ಜಮಖಂಡಿ: ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ಬಸಣ್ಣವರ ಮಾತನಾಡಿ, ಪ್ರತಿ ಶಾಲೆಯಲ್ಲೂ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆ ಅವಶ್ಯಕತೆ ಇದೆ. ಪಠ್ಯೇತರ ಚಟುವಟಿಕೆ ನಡೆಸುವಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಶಿಕ್ಷಣ ಇಲಾಖೆ ಜತೆ ತಾವು ಕೂಡ ಕೈಜೊಡಿಸಬೇಕು ಎಂದು ಸಲಹೆ ನೀಡಿದ ಅವರು, ದೈಹಿಕ ಶಿಕ್ಷಣ ಶಿಕ್ಷಕರ ಸಮಸ್ಯೆಗಳಿಗೆ ಇಲಾಖೆ ಸ್ಪಂದಿಸುತ್ತದೆ ಎಂದು ಭರವಸೆ ನೀಡಿದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಪಂಚಾಕ್ಷರಿ ನಂದೇಶ, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹ ಕಲ್ಲೊಳ್ಳಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಜಿ.ಕಡಕೋಳ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಬಸವರಾಜ ಅನಂತಪೂರ, ಎಂ.ಎಸ್. ಹುದ್ದಾರ, ಬಾಹುಬಲಿ ನ್ಯಾಮಗೌಡ, ಮಹಾವೀರ ಜಮಖಂಡಿ, ವಿಜಯಮಹಾಂತೇಶ ಪಾಟೀಲ, ರಾಜು ಮಾಳಿ, ಶರಣಪ್ಪ ಅರೆಗೋಳ, ಈರಣ್ಣ ಕೋಷ್ಠಿ, ಶಾಂತಪ್ಪ ಕೇರುಟಗಿ, ಸುರೇಶ ಚಿನಗುಂಡಿ, ಬಸಯ್ಯ ಗುಹೇಶ್ವರಮಠ, ವಿಜಯಲಕ್ಷ್ಮಿ ಪಾಟೀಲ, ಶೋಭಾ ಕವಲಾಪೂರ, ಬಸಯ್ಯ ಚಿಕ್ಕುರಮಠ ಇದ್ದರು. ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ ಭೋಸಲೆ ಸ್ವಾಗತಿಸಿದರು. ಸದಾಶಿವ ಕುಂಬಾರ ವಂದಿಸಿದರು.