ಅಂತರಗಂಗೆ ಚಾರಣದಲ್ಲಿ ಹಣ ಸುಲಿಗೆ?

blank

ಕಿರುವಾರ ಎಸ್.ಸುದರ್ಶನ್ ಕೋಲಾರ
ಅಂತರಗಂಗೆ ಟ್ರೆಕ್ಕಿಂಗ್ ಜನಪ್ರಿಯವಾದಂತೆ ಪ್ರವಾಸಿಗರ ಭೇಟಿಯೂ ದಿನೇದಿನೆ ಹೆಚ್ಚಾಗುತ್ತಿದೆ. ಆದರೆ, ಚಾರಣಿಗರು ಪಾವತಿಸಿರುವ ಶುಲ್ಕವು ಗೈಡ್‌ಗಳು ಹಾಗೂ ಸ್ಥಳೀಯರ ಪಾಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಕೋಲಾರಕ್ಕೆ ಕೂಗಳತೆ ದೂರದಲ್ಲಿರುವ ಅಂತರಗಂಗೆ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿದ್ದು, ಇಲ್ಲಿಗೆ ಬರುವ ಪ್ರವಾಸಿಗರ ಸಂಖೆ್ಯ ಏರಿಕೆಯಾಗುತ್ತಿದೆ. ಇದೊಂದು ಚಾರಣ ಪ್ರಿಯರಿಗೆ ನೆಚ್ಚಿನ ಸ್ಥಳವಾಗಿ ಮಾರ್ಪಟ್ಟಿದೆ. ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದಂತಿರುವ ಪ್ರೇಕ್ಷಣಿಯ ಸ್ಥಳದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಆರಂಭವಾಗಿರುವುದು ಆತಂಕ ಮೂಡಿಸಿದೆ.
ಅಕ್ರಮ ಹೇಗೆ?:
ಅಂತರಗಂಗೆ ಬೆಟ್ಟದ ಚಾರಣ ನಿರ್ವಹಣೆಯನ್ನು ಅರಣ್ಯ ಇಲಾಖೆಯು ಸರ್ಕಾರದ ಮೂಲಕ ಇಕೋ ಕ್ಲಬ್ ಸಂಸ್ಥೆಗೆ ವಹಿಸಿದೆ. ಜತೆಗೆ ಆನ್‌ಲೈನ್ ಬುಕ್ಕಿಂಗ್ ಸೇವೆ ಕಲ್ಪಿಸಿದ್ದು, ಒಬ್ಬರಿಗೆ ಟ್ರಕ್ಕಿಂಗ್ ಶುಲ್ಕವನ್ನು 250 ರೂ. ನಿಗದಿಪಡಿಸಿದೆ. ಜತೆಗೆ ಹೆಚ್ಚು ಪ್ರವಾಸಿಗರನ್ನು ಸೆಳೆಯಲು ಆನ್‌ಲೈನ್‌ನಲ್ಲಿ ರಿಯಾಯಿತಿ ದರ ಸಹ ನೀಡಲಾಗುತ್ತಿದೆ. ಹಾಗೆಯೇ ಪ್ರವಾಸೋದ್ಯಮ ಇಲಾಖೆಯೂ ಪ್ರವಾಸಿ ಮಾರ್ಗದರ್ಶಕರನ್ನು ನಿಯೋಜನೆ ಮಾಡಿದೆ.
ಆದರೆ, ಆನ್‌ಲೈನ್ ಬುಕ್ಕಿಂಗ್ ವಿಚಾರ ತಿಳಿಯದ ಕೆಲ ಪ್ರವಾಸಿಗರು ನೇರವಾಗಿ ಟ್ರೆಕ್ಕಿಂಗ್‌ಗೆ ಬಂದಾಗ ಸ್ಥಳೀಯರು ಹೆಚ್ಚು ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಜತೆಗೆ ಬೆಟ್ಟದ ತಪ್ಪಲಿನಲ್ಲೇ ದ್ವಿಚಕ್ರ ಹಾಗೂ ಕಾರು ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದು, ಕೆಲ ಸ್ಥಳೀಯರು ಅನಽಕೃತವಾಗಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುತ್ತಿರುವುದು ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ.

* ಸರ್ಕಾರದ ಖಜಾನೆ ಸೇರದ ಹಣ

ಸಾಮಾಜಿಕ ಜಾಲತಾಣಗಳಲ್ಲಿ ಅಂತರಗಂಗೆ ಟ್ರೆಕ್ಕಿಂಗ್ ಬಾರಿ ಸದ್ದು ಮಾಡುತ್ತಿದೆ. ಇತ್ತೀಚೆಗೆ ಜಿಲ್ಲಾಡಳಿತ ಪ್ರವಾಸಿ ತಾಣದ ಬಗ್ಗೆ ವಿಡಿಯೋ ಮಾಡಿ ಹರಿಬಿಟ್ಟು ಪ್ರಚಾರ ಮಾಡುತ್ತಿದೆ. ಹೆಚ್ಚು ಪ್ರವಾಸಿಗರು ಆಗಮಿಸುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಗೈಡ್‌ಗಳು ಚಾರಣಿಗರಿಂದ ಶುಲ್ಕ ಪಡೆದರೂ ಯಾವುದೇ ರೀತಿ ರಸೀದಿ ನೀಡುತ್ತಿಲ್ಲ. ಹಾಗೆಯೇ ಆನ್‌ಲೈನ್‌ನಲ್ಲಿ ನಿಗದಿಪಡಿಸಿರುವ 250 ರೂ.ಗಿಂತ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿದ್ದು, ಈ ಹಣವನ್ನು ಸರ್ಕಾರಕ್ಕೆ ಪಾವತಿಸುತ್ತಿಲ್ಲ ಎನ್ನಲಾಗಿದ್ದು, ಬುಕ್ಕಿಂಗ್ ಇಲ್ಲದೆ ನೇರವಾಗಿ ಬರುವವರ ಬಳಿ ಒಬ್ಬರಿಗೆ 500 ರೂ.ನಂತೆ ವಸೂಲಿ ಮಾಡಲಾಗುತ್ತಿದೆ. ಒಂದು ವೇಳೆ ಹಣ ನಿರಾಕರಿಸಿದರೆ ಸ್ಥಳಕ್ಕೆ ಹೋಗಲು ಅಡ್ಡಿಪಡಿಸುತ್ತಾರೆ ಎಂದು ಪ್ರವಾಸಿಗರು ಆರೋಪಿಸಿದ್ದಾರೆ.

* ಚಾರಣಿಗರ ಹಿತ ಕಾಪಾಡಿ
ಟ್ರೆಕ್ಕಿಂಗ್‌ಗೆ ಬರುವವರಿಗೆ ಸುರಕ್ಷತೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಮಾಹಿತಿ ನೀಡಬೇಕು. ಆದರೆ ಇಲ್ಲಿ ಇಂತಹ ಸುರಕ್ಷತಾ ಕ್ರಮ ಪಾಲನೆ ಮಾಡುವ ಬಗ್ಗೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಸುಮ್ಮನೆ ನಡೆದುಕೊಂಡು ಹೋಗಬೇಕಿದೆ. ಆಕರ್ಷಕ ಸ್ಥಳ ತೋರಿಸಬೇಕಾದರೆ ಪ್ರತ್ಯೇಕ ದುಡ್ಡು ಕೇಳುತ್ತಾರೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ಇಲ್ಲಿ ಸ್ಥಳೀಯರ ಹಾವಳಿ ಹೆಚ್ಚಾಗಿದ್ದು, ಸಂಬಂಧ ಪಟ್ಟ ಇಲಾಖಾಧಿಕಾರಿಗಳು ಗಮನ ಹರಿಸಿ ಚಾರಣಿಗರಿಗೆ ರಕ್ಷಣೆ ನೀಡಬೇಕು ಎಂದು ಪ್ರವಾಸಿಗರು ಒತ್ತಾಯಿಸಿದ್ದಾರೆ.

* ಅಕ್ರಮ ಚಟುವಟಿಕೆಗಳ ಆತಂಕ
ಪ್ರವಾಸಿಗರು ಆಗಮಿಸುತ್ತಿರುವುದು ಹೆಚ್ಚಾಗುತ್ತಿರುವುದರಿಂದ ಅಂತರಗಂಗೆ ಬೆಟ್ಟದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗುವ ಆತಂಕ ಎದುರಾಗಿದೆ. ಮದ್ಯ ಸೇವನೆ, ನಾಯಿಕೊಡೆಗಳಂತೆ ತಲೆಯೆತ್ತಿರುವ ಅಂಗಡಿಗಳು, ಎಲ್ಲೆಂದರಲ್ಲಿ ಬಾಟಲಿ, ಕಸ ರಾಶಿ ಹಾಕುತ್ತಿರುವುದು ಪ್ರವಾಸಿಗರ ಖುಷಿಯನ್ನು ಕಸಿಯುವಂತೆ ಮಾಡಿದೆ.


ಆಟೋ ಚಾಲಕರಿಂದ ವಸೂಲಿ ದಂಧೆ

ಕೋಲಾರದ ಕೇಂದ್ರ ಬಸ್ ನಿಲ್ದಾಣದಿಂದ ಅಂತರಗಂಗೆ ಬೆಟ್ಟಕ್ಕೆ ೪ ಕಿಮೀ ದೂರವಿದೆ. ಆದರೆ, ಬಸ್ ಸೌಕರ್ಯ ಇಲ್ಲದ ಕಾರಣ ಆಟೋ ಚಾಲಕರು ನೂರಾರು ರೂಪಾಯಿ ವಸೂಲಿ ಮಾಡುತ್ತಾರೆ. ಬಸ್ ನಿಲ್ದಾಣದ ವೃತ್ತದಿಂದ ಬೆಟ್ಟಕ್ಕೆ ತೆರಳಲು 100 ರೂ. ಬಾಡಿಗೆಯಾದರೆ, ಬೆಟ್ಟದಿಂದ ವಾಪಸ್ ಬಸ್ ನಿಲ್ದಾಣಕ್ಕೆ ಮರಳಲು 150 ರಿಂದ 200 ರೂ. ಕೊಡಲೇಬೇಕು. ಚೌಕಾಸಿ ಮಾಡಲು ಹೋದರೆ ನಡೆದುಕೊಂಡೇ ಹೋಗುವಂತೆ ಧಮ್ಕಿ ಹಾಕುತ್ತಾರೆ, ಅನಿವಾರ್ಯವಾಗಿ ದುಪ್ಪಟ್ಟು ಹಣ ಕೊಟ್ಟು ಬರಬೇಕಾದ ಪರಿಸ್ಥಿತಿ ಇದೆ. ಬಸ್ ಸೌಕರ್ಯ ಕಲ್ಪಿಸಿ ಇಲ್ಲವೇ, ಆಟೋಗಳ ವಸೂಲಿ ದಂಧೆಗೆ ಕಡಿವಾಣ ಹಾಕಬೇಕು ಎಂದು ಬೆಟ್ಟಕ್ಕೆ ಬಂದಿದ್ದ ವಿಜಯಪುರದ ಪ್ರವಾಸಿಗರೊಬ್ಬರು ಒತ್ತಾಯಿಸಿದರು.

ಕೋಟ್…
ಅಂತರಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್ ಬರುವವರಿಗೆ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಪಾವತಿ ಮಾಡಿದ ಶುಲ್ಕ ನೇರವಾಗಿ ಸರ್ಕಾರದ ಖಾತೆಗೆ ಹೋಗುತ್ತದೆ. ಪ್ರವಾಸಿಗರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಪರಿಶೀಲಿಸಿ ಕ್ರಮವಹಿಸಲಾಗುವುದು.
– ಏಡುಕೊಂಡಲು, ಡಿಸಿಎಫ್, ಕೋಲಾರ

ಕೋಟ್..
ಬೆಂಗಳೂರಿನಿಂದ ಸ್ನೇಹಿತರೊಂದಿಗೆ ಅಂತರಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗಾಗಿ ಬಂದಿದ್ದೆವು. ಆನ್‌ಲೈನ್ ಬುಕ್ಕಿಂಗ್ ಬಗ್ಗೆ ಗೊತ್ತಿರಲಿಲ್ಲ. ನೆರವಾಗಿ ಬಂದಿದ್ದ ಹಿನ್ನೆಲೆಯಲ್ಲಿ ಕೆಲವರು ಬಂದು ಒಬ್ಬರಿಗೆ 500 ರೂ. ಕೊಟ್ಟರೆ ಮೇಲಕ್ಕೆ ಬಿಡುವುದಾಗಿ ಹೇಳಿದರು.
– ಪ್ರವಾಸಿಗ, ಬೆಂಗಳೂರು

Share This Article

ಭಾರತದ ನೋಟಿನಲ್ಲಿರುವ ಮಹಾತ್ಮ ಗಾಂಧಿಜಿ ಅವರ ಫೋಟೋ ಕ್ಲಿಕ್ಕಿಸಿದ್ದು ಯಾವಾಗ & ಎಲ್ಲಿ?; ಇಲ್ಲಿದೆ ಸಂಪೂರ್ಣ ಮಾಹಿತಿ | Information

ಭಾರತದ ನೋಟಿನಲ್ಲಿ ಮಹಾತ್ಮ ಗಾಂಧಿ ಅವರ ಫೋಟೋವನ್ನು ನೀವು ನೋಡಿರಬಹುದು. ಆದರೆ ನೋಟಿನ ಮೇಲೆ ನಗುತ್ತಿರುವ…

ಇಬ್ಬನಿಯಿಂದ ಚಳಿಗಾಲದಲ್ಲಿ ತುಳಸಿ ಗಿಡ ಹಾಳಾಗುತ್ತಿದೆಯೇ?; ಆರೈಕೆಗಾಗಿ ಇಲ್ಲಿದೆ ಸಿಂಪಲ್​ ಟ್ರಿಕ್​​ | Health Tips

ತುಳಸಿಯು ಔಷಧೀಯ ಸಸ್ಯವಾಗಿರುವುದರ ಜತೆಗೆ ಧಾರ್ಮಿಕ ನಂಬಿಕೆಗಳನ್ನೂ ಹೊಂದಿದೆ. ಈ ಸಸ್ಯವನ್ನು ಹಿಂದೂ ಧರ್ಮದಲ್ಲಿ ಅತ್ಯಂತ…

ಬಿಪಿ ಹೆಚ್ಚಾಗಲು ಈ ಆಹಾರ ಪದಾರ್ಥಗಳು ಕಾರಣವೇ; ತಜ್ಞರು ಹೇಳಿದ್ದೇನು? | Health Tips

ನೂಡಲ್ಸ್, ಪಾಪಡ್, ಉಪ್ಪಿನಕಾಯಿ, ಸಾಸ್ ಮತ್ತು ನಮ್ಕೀನ್ ಬಹುತೇಕ ಈ ಎಲ್ಲಾ ಆಹಾರ ಪದಾರ್ಥಗಳು ಪ್ರತಿಯೊಬ್ಬರ…