ಚಟೌರೊಕ್ಸ್ (ಫ್ರಾನ್ಸ್): ಭಾರತ ತಂಡ ಈ ಬಾರಿ 21 ಶೂಟರ್ಗಳ ದಾಖಲೆಯ ತಂಡದೊಂದಿಗೆ ಒಲಿಂಪಿಕ್ಸ್ ಶೂಟಿಂಗ್ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿದ್ದು, 12 ವರ್ಷಗಳ ಪದಕ ಬರ ನೀಗುವ ನಿರೀಕ್ಷೆಯಲ್ಲಿದೆ. ಪ್ಯಾರಿಸ್ನಿಂದ 272 ಕಿಲೋಮೀಟರ್ ದೂರದಲ್ಲಿರುವ ಫ್ರೆಂಚ್ “ನಿದ್ರೆಯ ಪಟ್ಟಣ’ ಚಟೌರೊಕ್ಸ್ನಲ್ಲಿ ಶೂಟಿಂಗ್ ಸ್ಪರ್ಧೆಗಳು ನಡೆಯಲಿದ್ದು, ಭಾರತ ಪಣಕ್ಕಿರುವ ಎಲ್ಲ 15 ಸ್ವರ್ಣ ಪದಕ ಸ್ಪರ್ಧೆಗಳಲ್ಲೂ ಭಾಗವಹಿಸಲಿದೆ. ಮೊದಲ ದಿನ 10 ಮೀ. ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಮಾತ್ರ ಪದಕ ನಿರ್ಧಾರವಾಗಲಿದ್ದು, ಭಾರತದ 2 ಜೋಡಿ ಕಣಕ್ಕಿಳಿಯಲಿವೆ.
2004ರಲ್ಲಿ ರಾಜ್ಯವರ್ಧನ್ ಸಿಂಗ್ ರಾಥೋಡ್ ರಜತ ಗೆದ್ದು ಮೊದಲ ಒಲಿಂಪಿಕ್ಸ್ ಪದಕ ವಿಜೇತ ಶೂಟರ್ ಎನಿಸಿದ್ದರೆ, 2008ರಲ್ಲಿ ಅಭಿನವ್ ಬಿಂದ್ರಾ ಬಂಗಾರದ ಸಾಧನೆ ಮಾಡಿದ್ದರು. 2012ರಲ್ಲಿ ವಿಜಯ್ಕುಮಾರ್ ಬೆಳ್ಳಿ ಮತ್ತು ಗಗನ್ ನಾರಂಗ್ ಕಂಚು ಜಯಿಸಿದ್ದರು. ನಂತರದಲ್ಲಿ 2016ರ ರಿಯೋ ಮತ್ತು 2021ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತೀಯ ಶೂಟರ್ಗಳು ಗುರಿ ತಪ್ಪಿದ್ದರು. ಭಾರತ ತಂಡ ಈ ಬಾರಿ ಬಹುತೇಕ ಯುವ ಶೂಟರ್ಗಳಿಂದ ತುಂಬಿದೆ. ಮನು ಭಾಕರ್, ಐಶ್ವರಿ ಪ್ರತಾಪ್, ಅಂಜುಮ್ ಮೌದ್ಗಿಲ್, ಇಲವೆನಿಲ್ ಹೊರತಾಗಿ ಉಳಿದೆಲ್ಲರಿಗೂ ಇದು ಮೊದಲ ಒಲಿಂಪಿಕ್ಸ್ ಆಗಿದೆ. ಶೂಟಿಂಗ್ನಲ್ಲಿ ಭಾರತಕ್ಕೆ ಚೀನಾ ಪ್ರಬಲ ಎದುರಾಳಿ ಎನಿಸಿದೆ.
22 ವರ್ಷದ ಮನು ಭಾಕರ್ ಶೂಟಿಂಗ್ ವಿಶ್ವಕಪ್ಗಳಲ್ಲಿ ಹಲವಾರು ಪದಕ ಗೆದ್ದ ಸಾಧನೆ ಮಾಡಿದ್ದರೂ, ಕಳೆದ ಟೋಕಿಯೊ ಒಲಿಂಪಿಕ್ಸ್ನ ಮೊದಲ ಸ್ಪರ್ಧೆಯಲ್ಲೇ ಪಿಸ್ತೂಲ್ನಲ್ಲಿ ಉಂಟಾದ ದೋಷದಿಂದಾಗಿ ಪದಕವಂಚಿತರಾಗಿದ್ದರು. ನಂತರ ಲಯಕ್ಕೆ ಮರಳಿರಲಿಲ್ಲ. ಈ ಸಲವೂ ಅವರು 3 ವಿಭಾಗಗಳಲ್ಲಿ ಸ್ಪರ್ಧಿಸಲಿದ್ದು, ಐತಿಹಾಸಿಕ ಸಾಧನೆಯ ತವಕದಲ್ಲಿದ್ದಾರೆ. ಯುವ ಶೂಟರ್ ಸ್ಟ್ಿ ಕೌರ್ ಸಮ್ರಾ ಭಾರತಕ್ಕೆ ಪದಕ ನಿರೀೆ ಮೂಡಿಸಿರುವ ಮತ್ತೋರ್ವ ಪ್ರಮುಖ ತಾರೆ. 50 ಮೀ. ರೈಫಲ್ 3 ಪೊಸಿಷನ್ನಲ್ಲಿ ಏಷ್ಯಾಡ್ ಪದಕ ಗೆದ್ದಿದ್ದ ಅವರು, ಈ ವಿಭಾಗದಲ್ಲಿ ಹಾಲಿ ವಿಶ್ವ ನಂ. 1 ಶೂಟರ್ ಕೂಡ ಆಗಿದ್ದಾರೆ. 20 ವರ್ಷದ ರಿದಂ ಸಂಗ್ವಾನ್ 2 ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ.
ಪುರುಷರ ವಿಭಾಗದಲ್ಲಿ ಅನೀಶ್ ಭಾನ್ವಾಲಾ, ಸರಬ್ಜೀತ್ ಸಿಂಗ್, ಅರ್ಜುನ್ ಬಬುಟ, ಅರ್ಜುನ್ ಸಿಂಗ್ ಚೀಮಾ, ವಿಜಯ್ವೀರ್ ಭಾರತದ ಸವಾಲು ಮುನ್ನಡೆಸಲಿದ್ದಾರೆ. ಭಾರತ ಒಲಿಂಪಿಕ್ಸ್ ತಂಡದ ಚ್ೀ ಡಿ ಮಿಷನ್ ಆಗಿರುವ ಮಾಜಿ ಶೂಟರ್ ಗಗನ್ ನಾರಂಗ್, ಶೂಟರ್ಗಳು ಈ ಬಾರಿ ಪದಕದ ಬರ ನೀಗಿಸುವ ವಿಶ್ವಾಸ ಹೊಂದಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಐತಿಹಾಸಿಕ 11 ಪ್ರಥಮಗಳ ನಿರೀಕ್ಷೆ…