ಕಳಸ: ವಿದ್ಯಾರ್ಥಿಗಳ ಮಾನಸಿಕ ಸಧೃಡತೆಗೆ ಪಠ್ಯದ ಜತೆ ಪಠ್ಯೇತರ ಚಟುವಟಿಕೆ ಅವಶ್ಯಕ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಕಳಸದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ 2023-24ನೇ ಸಾಲಿನ ಸಾಂಸ್ಕೃತಿಕ , ಕ್ರೀಡೆ, ಎನ್‌ಎಸ್‌ಎಸ್, ಯುವ ರೆಡ್‌ಕ್ರಾಸ್, ರೋವರ್ಸ್ ಮತ್ತು ರೇಂಜರ್ಸ್ ಹಾಗೂ ಇತರೆ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣಕ್ಕೆ ಕೊರತೆ ಇಲ್ಲ . ಆದರೆ ಪದವಿ ಮುಗಿದ ಮೇಲೆ ಮುಂದೇನು ಮಾಡಬೇಕು ಎನ್ನುವ ಗೊಂದಲದಲ್ಲಿ ವಿದ್ಯಾರ್ಥಿಗಳು ಇರುತ್ತಾರೆ ಅದಕ್ಕಾಗಿ ನಾವು ವಿದ್ಯಾರ್ಥಿ ದೆಸೆಯಲ್ಲಯೇ ಮುಂದಿನ ಗುರಿ ಇಟ್ಟುಕೊಳ್ಳಬೇಕು. ಪದವಿ ಮುಗಿದ ಮೇಲೆ ಸಾಕಷ್ಟು ಅವಕಾಶಗಳು ಇವೆ ಆದರೆ ಅದನ್ನು ಉಪಯೋಗಿಸಿಕೊಳ್ಳುವ ರೀತಿ ನಮ್ಮಲ್ಲಿರಬೇಕು ಎಂದು ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ರಾಜೇಂದ್ರ ಪ್ರಸಾದ್ ಹಿತ್ಲುಮಕ್ಕಿ ಮಾತನಾಡಿ, ಕಳಸ ಸರ್ಕಾರಿ ಕಾಲೇಜು ಖಾಸಗಿ ಕಾಲೇಜನ್ನು ಮೀರಿಸುವಂತಿದೆ. ಕಾಲೇಜಿಗೆ ಪ್ರತಿ ವರ್ಷ ಹೆಚ್ಚಿನ ಮಕ್ಕಳು ಪ್ರವೇಶಾತಿ ಪಡೆಯುವ ವಾತಾವರಣ ನಿರ್ಮಾಣವಾದರೆ ಕಾಲೇಜು ಇನ್ನಷ್ಟು ಅಭಿವೃದ್ಧಿಗೊಳ್ಳುತ್ತದೆ. ಶಿಕ್ಷಣ ಎಲ್ಲರಿಗೂ ಸಿಗುತ್ತಿದೆ ಆದರೆ ಶಿಕ್ಷಣದಿಂದ ಉದ್ಯೋಗ ಅವಕಾಶಗಳು ಕಡಿಮೆಯಾಗುತ್ತಿವೆ ಎಂದು ಹೇಳಿದರು.
ಪ್ರಾಚಾರ್ಯ ವಿನಯ ಕುಮಾರ್ ಶೆಟ್ಟಿ, ಪಾಲಕರು ಮತ್ತು ಅಧ್ಯಾಪಕರ ವೇದಿಕೆ ಅಧ್ಯಕ್ಷ ಅಜಿತ್ ಪ್ರಸಾದ್ ಜೈನ್, ಯೋಗ ಗುರು ವೈ. ಪ್ರೇಮ್ ಕುಮಾರ್, ಸಿಡಿಸಿ ಸದಸ್ಯರಾದ ಕೆ.ಸಿ.ಮಹೇಶ್, ಸುಜಿತ್, ಶಾಹುಲ್‌ಹಮೀದ್, ನೌಶದ್ ಆಲಿ ಹೆಮ್ಮಕ್ಕಿ, ಬಾಲಕಷ್ಣ, ಪ್ರಭಾಮಣಿ, ಪಣೀಶ್, ಸಾತ್ವಿಕ್, ಉಪನ್ಯಾಸಕರಾದ ಡಾ.ಆದಿತ್ಯ ಆಡಿಗ, ಸುೀಧಿರ್ ಜೈನ್, ವಿಶು ಕುಮಾರ್, ಸೋಮಶೇಖರ, ಸಂತೋಷ್, ನಿವೇದಿತಾ ಇತರರು ಇದ್ದರು.
ಪಠ್ಯದ ಜತೆ ಪಠ್ಯೇತರ ಚಟುವಟಿಕೆ ಅವಶ್ಯಕ

You Might Also Like
ನಿಮ್ಮ ಕನಸಿನಲ್ಲಿ ಗಿಳಿ, ಗೂಬೆ, ನವಿಲು ಕಾಣಿಸಿಕೊಂಡಿದ್ಯಾ? ಈ ಪಕ್ಷಿಗಳಿಂದ ಬರಲಿದ್ಯಾ ಅದೃಷ್ಟ.. dreams
dreams: ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ಕನಸುಗಳು ಬಹಳ ಮುಖ್ಯ. ಕನಸಿನಲ್ಲಿ ಗಿಳಿ, ಗೂಬೆ, ನವಿಲು ಮುಂತಾದ…
ಪ್ರತಿದಿನ ಊಟಕ್ಕೆ ಗರಿಗರಿ ಹಪ್ಪಳ ಬೇಕಾ? ಹಾಗಿದ್ರೆ ಆರೋಗ್ಯ ಬಗ್ಗೆ ಇರಲಿ ಎಚ್ಚರ..papad
papad: ಹಪ್ಪಳಗಳನ್ನು ಊಟದಲ್ಲಿ ರುಚಿ ಇರಲಿ ಎಂಬ ಕಾರಣಕ್ಕೆ ಬಳಸುತ್ತಾರೆ. ಹಾಗಾಗಿ ಊಟಕ್ಕೆ ರುಚಿ ಇದೆ…
ಬೇಸಿಗೆಯಲ್ಲಿ ಈ 5 ಪದಾರ್ಥಗಳೊಂದಿಗೆ ಅಪ್ಪಿ ತಪ್ಪಿಯೂ ಮೊಸರು ತಿನ್ನಬೇಡಿ! | Yogurt
Yogurt : ಬೇಸಿಗೆಯಲ್ಲಿ, ಮೊಸರು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಆದರೆ, ಮೊಸರಿನೊಂದಿಗೆ ಅಥವಾ ಅದರ…