲವು ಅನಿರೀಕ್ಷಿತ ಬದಲಾವಣೆಗಳು ಕಂಡುಬಂದಿದೆ. ತಾವು ಮಾಡುವ ಕೆಲಸದಲ್ಲಿ ಹೆಚ್ಚು ಸಂಕೀರ್ಣತೆ ಇದ್ದರೆ, ವ್ಯಕ್ತಿಯ ಕಣ್ಣಿನ ಚಲನೆಯಲ್ಲಿ ಗಂಭೀರತರವಾದ ಬದಲಾವಣೆಗಳು ಆಗುತ್ತವೆ. ಇದರಿಂದ ಆತನ ಮಾನಸಿಕ ಸ್ಥಿತಿಯನ್ನು ಕಂಡುಕೊಳ್ಳಬಹುದು ಎಂದು ತಿಳಿದುಬಂದಿದೆ. (ಏಜೆನ್ಸೀಸ್​)