ಭೂ ಮಾಫಿಯಾಕ್ಕೆ ಜಿಲ್ಲಾಡಳಿತ ಬೆಂಬಲ

ವಿಜಯವಾಣಿ ಸುದ್ದಿಜಾಲ ಕಲುರಗಿ
ಜಿಲ್ಲೆಯಲ್ಲಿ ಭೂ ಮಾಫಿಯಾದಿಂದ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಜಿಲ್ಲಾಡಳಿತ ಕಡಿವಾಣ ಹಾಕುವ ಬದಲು ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಮಾಜಿ ಸಚಿವ ಎಸ್.ಕೆ. ಕಾಂತಾ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರದಿಂದ ಅನಿರ್ಧಿಷ್ಟ ಹಗಲಿರುಳು ಧರಣಿ ನಡೆಸಲು ನಿರ್ಧರಿಸಿದ್ದಾರೆ.
ಜಿಲ್ಲೆಯ ಹಲವು ಕಡೆ ಕೆರೆಕಟ್ಟೆ, ಗೋಮಾಳ, ಸರಕಾರಿ ಭೂಮಿ ಭೂಗಳ್ಳರು ಕಬಳಿಸಿದ್ದು, ಈ ಬಗ್ಗೆ ಅನೇಕ ವರ್ಷಗಳಿಂದ ಜಿಲ್ಲಾಡಳಿತ ಗಮನಕ್ಕೆ ತಂದಿದ್ದರೂ ನಿರ್ಲಕ್ಷ್ಯ ವಹಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ರಾಜಸ್ಥಾನ ಮೂಲದ ಶ್ರೀ ಸಿಮೆಂಟ್ ಕಂಪನಿಯು ಸೇಡಮ್ನಲ್ಲಿ ಭೂಮಿಯ ಬಿನ್ಶೇತ್ಕಿ (ಎನ್ಎ) ಮಾಡಿಸಿಕೊಳ್ಳದೆ ಅಕ್ರಮವಾಗಿ ಘಟಕ ಸ್ಥಾಪಿಸಿದೆ, ಅಲ್ಲದೇ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮತಿ ಪಡೆಯದೆ ಎರಡು ವರ್ಷಗಳ ಹಿಂದೆಯೇ ಸಿಮೆಂಟ್ ಉತ್ಪಾದನೆ ಆರಂಭಿಸಿದೆ, ಸಕರ್ಾರವು 1300 ಎಕರೆ ಭೂಮಿ ಲೀಸ್ ಆಧಾರದ ಮೇಲೆ ವರ್ಷಕ್ಕೆ ಕೇವಲ 10 ಸಾವಿರ ರೂ. ಗಳಂತೆ 30 ವರ್ಷಗಳಿಗೆ ನೀಡಿದೆ. ಕಳೆದ ಆಗಸ್ಟ್ನಲ್ಲಿ ಈ ಕಾರ್ಖಾನೆಯಲ್ಲಿ ಆರು ಗುತ್ತಿಗೆ ಕಾರ್ಮಿಕರು ಮೃತಪಟ್ಟಿದ್ದು, ಡಿಸೆಂಬರ್​ನಲ್ಲಿ ಇತರೆ 9 ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ, ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದೇ ಇಂಥ ಅವಘಡಗಳಿಗೆ ಕಾರಣವಾಗಿದೆ. ಈ ಎಲ್ಲ ಸಂಗತಿಗಳನ್ನು ಪರಿಗಣಿಸಿ ಸರ್ಕಾರ ಕೂಡಲೇ ಕಾರ್ಖಾನೆ ನೆಲಸಮಗೊಳಿಸಬೇಕೆಂದು ಅವರು ಆಗ್ರಹಿಸಿದರು.
ಸೇಡಂ ತಾಲೂಕಿನ ಹಂಗನಹಳ್ಳಿ ಹಾಗೂ ನೃಪತುಂಗ ಗ್ರಾಮಗಳ ರೈತರು ರಾಜ ಶ್ರೀ ಸಿಮೆಂಟ್ ಕಾರ್ಖಾನೆಗೆ ಸ್ವಾಧೀನಪಡಿಸಿ ಕೊಳ್ಳಲಾದ ತಮ್ಮ ಭೂಮಿಗೆ ಸೂಕ್ತ ಪರಿಹಾರ ಧನ ನೀಡಬೇಕೆಂದು ಆಗ್ರಹಿಸಿ ಸೇಡಂ ಸಹಾಯಕ ಆಯುಕ್ತರ ಕಚೇರಿ ಮುಂದೆ ಕಳೆದ 1258 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ರಾಜಶ್ರೀ ಸಿಮೆಂಟ್ಸ್ನವರು ಸರ್ಕಾರಿ ಭೂಮಿಗೆ ಪ್ರತಿ ಎಕರೆಗೆ 8 ಲಕ್ಷ ರೂ.ನಂತೆ ಪರಿಹಾರ ನೀಡಿದರೆ ರೈತರ ಭೂಮಿಗೆ ಮಾತ್ರ ಪ್ರತಿ ಎಕರೆಗೆ 3.50 ಲಕ್ಷ ರೂ. ನೀಡಿ ಅನ್ಯಾಯವೆಸಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಸಚಿವರು ಹಗೂ ಮುಖ್ಯಮಂತ್ರಿಗೆ ಹಲವು ಬಾರಿ ಪತ್ರ ಬರೆದು ಗಮನಕ್ಕೆ ತಂದಿದ್ದರೂ ಯಾರೂ ಸ್ಪಂದಿಸಿಲ್ಲ ಎಂದು ದೂರಿದರು.
ಕೆರೆಗಳ ಒತ್ತುವರಿ ಕಲಬುರಗಿ ನಗರದಲ್ಲಿ 7 ಕೆರೆಗಳನ್ನು ಒತ್ತುವರಿ ಮಾಡಿ ಅಕ್ರಮ ಕಟ್ಟಡಗಳನ್ನು ನಿರ್ಮಿಸಲಾಗಿದೆ. ನಿಜವೆಂದರೆ ಅಕ್ರಮ ನಿರ್ಮಾಣದಿಂದಾಗಿ ಕೆರೆಗಳೇ ಮಾಯವಾಗಿವೆ. ಇದೇ ರೀತಿ ಅನೇಕ ಬಡಾವಣೆಗಳಲ್ಲಿ ಉದ್ಯಾನಕ್ಕೆ ಮೀಸಲಿಟ್ಟ ಜಾಗೆ ಕಬಳಿಸಲಾಗಿದೆ. ಜಿಲ್ಲಾಡಳಿತದ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳದೇ ಮೌನ ವಹಿಸಿದೆ ಎಂದು ಎಸ್.ಕೆ. ಕಾಂತಾ ಆರೋಪಿಸಿದರು.