Friday, 14th December 2018  

Vijayavani

ಚಾಮರಾಜನಗರದಲ್ಲಿ ವಿಷವಾದ ಮಾರಮ್ಮನ ಪ್ರಸಾದ- ನಾಲ್ವರ ಸಾವು-40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, ಜಿಲ್ಲಾಧಿಕಾರಿ ಭೇಟಿ        ರಾಜಸ್ಥಾನ ಸಿಎಂ ಆಗಿ ಆಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್​​ಗೆ ಡಿಸಿಎಂ ಪಟ್ಟ- ಕಾಂಗ್ರೆಸ್​ನಿಂದ ಅಧಿಕೃತ ಘೋಷಣೆ        ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​ವೈ- ಸಿಎಂ ಎಚ್​ಡಿಕೆ ಚೆನ್ನೈಗೆ ಪ್ರಯಾಣ        ಭದ್ರತೆಗಾಗಿ ರಫೇಲ್ ಖರೀದಿ-ಸುಪ್ರೀಂಕೋರ್ಟ್ ತೀರ್ಪಿನಿಂದ ಭ್ರಮನಿರಸನ-ರಾಗಾ ವಿರುದ್ಧ ಹಾಲಿ ಮಾಜಿ ರಕ್ಷಣಾ ಸಚಿವರ ಕಿಡಿ        ನಾಲ್ಕು ದಿನದಲ್ಲಿ ಎಲ್ಲ ಸರಿಹೋಗುತ್ತೆ-ಪ್ರಯಾಣಿಕರಿಗೆ ಯಾವುದೇ ಆತಂಕ ಬೇಡ-ಪಿಲ್ಲರ್ ಬಿರುಕಿಗೆ BMRCL ಎಂಡಿ ಸ್ಪಷ್ಟನೆ        ನನಗೂ ಸಚಿವೆಯಾಗುವ ಆಸೆ ಇದೆ- ಅಂತರಂಗ ತೆರೆದಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್- ಕೈ ಸಚಿವಾಕಾಂಕ್ಷಿಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ       
Breaking News

ಉಸಿರಾಡುತ್ತಿಲ್ಲ ವೆಂಟಿಲೇಟರ್​ಗಳು !

Saturday, 16.06.2018, 10:08 PM       No Comments

ಚಿಕ್ಕಮಗಳೂರು: ಜಿಲ್ಲಾ ಕೇಂದ್ರದ ಸರ್ಕಾರಿ ಆಸ್ಪತ್ರೆಯಲ್ಲೇ ವೆಂಟಿಲೇಟರ್ ಸೌಲಭ್ಯ ಸಿಗುತ್ತಿಲ್ಲ. ಎರಡು ವೆಂಟಿಲೇಟರ್​ಗಳಿದ್ದರೂ ತಜ್ಞ ವೈದ್ಯರಿಲ್ಲದೆ ಅನುಪಯುಕ್ತವಾಗಿವೆ. 400 ಹಾಸಿಗೆಗಳ ಬೃಹತ್ ಆಸ್ಪತ್ರೆಗೆ ಒಳರೋಗಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದು, ತುರ್ತು ಪ್ರಕರಣಗಳಲ್ಲಿ ರೋಗಿಗಳಿಗೆ ವೆಂಟಿಲೇಟರ್ ಅಳವಡಿಸಬೇಕು ಎಂದರೆ ಸಾಧ್ಯವಾಗುತ್ತಿಲ್ಲ.

ವೆಂಟಿಲೇಟರ್​ಗಳನ್ನು ವೈದ್ಯರಾಗಲಿ ಅಥವಾ ಅರೆ ವೈದ್ಯಕೀಯ ಸಿಬ್ಬಂದಿಯಾಗಲಿ ಬಳಸಲು ಸಾಧ್ಯವಾಗದು. ಕನಿಷ್ಠ ಐಸಿಯುನಲ್ಲಿ ತರಬೇತಿ ಪಡೆದಿದ್ದವರು ಹಾಗೂ ಅರವಳಿಕೆ ತಜ್ಞರು ಮಾತ್ರ ವೆಂಟಿಲೇಟರ್​ಗಳನ್ನು ಬಳಸಬಹುದು. ಜಿಲ್ಲಾ ಆಸ್ಪತ್ರೆಗೆ ಕನಿಷ್ಠ ಮೂವರು ವೆಂಟಿಲೇಟರ್ ಬಳಕೆ ಅನುಭವ ಇರುವ ತಜ್ಞರು ಹಾಗೂೆ 6 ಮಂದಿ ಅರೆ ವೈದ್ಯಕೀಯ ತರಬೇತಿ ಪಡೆದ ಸಿಬ್ಬಂದಿ ನೇಮಕವಾಗಬೇಕಿದೆ.

ರೋಗಿಗಳಿಗೆ ಸಮಸ್ಯೆಯಾಗಿ ವೆಂಟಿಲೇಟರ್ ಬಳಕೆ ಅನಿವಾರ್ಯವಾದ ಸಂದರ್ಭದಲ್ಲಿ ಹೊರ ಜಿಲ್ಲೆಯ ಆಸ್ಪತ್ರೆಗೆ ಕಳುಹಿಸಿದ ನಿದರ್ಶನವಿದೆ. ಈ ವಿಭಾಗದ ತಜ್ಞ ವೈದ್ಯರ ನೇಮಕಾತಿ ಬಗ್ಗೆ ಸರ್ಕಾರದ ಮಟ್ಟಕ್ಕೆ ಹಲವು ಬಾರಿ ಪತ್ರ ವ್ಯವಹಾರ ನಡೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಲ್ಯಾಬ್ ಅನಲೈಸರ್ ಹಳೆಯದು: ಆಸ್ಪತ್ರೆಯಲ್ಲಿರುವ ಮತ್ತೊಂದು ಸಮಸ್ಯೆ ಎಂದರೆ ಲ್ಯಾಬ್ ಅನಲೈಸರ್. ಇದು ಅತ್ಯಂತ ಹಳೆಯದಾಗಿದ್ದು, ಹೊಸ ಯಂತ್ರವನ್ನು ಸರ್ಕಾರ ಪೂರೈಸಬೇಕಾಗಿದೆ. ಜತೆಗೆ ಇದುವರೆಗೂ 125 ಕೆ.ವಿ. ಜನರೇಟರ್​ಗೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಅದನ್ನು ಇದುವರೆಗೂ ನೀಡಿಲ್ಲ. ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಹುದ್ದೆ ನಿವೃತ್ತಿಯಿಂದ ಖಾಲಿ ಬಿದ್ದಿದೆ. ಕಳೆದ 6 ತಿಂಗಳಿಂದ ಖಾಲಿ ಇರುವ ಈ ಹುದ್ದೆಗೆ ನೇಮಿಸಲು ಸರ್ಕಾರ ಮುಂದಾಗಿಲ್ಲ.

ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಇನ್ನೊಂದು ಪ್ರತ್ಯೇಕ ವಿಭಾಗದ ಅಗತ್ಯವಿದ್ದು, ವಾತಾವರಣದ ಏರುಪೇರಿನಿಂದ ಜ್ವರ ಸೇರಿದಂತೆ ಕೆಲವು ಸೋಂಕಿಗೆ ಒಳಗಾದವರು ದಾಖಲಾಗಲು ಒಮ್ಮೆಗೆ ಹೆಚ್ಚು ಸಂಖ್ಯೆಯಲ್ಲಿ ಬಂದಲ್ಲಿ ಅವರಿಗೆ ಸ್ಥಳಾವಕಾಶ ಕಲ್ಪಿಸುವುದು ಕಷ್ಟವಾಗಿದೆ. ಈಗಿರುವ ಒಳರೋಗಿಗಳ ವಿಭಾಗದ ಮೇಲೆ ಇನ್ನೊಂದು ವಿಶಾಲ ಕೊಠಡಿ ನಿರ್ವಿುಸಿದಲ್ಲಿ ಮಾತ್ರ ಅನುಕೂಲವಾಗಲಿದೆ.

ವೈದ್ಯರು, ಸಿಬ್ಬಂದಿ ಕೊರತೆ: ಆಸ್ಪತ್ರೆ ಸ್ಥಾಪನೆಯಾಗಿ 100 ವರ್ಷ ಕಳೆದಿದ್ದು, ಆಗ ಒದಗಿಸಿದ್ದ ವೈದ್ಯ ಹಾಗೂ ಸಿಬ್ಬಂದಿ ಪ್ರಮಾಣದಲ್ಲಿ ಏರಿಕೆಯಾಗಿಲ್ಲ. ಅನೇಕ ವಿಭಾಗಗಳಲ್ಲಿ ವೈದ್ಯರ ಹುದ್ದೆ ಮಾತ್ರವಲ್ಲದೆ ತಜ್ಞ ವೈದ್ಯರ ಕೊರತೆ ಸಹ ಸಾಕಷ್ಟಿದೆ.

Leave a Reply

Your email address will not be published. Required fields are marked *

Back To Top