More

  ರಾಜ್ಯ ಸರ್ಕಾರದಿಂದ ಜನರ ಸುಲಿಗೆ: ಬಿ.ವೈ.ರಾಘವೇಂದ್ರ

  ಆನಂದಪುರ: ರಾಜ್ಯದಲ್ಲಿ ಕಾಂಗ್ರೆಸ್ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಪರೋಕ್ಷವಾಗಿ ಜನರ ಸುಲಿಗೆಯನ್ನು ಆಧರಿಸಿವೆ. ಬರುವ ಲೋಕಸಭಾ ಚುನಾವಣೆಯಲ್ಲಿ ಇಂತಹ ಗ್ಯಾರಂಟಿಗೆ ಮರುಳಾಗಿ ದೇಶವನ್ನು ಅಧಃಪತನಕ್ಕೆ ಸಾಗಿಸಬಾರದು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

  ಗ್ರಾಮದಲ್ಲಿ ದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿದ ಅವರು, ವಿದ್ಯುತ್ ಸಂಪರ್ಕದ ಠೇವಣಿ ಹಣ ನಾಲ್ಕು ಪಟ್ಟು ಏರಿಸಲಾಗಿದೆ. ವಿದ್ಯುತ್ ದರವನ್ನು ದ್ವಿಗುಣಗೊಳಿಸಿ ಉಚಿತ ಯೋಜನೆ ಜಾರಿಗೆ ತರಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಅಕ್ಕಿ ನೀಡಲು ಸಾಧ್ಯವಾಗದೆ ಜನರಿಗೆ ಮೋಸ ಮಾಡುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿ ಗಂಡಸರಿಂದ ದುಪ್ಪಟ್ಟು ಟಿಕೆಟ್ ಹಣ ಪಡೆಯಲಾಗುತ್ತಿದೆ ಎಂದು ದೂರಿದರು.
  ಕಳೆದ 10 ವರ್ಷಗಳಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶವನ್ನು ಜಗತ್ತಿನ ಶಕ್ತಿಶಾಲಿ ರಾಷ್ಟ್ರವನ್ನಾಗಿ ರೂಪಿಸಿದೆ. ಇನ್ನಷ್ಟು ಭದ್ರತೆ ಮತ್ತು ದೇಶದ ಪ್ರಗತಿಗೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಹೊಣೆ ಕಾರ್ಯಕರ್ತರದ್ದಾಗಿದೆ ಎಂದರು.
  ಮಾಜಿ ಸಚಿವ ಹರತಾಳು ಹಾಲಪ್ಪ, ಜಿಪಂ ಮಾಜಿ ಸದಸ್ಯ ರತ್ನಾಕರ ಹೊನಗೋಡು, ಭರ್ಮಪ್ಪ ಅಂದಾಸುರ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಆನಂದಪುರ ಗ್ರಾಪಂ ಅಧ್ಯಕ್ಷ ಮೋಹನ್‌ಕುಮಾರ್, ಯಡೇಹಳ್ಳಿ ಗ್ರಾಪಂ ಅಧ್ಯಕ್ಷೆ ರೇಣುಕಮ್ಮ, ಪ್ರಮುಖರಾದ ಪ್ರಸನ್ನ ಕೆರೆಕೈ, ಶಾಂತಕುಮಾರ್ ಆಚಾಪುರ, ಅಶೋಕ ನರಸೀಪುರ, ರೇವಪ್ಪ ಹೊಸಕೊಪ್ಪ, ಕೆ.ಆರ್.ರಾಜು ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts