28.5 C
Bengaluru
Monday, January 20, 2020

ಕೂಡಲಸಂಗಯ್ಯನ ‘ನಗು’

Latest News

ವಿಪಕ್ಷ ನಾಯಕ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಲಿ: ಜಿ. ಪರಮೇಶ್ವರ್

ಬೆಂಗಳೂರು: ವಿಪಕ್ಷ ನಾಯಕ ಸ್ಥಾನ ಮತ್ತು ಕಾಂಗ್ರಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಿರಲಿ ಎಂಬ ಅಭಿಪ್ರಾಯವನ್ನು ಹಿರಿಯ ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ್...

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಗುರುತು ಪತ್ತೆ

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಚಿತ್ರ ಸಿಸಿಟಿವಿಯಲ್ಲಿ ಸೆರೆಯಾಗಿದೆ.ವಿಮಾನ ನಿಲ್ದಾಣದಲ್ಲಿರುವ ಸಿಸಿಟಿವಿಯಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ದೃಶ್ಯ ಪತ್ತೆಯಾಗಿದೆ.ಶಂಕಿತ...

ವಸತಿ ಸಹಾಯಧನ ಹೆಚ್ಚಳ ಕೋರಿ ಪ್ರಧಾನಿ ಬಳಿ ರಾಜ್ಯದ ನಿಯೋಗ : ವಸತಿ ಸಚಿವ ವಿ.ಸೋಮಣ್ಣ

ಬೆಂಗಳೂರು: ವಿಧಾನ ಸೌಧ ಕೊಠಡಿಯಲ್ಲಿ ಬೆಂಗಳೂರು ನಗರ ವಸತಿ ಯೋಜನೆ ಕುರಿತು ಸಂಸದ, ಶಾಸಕರ ಸಭೆಯಲ್ಲಿ ಸೋಮವಾರ ಈ ವಿಷಯ ತಿಳಿಸಿದರು.ಕೇಂದ್ರ ಸಹಾಯಧನ...

ಜೂಜುಕೋರರ ಗಡಿಪಾರು ಖಚಿತ: ಎಸ್‌ಪಿ ವಂಶಿಕೃಷ್ಣ ಎಚ್ಚರಿಕೆ

ಪಾವಗಡ: ಮಟ್ಕಾ ಮತ್ತು ಇಸ್ಪೀಟು ಆಡುವವರನ್ನು ಮತ್ತು ಆಡಿಸುವವರನ್ನು ಗಡಿಪಾರು ವಾಡಲು ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತುಮಕೂರು ಜಿಲ್ಲಾ ಎಸ್‌ಪಿ ಡಾ.ಕೆ.ವಂಶಿಕೃಷ್ಣ...

ವಿಶ್ವಶಾಂತಿಗೆ ಸಂತರ ಮಾರ್ಗದರ್ಶನ ಅಗತ್ಯ: ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ತುಮಕೂರು: ವಿಶ್ವವೇ ಸಂಕಷ್ಟದ ಸನ್ನಿವೇಶದಲ್ಲಿದ್ದು ಜನರ ಭಯ ತೊಲಗಿಸಲು ಸುಖ-ಶಾಂತಿ ನೆಲೆಸಲು ಸಂತರ ಮಾರ್ಗದರ್ಶನ ಅಗತ್ಯವಿದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ಸಿದ್ಧಗಂಗಾ...

ಸೆಟ್ಟಿ ಎಂ

ಬೆನೆ ಸಿರಿಯಾಳನ?

ಮಡಿವಾಳನೆಂಬೆನೆ ಮಾಚಯ್ಯನ?

ಡೋಹರನೆಂಬೆನೆ ಕಕ್ಕಯ್ಯನ?

ಮಾದಾರನೆಂಬೆನೆ ಚೆನ್ನಯ್ಯನ?

ಆನು ಹಾರುವನೆಂದರೆ

ಕೂಡಲಸಂಗಯ್ಯ ನಗುವನಯ್ಯ.

ಪ್ರಸ್ತುತ ವಚನವು ಪ್ರಶ್ನೆಗಳ ಸರಣಿಯೊಂದನ್ನು ಮುಂದಿಡುತ್ತಿದೆ. ಪ್ರಶ್ನಾರ್ಥಕ ರೂಪದಲ್ಲಿದ್ದರೂ ಇವು ಉತ್ತರವನ್ನೂ ತಮ್ಮೊಳಗೆ ಇರಿಸಿಕೊಂಡಿವೆ. ಮುಖ್ಯವಾಗಿ ಈ ಪ್ರಶ್ನೆಗಳು ಉತ್ತಮಪುರುಷದ ಸಂಬೋಧನೆಯಲ್ಲಿವೆ. ಎಂದರೆ ಇಲ್ಲಿ ಮೊದಲನೆಯದಾಗಿ ತನ್ನನ್ನು ತಾನು ಪ್ರಶ್ನಿಸಿಕೊಳ್ಳಲಾಗುತ್ತಿದೆ. ತನ್ನನ್ನು ಕುರಿತ ಪ್ರಶ್ನೆಗೆ ಇನ್ನಿತರರನ್ನು ಕುರಿತ ಪ್ರಶ್ನೆಗಳೂ ಆಗಿ ವಿಸ್ತರಣೆಗೊಳ್ಳುತ್ತಿವೆ.

ಇಲ್ಲಿಯ ಎಲ್ಲ ಪ್ರಶ್ನೆಗಳಲ್ಲಿ ಎರಡು ಭಾಗಗಳಿವೆ. ಒಂದರಲ್ಲಿ ವ್ಯಕ್ತಿ ಇದ್ದರೆ ಇನ್ನೊಂದರಲ್ಲಿ ಆಯಾ ವ್ಯಕ್ತಿಗೆ ಸಂಬಂಧಿಸಿದ ವಿಶೇಷಣಗಳಿವೆ. ಹಾಗೆ ನೋಡಿದರೆ ಆ ವಿಶೇಷಣಗಳಿಗೇ ನಿಜವಾದ ಅಸ್ತಿತ್ವವು ಬಂದಂತಿದ್ದು ವ್ಯಕ್ತಿಯ ಹೆಸರೇ ಗೌಣವಾದ ಪಾತ್ರವನ್ನು ನಿರ್ವಹಿಸುತ್ತಿರುವಂತಿದೆ. ಆದ್ದರಿಂದಲೇ ಸೆಟ್ಟಿಯಾಗಿ ಸಿರಿಯಾಳನೂ ಮಡಿವಾಳನಾಗಿ ಮಾಚಯ್ಯನೂ ಡೋಹರನಾಗಿ ಕಕ್ಕಯ್ಯನೂ ಮಾದಾರನಾಗಿ ಚೆನ್ನಯ್ಯನೂ ತಮ್ಮ ತಮ್ಮ ಪ್ರಾಥಮಿಕ ಅಸ್ತಿತ್ವದಲ್ಲಿರುವಂತಿದೆ. ಆದರೆ ವಚನವು ಇದನ್ನು ಪ್ರಶ್ನಿಸುತ್ತಿದೆ.

ವಚನದ ನಿರೂಪಣೆಯನ್ನೇ ಹಿಡಿದು ಮುಂದುವರಿಯುವುದಾದರೆ, ಈವರೆಗೆ ಸಿರಿಯಾಳನನ್ನು ‘ಸೆಟ್ಟಿ’ ‘ಎನ್ನ’ಲಾಗುತ್ತಿದೆ; ಮಾಚಯ್ಯನನ್ನು ‘ಮಡಿವಾಳ’ ‘ಎನ್ನ’ಲಾಗುತ್ತಿದೆ. ಉಳಿದವರ ವಿಚಾರದಲ್ಲೂ ಹೀಗೆಯೇ ಆಗಿದೆ. ಕೊನೆಗೆ ತನ್ನ ವಿಚಾರದಲ್ಲೂ ಇದು ಹೀಗೆಯೇ ಇದೆ. ಉಳಿದವರು ತನ್ನನ್ನು ‘ಹಾರುವನು’ ಎನ್ನುತ್ತಿರುವುದಷ್ಟೇ ಅಲ್ಲದೆ ತನ್ನನ್ನು ತಾನೂ ಹೀಗೆ ಅಂದುಕೊಳ್ಳುವುದಾಗಿದೆ. ಹೀಗಾಗಿ ಇಲ್ಲಿ ಎಲ್ಲರಿಗೂ ಎರಡು ಅಸ್ತಿತ್ವಗಳಿವೆ. ಒಂದು, ‘ಇರುವ’ ಅಸ್ತಿತ್ವ; ಇನ್ನೊಂದು, ‘ಎನ್ನಲಾಗುತ್ತಿರುವ’ ಅಸ್ತಿತ್ವ. ಈ ಅಸ್ತಿತ್ವಗಳ ಬಗ್ಗೆಯೇ ವಚನದ ಮೂಲಭೂತವಾದ ಪ್ರಶ್ನೆಯಿದೆ.

ವಚನದ ನಿರೂಪಣೆಯ ಕ್ರಮವು ಸಿರಿಯಾಳನಿಂದ ಪ್ರಾರಂಭಗೊಂಡು ತನ್ನವರೆಗಿನ ಮುಕ್ತಾಯದಲ್ಲಿದೆ. ಆದರೆ ನಿಜವಾಗಿ ನೋಡಿದರೆ ಈ ಪ್ರಶ್ನೆಯ ಪ್ರಕ್ರಿಯೆ ತನ್ನಿಂದಲೇ ಪ್ರಾರಂಭವಾಗಿ ಉಳಿದವರಿಗೆ ವಿಸ್ತರಿಸಿದಂತಿದೆ. ಏಕೆಂದರೆ ಎಲ್ಲ ‘ಪ್ರಶ್ನಿಸುವಿಕೆ’ಯ ಮೂಲದಲ್ಲಿ ‘ಪ್ರಶ್ನಿಸಿಕೊಳ್ಳುವಿಕೆ’ಯೆಂಬುದು ಅಗತ್ಯವಾಗಿದೆ. ತನ್ನ ಹಣೆಪಟ್ಟಿಯನ್ನು ತಾನು ಪ್ರಶ್ನಿಸಿಕೊಂಡಲ್ಲದೆ ಉಳಿದವರ ಹಣೆಪಟ್ಟಿಗಳ ಮೌಲ್ಯಮಾಪನ ಮಾಡಲು ಬರುವಂತಿಲ್ಲ. ಹೀಗಾಗಿ ಈ ಪ್ರಶ್ನಿಸಿಕೊಳ್ಳುವಿಕೆಯಲ್ಲಿ ಹಣೆಪಟ್ಟಿಗಳಿಂದ ತನ್ನನ್ನು ತಾನು ಬಿಡಿಸಿಕೊಳ್ಳುವ ಕ್ರಿಯೆಯೂ ಅಡಕವಾಗಿದೆ.

ಈ ಬಿಡಿಸಿಕೊಳ್ಳುವ ಕ್ರಿಯೆಯನ್ನು ವಚನವು ತನ್ನ ಅಭಿವ್ಯಕ್ತಿಯ ಸ್ವರೂಪದಲ್ಲಿಯೂ ಅಭಿನಯಿಸಿ ತೋರಿಸುತ್ತಿದೆ. ‘ಸೆಟ್ಟಿ ಎಂಬೆನೆ ಸಿರಿಯಾಳನ? ಮಡಿವಾಳನೆಂಬೆನೆ ಮಾಚಯ್ಯನ?’ ಎಂಬಿವೇ ಪ್ರಯೋಗಗಳನ್ನು ‘ಸಿರಿಯಾಳನ ಸೆಟ್ಟಿಯೆಂಬೆನೆ? ಮಾಚಯ್ಯನ ಮಡಿವಾಳನೆಂಬೆನೆ?’ ಎಂಬ ಪ್ರಯೋಗಗಳೊಂದಿಗೆ ಎದುರುಬದುರಾಗಿಸಿದಾಗ ಇದು ಸ್ಪಷ್ಟವಾಗುತ್ತದೆ. ಹಣೆಪಟ್ಟಿಗಳನ್ನು ವಾಕ್ಯದಲ್ಲಿ ಇಟ್ಟಿರುವ ಬಗೆಯಿಂದಾಗಿಯೇ ಇಲ್ಲಿ ಅವುಗಳ ನಿರಾಕರಣೆಗೂ ಅವಧಾರಣೆ ಒದಗಿಬಂದಿದೆ.

ಸೆಟ್ಟಿ, ಮಡಿವಾಳ, ಡೋಹರ, ಮಾದರ, ಹಾರುವ ‘ಎಂಬ’ ಅಸ್ತಿತ್ವಗಳು ‘ಇರುವ’ ಅಸ್ತಿತ್ವದ ಬಗೆಗೆ ಸೃಷ್ಟಿಸಿರುವ ಮಿಥ್ಯೆ ಮುಖ್ಯವಾಗಿ ವಚನದ ಗಮನದಲ್ಲಿದೆ. ಈ ಮಿಥ್ಯೆಯನ್ನು ಮುರಿಯಲು ಅದು ಉದ್ಯುಕ್ತವಾಗಿದೆ. ‘ಎಂಬ’ ಅಸ್ತಿತ್ವಗಳು ವ್ಯಕ್ತಿ-ವ್ಯಕ್ತಿಗಳ ಮಧ್ಯೆ ವಿಭಜನೆಗಳನ್ನು ಉಂಟುಮಾಡಿವೆ. ಅಥವಾ ಹಾಗೆ ವಿಭಜಿಸುವುದಕ್ಕಾಗಿಯೇ ಹೀಗೆ ‘ಎನ್ನಲಾಗುತ್ತಿದೆ’ ಎಂದರೂ ಸರಿಯಾದೀತು. ಹೀಗೆ ‘ಅಂದುಕೊಳ್ಳುವ’ ವ್ಯಕ್ತಿ ಮೊದಲು ತನ್ನನ್ನು ತಾನು ಇತರರಿಂದ ವಿಭಜಿಸಿಕೊಳ್ಳುತ್ತಾನೆ. ಹೀಗೆ ವಿಭಜಿಸಿಕೊಂಡ ಬಳಿಕ ತನ್ನ ಅನುಕೂಲಕ್ಕೆ ತಕ್ಕಂತೆ ಒಂದು ಶ್ರೇಣೀಕರಣವನ್ನೂ ನಿರ್ವಿುಸಿಕೊಂಡು ಅದರಲ್ಲಿ ತನ್ನನ್ನೂ ಇತರರನ್ನೂ ಸ್ಥಾಪಿಸುತ್ತಾನೆ. ‘ಎಂಬ’ ಅಸ್ತಿತ್ವವನ್ನು ಪ್ರಶ್ನಿಸುವುದೆಂದರೆ ಈ ಶ್ರೇಣೀಕರಣವನ್ನೂ, ಹಾಗೆಯೇ ಅದರ ಹಿಂದಿರುವ ಎಲ್ಲ ವಿಭಜನೆಗಳನ್ನೂ

ಪ್ರಶ್ನಿಸುವುದೇ ಆಗಿದೆ.

ಇಷ್ಟು ಹಿನ್ನೆಲೆಯಲ್ಲಿ ವಚನ ನಮ್ಮನ್ನೊಂದು ಶಿಖರಕ್ಕೆ (ಇಜಿಞಚ್ಡ) ಕರೆದುಕೊಂಡು ಹೋಗುತ್ತದೆ. ‘ಎಂಬ’ ಅಸ್ತಿತ್ವವನ್ನು ಅದು ಕೂಡಲಸಂಗಯ್ಯನ ಪ್ರತಿಕ್ರಿಯೆಯಲ್ಲಿ ಮೌಲ್ಯಮಾಪನ ಮಾಡುತ್ತದೆ. ಈ ಮೌಲ್ಯಮಾಪನವು ಸಮಾಜದ ರೂಢಿಯಲ್ಲಿ ಈಗಾಗಲೇ ಸಿದ್ಧವಾಗಿರುವ ಮೌಲ್ಯಮಾಪನದ ಮೌಲ್ಯಮಾಪನವೂ ಆಗಿದೆ.

‘ಕೂಡಲಸಂಗಯ್ಯ ನಗುವನಯ್ಯ’ ಎಂಬ ಮಾತು

ಇಲ್ಲಿದೆ. ಇದು ನೂರಕ್ಕೆ ನೂರು ಪಲ್ಲಟಗೊಂಡ

ಪರಿಪ್ರೇಕ್ಷ ್ಯೊಂದರ ನುಡಿಯಾಗಿದೆ. ಮಾನವನಿರ್ವಿುತವಾದ ಗಂಭೀರ ಹಣೆಪಟ್ಟಿಗಳೆಲ್ಲವೂ ತಟಕ್ಕನೆ ಹಾಸ್ಯಾಸ್ಪದವಾಗಿ ಪರಿಣಮಿಸುವ ಬೇರೊಂದು ನೆಲೆಗೆ ಇದು ನಮ್ಮನ್ನು ಕರೆದೊಯ್ಯುತ್ತದೆ. ಬಹುಶಃ, ಕೂಡಲಸಂಗಯ್ಯನ ‘ನಗು’ವಿಗೆ ಸ್ಪಂದಿಸಬಲ್ಲ ಸೂಕ್ಷ್ಮತೆಯೊಂದೇ ಮಾನವತೆಯನ್ನು ವಿಭಜನೆಗಳಿಂದ ಪಾರುಮಾಡಬಲ್ಲುದೆಂದು ತೋರುತ್ತದೆ.

ವಿಡಿಯೋ ನ್ಯೂಸ್

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...