Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಟಿಕೆಟ್ ಸಿಕ್ಕರೆ ನಿಲ್ಲುತ್ತೇನೆ, ಇಲ್ಲ ಪಕ್ಷಕ್ಕೆ ದುಡಿಯುತ್ತೇನೆ

Wednesday, 14.02.2018, 3:04 AM       No Comments

| ವಿಜಯ್ ಜೊನ್ನಹಳ್ಳಿ

ರೆಬಲ್ ಸ್ಟಾರ್ ಅಂಬರೀಷ್ ಮತ್ತೆ ಸುದ್ದಿಯಲ್ಲಿದ್ದಾರೆ. ಮಾಜಿ ಸಚಿವರೂ ಆಗಿರುವ ಅವರಿಗೆ ಮಂಡ್ಯ ಕ್ಷೇತ್ರದಿಂದ ಟಿಕೆಟ್ ಸಿಕ್ಕುವುದೇ ಇಲ್ಲವೇ ಎಂಬ ಗೊಂದಲ ಉಂಟಾಗಿದೆ. ನಟಿ ರಮ್ಯಾಗೆ ಟಿಕೆಟ್ ಎಂಬ ವದಂತಿಗಳಿವೆ. ಅಂಬರೀಷ್ ಈ ಎಲ್ಲ ವಿಷಯಗಳ ಬಗ್ಗೆ ದಿಗ್ವಿಜಯ247 ಸುದ್ದಿವಾಹಿನಿ -ವಿಜಯವಾಣಿಗೆ ನೀಡಿರುವ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

# ಆರೋಗ್ಯ ಈಗ ಹೇಗಿದೆ?

ನೀವೇ ನೋಡುತ್ತಿದ್ದಿರಲ್ಲ, ಆರೋಗ್ಯವಾಗಿದ್ದೇನೆ. ಮರುಜನ್ಮ ಪಡೆದಿದ್ದೇನೆ. ಬಹಳ ವರ್ಷ ಬದುಕಬೇಕೆನ್ನುವ ಆಸೆ ಇಲ್ಲ. ಆದರೂ ನಾನು ಕೇರ್ ತೆಗೆದುಕೊಂಡಿದ್ದೇನೆ.

# ಚುನಾವಣಾ ತಯಾರಿ ಹೇಗಿದೆ?

ಪಕ್ಷದವರೆಲ್ಲೂ ಸೇರಿ ಒಪ್ಪಿ ಟಿಕೆಟ್ ಸಿಕ್ಕರೆ ಅಭ್ಯರ್ಥಿಯಾಗುತ್ತೇನೆ. ಇಲ್ಲದಿದ್ದರೆ ಪಕ್ಷದಲ್ಲಿರುವ ತನಕ ಅಭ್ಯರ್ಥಿ ಗೆಲುವಿಗೆ ಪ್ರಯತ್ನಪಡುತ್ತೇನೆ.

# ಟಿಕೆಟ್ ಬಗ್ಗೆ ಅನುಮಾನ ಯಾಕೆ?

ಯಾರಿಗೆ ಗೊತ್ತು. ಇಂದಿರಾಗಾಂಧಿ ಬಳಿಕ ಯಾರೂ ಪ್ರಧಾನಿ ಅಭ್ಯರ್ಥಿ ಇಲ್ಲ ಅನ್ನುತ್ತಿದ್ದರೂ ಬೇರೆಯವರು ಬರಲಿಲ್ಲವೇ? ಯಾರೋ ಒಬ್ಬರು ಹುಟ್ಟಿಕೊಳ್ಳುತ್ತಾರೆ.

# ರಮ್ಯಾಗೆ ಟಿಕೆಟ್ ಅನ್ನುವ ಸುದ್ದಿಯಿದೆ.

ಸುದ್ದಿಗಳಿಗೆಲ್ಲ ನಾನು ಉತ್ತರ ಕೊಡುವುದಿಲ್ಲ. ಯಾರಿಗೆ ಕೊಟ್ಟರೂ ನಾನು ಕೆಲಸಮಾಡುವ ಪಕ್ಷಕ್ಕೆ ನಿಷ್ಠೆಯಿದೆ.

# ಅಂಬರೀಷ್ ಜೆಡಿಎಸ್​ಗೆ ಹೋಗುತ್ತಾರೆ ಎನ್ನಲಾಗುತ್ತಿದೆ.

ಬಿಜೆಪಿ, ರೈತ ಸಂಘ ಇನ್ನೇನಿದೆ ಎಲ್ಲವನ್ನೂ ಹೇಳಿಬಿಡಿ. ನನಗೆ ಎಲ್ಲ ಪಕ್ಷದಲ್ಲೂ ಸ್ನೇಹಿತರಿದ್ದಾರೆ. ಮುಂದಿನ ರಾಜಕೀಯ ಭವಿಷ್ಯವನ್ನು ಹೀಗೆ ಆಗುತ್ತದೆ ಅಂತ ಹೇಳಲಾಗುವುದಿಲ್ಲ.

# ಜನ ಯಾಕೆ ನಿಮಗೆ ಓಟು ಹಾಕಬೇಕು?

ಇಡೀ ಜಿಲ್ಲೆಯಲ್ಲಿ ಮಂಡ್ಯ ಹಾಗೂ ಮಳವಳ್ಳಿ ಬಿಟ್ಟರೆ ಬೇರೆ ಕಡೆ ಕಾಂಗ್ರೆಸ್ ಶಾಸಕರಿಲ್ಲ. ನಾನು ಸಚಿವನಾಗಿದ್ದಾಗ ಮಂಡ್ಯ ಜಿಲ್ಲೆಗೆ ಸಾಕಷ್ಟು ಕೊಡುಗೆ ನೀಡಿದ್ದೇನೆ. ಭ್ರಷ್ಟಚಾರ ನಡೆಸಿಲ್ಲ. ಪ್ರೀತಿಯಿದ್ದರೆ ನನ್ನನ್ನು ಗೆಲ್ಲಿಸುತ್ತಾರೆ.

# ನಿಮ್ಮ ಮಗ ಉತ್ತರಾಧಿಕಾರಿಯಾಕಾಗಬಾರದು?

ಅಭಿಷೇಕ್ ರಾಜಕೀಯಕ್ಕೆ ಬರುವುದು ಬೇಡ ಅನ್ನುವುದು ನನ್ನ ಅನಿಸಿಕೆ. ಕುಟುಂಬ ರಾಜಕಾರಣವನ್ನು ನಾನು ವಿರೋಧಿಸು ವುದಿಲ್ಲ ಆದರೆ ಬೇರೆಯವರಿಗೂ ಅವಕಾಶ ಸಿಗಲಿ.

# ನೀವು ರಾಜಕಾರಣವನ್ನು ಉಡಾಫೆಯಾಗಿ ತೆಗೆದುಕೊಳ್ಳುತ್ತೀರಾ?

ನೀವು ಹೇಳುತ್ತಿರುವುದು ನಿಜ. ನಾನು ಸ್ಟ್ರಾಂಗ್ ಆಗಿ ರಾಜಕಾರಣ ಮಾಡಿದ್ದರೆ ಸಿಎಂ ಅಭ್ಯರ್ಥಿ ಆಗುತ್ತಿದ್ದೆ. ಉಡಾಫೆಯಲ್ಲ, ಸಿನಿಮಾದಲ್ಲೂ ದುಡಿಯಬೇಕಿದ್ದರಿಂದ ರಾಜಕಾರಣಕ್ಕೆ ಹೆಚ್ಚು ಆದ್ಯತೆ ನೀಡಿಲ್ಲ.

# ಒಕ್ಕಲಿಗ ಸಮುದಾಯದ ನಾಯಕನಾಗಿ ಸಾಕಷ್ಟು ಅವಕಾಶ ಮಿಸ್ ಮಾಡಿಕೊಂಡಿರಿ?

ದೇವೇಗೌಡರು ಸಿಎಂ, ಪ್ರಧಾನಿಯಾದರು. ಎಸ್.ಎಂ. ಕೃಷ್ಣ, ಕುಮಾರಸ್ವಾಮಿ, ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದಾರೆ ಜನ ಅವಕಾಶಕೊಟ್ಟಿದ್ದಾರೆ ಇವರಿಗೆ ಎಲ್ಲ ಸಮುದಾಯದವರು ಬೆಂಬಲ ನೀಡಿದ್ದಾರೆ.

# ಸಿನಿಮಾ ಹಾಗೂ ರಾಜಕೀಯ ಇವುಗಳಲ್ಲಿ ಯಾವುದು ತೃಪ್ತಿ?

ರಾಜಕಾರಣ ಕಲ್ಲು ಮುಳ್ಳಿನ ಹಾದಿ. ಹಾಗಂತ ಸಿನಿಮಾದಲ್ಲಿ ಕಷ್ಟಗಳಿಲ್ಲ ಅಂತ ಅಲ್ಲ ಸಿನಿಮಾದಲ್ಲಿ ಈ ಮಟ್ಟಕ್ಕೆ ಬೆಳೆಯಬೇಕೆಂದರೆ ಬದ್ಧತೆಯಿರಬೇಕು.

# ಹಳೆ ಅಭ್ಯಾಸಗಳು ಇನ್ನೂ ಇವೆಯಾ?

ರೀ ನಾನು ಆಗಲೇ ಹೇಳಿದ್ದೇನೆ ನನಗೆ ಮರುಜನ್ಮ ಬಂದಿರುವುದು. ಫಸ್ಟ್ ಹಾಫ್​ನಲ್ಲಿ ಏನೆಲ್ಲ ಮಾಡುತ್ತಿದ್ದೆ, ಸೆಕೆಂಡ್ ಹಾಫ್​ನಲ್ಲಿ ಅದೆಲ್ಲ ಇಲ್ಲ. ನನ್ನ ಅಭಿಮಾನಿಗಳಿಂದ ನಾನು ಬದುಕಿದ್ದೇನೆ ಅದು ನನ್ನ ಪುಣ್ಯ.

# ಜೀವದ ಗೆಳೆಯ ವಿಷ್ಣುವರ್ಧನ್ ನೆನಪಾಗ್ತಾರಾ?

ನಿಂತಾಗ ಕುಂತಾಗಲೆಲ್ಲಾ ಜ್ಞಾಪಕಕ್ಕೆ ಬರುತ್ತಾನೆ. ಅವನ ಸಿನಿಮಾ ಟಿವಿಯಲ್ಲಿ ಬಂದರೆ ಟಿವಿ ಆಫ್ ಮಾಡಿಬಿಡುತ್ತೇನೆ.

Leave a Reply

Your email address will not be published. Required fields are marked *

Back To Top