ಡೇಟಿಂಗ್ ಆ್ಯಪ್‌ನಲ್ಲಿ ಸಿಕ್ಕವಳಿಂದ ಸುಲಿಗೆ

blank

ಬೆಂಗಳೂರು: ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಯುವತಿ, ವಿಡಿಯೋ ಕಾಲ್ ಮಾಡಿ ಎಡಿಟೆಡ್ ವಿಡಿಯೋ ಕಳುಹಿಸಿ ಟೆಕ್ಕಿಗೆ ಬ್ಲ್ಯಾಕ್‌ಮೇಲ್ ಮಾಡಿ 64 ಸಾವಿರ ರೂ. ಸುಲಿಗೆ ಮಾಡಿದ್ದಾಳೆ.
ದೊಡ್ಡನೆಕ್ಕುಂದಿ ನಿವಾಸಿ 27 ವರ್ಷದ ಸ್‌ಟಾವೇರ್ ಇಂಜಿನಿಯರ್ ವಂಚನೆಗೆ ಒಳಗಾದವ. ಈತ ಕೊಟ್ಟ ದೂರಿನ ಮೇರೆಗೆ ವೈಟ್‌ಫೀಲ್ಡ್ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

blank

ಏ. 22ರಂದು ಡೇಟಿಂಗ್ ್ಲಾಟ್‌ಾರ್ಮ್‌ನಲ್ಲಿ ಸಾಕ್ಷಿ ಅಗರ್ವಾಲ್ ಎಂಬಾಕೆ ಪರಿಚಯವಾಗಿ ಇನ್‌ಸ್ಟಾಗ್ರಾಮ್ ಲಿಂಕ್ ಕಳುಹಿಸಿದ್ದಳು. ಅದನ್ನು ಟೆಕ್ಕಿ ಾಲೋ ಮಾಡಿದಾಗ ಅಲ್ಲಿಂದ ಚಾಟಿಂಗ್ ಶುರು ಮಾಡಿ, ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು ಸಂಭಾಷಣೆಗೆ ಇಳಿದಿದ್ದರು. ರಾತ್ರಿ ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೋ ಕರೆ ಮಾಡಿದ ಸಾಕ್ಷಿ , ತಾನು ಅರೆನಗ್ನವಾಗಿ ಕಾಣಿಸಿಕೊಂಡಿದ್ದಳು. ಬಳಿಕ ಟೆಕ್ಕಿಗೂ ಬಟ್ಟೆ ಬಿಚ್ಚುವಂತೆ ಪುಸಲಾಯಿಸಿದ್ದಳು.

ಟೆಕ್ಕಿ ಅರೆನಗ್ನವಾಗುತ್ತಿದಂತೆ ವಿಡಿಯೋ ರೆಕಾರ್ಡ್ ಮಾಡಿಕೊಂಡ ಸಾಕ್ಷಿ, ಅದನ್ನು ಎಡಿಟ್ ಮಾಡಿ ಕೂಡಲೇ ವಾಟ್ಸ್‌ಆ್ಯಪ್‌ಗೆ ಕಳುಹಿಸಿ ಬ್ಲ್ಯಾಕ್‌ಮೇಲ್ ಶುರು ಮಾಡಿದ್ದಳು. ಸಾಕ್ಷಿಯ ಮೂವರು ಸ್ನೇಹಿತರು, ಟೆಕ್ಕಿಗೆ ಕರೆ ಮಾಡಿ ‘ಹಣ ಕೊಡದೆ ಇದ್ದರೆ ನಿನ್ನ ಸ್ನೇಹಿತರಿಗೆ ವಿಡಿಯೋ ಕಳುಹಿಸಿ ಮರ್ಯಾದೆ ತೆಗೆಯುತ್ತೇನೆ’ ಎಂದಿದ್ದಳು.

ಹೆದರಿದ ಸ್‌ಟಾವೇರ್ ಇಂಜಿನಿಯರ್, ಹಂತ ಹಂತವಾಗಿ 64,800 ರೂ. ಕಳುಹಿಸಿದ್ದ. ಮತ್ತಷ್ಟು ಹಣಕ್ಕಾಗಿ ಪೀಡಿಸುತ್ತಿದ್ದಾಗ ನೊಂದ ಟೆಕ್ಕಿ, ನೊಂದು ಸಿಇಎನ್ ಠಾಣೆಗೆ ಬಂದು ದೂರು ಸಲ್ಲಿಸಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank