More

    ಹೊಸತನದ ಕಲಿಕೆಗೆ ಹೆಚ್ಚು ಪ್ರೋತ್ಸಾಹ ನೀಡುವ ಅನುಭವಗಳು: ಡಾ. ಡಿ.ಎನ್.ಸುಜಾತಾ

    ಶಿವಮೊಗ್ಗ: ವಿದ್ಯಾರ್ಥಿಗಳು ನಾವೀನ್ಯತೆ ಎಂಬ ಕನಸುಗಳ ಬೆನ್ನೇರಿ ಹೊರಡಬೇಕಿದ್ದು ಅನುಭವಗಳು ಹೊಸತನದ ಕಲಿಕೆಗೆ ಹೆಚ್ಚು ಪ್ರೋತ್ಸಾಹ ನೀಡಲಿದೆ ಎಂದು ಬೆಂಗಳೂರು ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕಿ ಡಾ. ಡಿ.ಎನ್.ಸುಜಾತಾ ಹೇಳಿದರು.

    ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಐಇಇಇ ಮಂಗಳೂರು ಉಪವಿಭಾಗ ಹಾಗೂ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದಿಂದ ನಾವೀನ್ಯ ಯೋಜನೆಗಳ ಪ್ರದರ್ಶನ-ಐ ಸ್ಕ್ವೇರ್ ಕನೆಕ್ಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ದೊಡ್ಡ ಕನಸುಗಳನ್ನು ಕಾಣುವ ಸ್ವಭಾವ ವಿದ್ಯಾರ್ಥಿಗಳು ಹೊಂದಬೇಕು. ನಾವೀನ್ಯತೆ ಎಂಬುದು ಪ್ರತಿ ಹಂತದಲ್ಲಿ ರೂಢಿಗತವಾಗಬೇಕು. ನಿದ್ದೆಯಲ್ಲಿಯೂ ಆ ಕನಸುಗಳು ನಮ್ಮನ್ನು ಜಾಗೃತಗೊಳಿಸುತ್ತಿರಬೇಕು. ಜೀವನ ಎಂಬುದು ಅನುಭವಾಧಾರಿತ ಹೂರಣವಾಗಿದ್ದು, ಸೋಲು-ಗೆಲುವುಗಳ ನಿರಂತರತೆಯಲ್ಲಿ ಸೋಲು ನಿಮ್ಮನ್ನು ಕಾಡದಂತೆ ಎಚ್ಚರ ವಹಿಸಬೇಕು. ಸ್ಪರ್ಧಾತ್ಮಕ ಯುಗದಲ್ಲಿ ನಿಮ್ಮ ತನದೊಂದಿಗೆ ನೀವು ಹೋರಾಡಿ ಇತರರ ಯಶಸ್ಸು ಪ್ರೇರಣೆಯಾಗಿ ಪಡೆಯಬೇಕು ಎಂದು ಹೇಳಿದರು.
    ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ತಂತ್ರಜ್ಞಾನದ ಕ್ಷೇತ್ರದಲ್ಲಿ ಕಲಿಕೆಯೊಂದಿಗೆ ಪ್ರಯೋಗಗಳ ಅವಶ್ಯಕತೆಯಿದೆ. ಯಾವುದೇ ನಾವೀನ್ಯ ಪ್ರಯೋಗಗಳು ನಮ್ಮಲ್ಲಿರುವ ಕಲಿಕೆಯ ಗುಣಮಟ್ಟದ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಪ್ರಾಯೋಗಿಕ ಕಲಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ನೀವು ರೂಪಿಸುವ ಪ್ರಯೋಗಗಳು ಕೇವಲ ಶೈಕ್ಷಣಿಕ ಸೀಮಿತತೆಗೆ ಒಳಗಾಗದೆ ಪೇಟೆಂಟ್ ಫೈಲಿಂಗ್, ಸ್ಟಾರ್ಟ್‌ಅಪ್‌ಗಳಿಗೆ ಬಡ್ತಿ ಪಡೆಯಲಿ ಎಂದು ಹೇಳಿದರು.
    ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ಶೈಕ್ಷಣಿಕ ಡೀನ್ ಡಾ. ಪಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ. ಕೆ.ಎಂ.ಪೂರ್ಣಿಮಾ, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಎಸ್.ವಿ.ಸತ್ಯನಾರಾಯಣ, ಕಾರ್ಯಕ್ರಮ ಸಂಯೋಜಕ ಡಾ. ಜಲೇಶ್‌ಕುಮಾರ್, ಡಾ. ಜಿ.ಆರ್.ಮಂಜುಳಾ, ಡಾ. ಎಸ್.ಎಂ.ಬೆನಕಪ್ಪ, ಆರ್.ಸುಷ್ಮಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts