ಅತಿಯಾದ ತಲೆಹಾಕುವಿಕೆ ಒಳ್ಳೆಯದಲ್ಲ!

‘ತಾಯಿ’ ಎಂಬುದು ಒಂದು ಮನಃಸ್ಥಿತಿ. ಅದಕ್ಕೆ, ಮಕ್ಕಳಿರುವವಳೇ ಆಗಬೇಕು ಅಂತ ಇಲ್ಲ. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಹೇಳುವುದಾದರೆ ‘ತಾಯಿ’ಯಾಗಲಿಕ್ಕೆ ಹೆಣ್ಣೇ ಆಗಬೇಕು ಅಂತಲೂ ಇಲ್ಲ. ಅದಕ್ಕೆ ಬೇಕಾದದ್ದು ಕೇವಲ ಮನೋಸಿದ್ಧತೆ.

ಅಂಥ ತಾಯಂದಿರೂ ಇರುತ್ತಾರಾ? ಈ ಪ್ರಶ್ನೆಯನ್ನು ಕೇಳಿಕೊಳ್ಳುವ ಪ್ರಸಂಗ ಆಗೊಮ್ಮೆ ಈಗೊಮ್ಮೆ ಬಂದಿದೆ. ತಾಯಿಯ ವಿಷಯದಲ್ಲಿ ನಾನು ಕೊಂಚ ಅತೀ ಎನ್ನುವಷ್ಟು ಭಾವುಕ. ನನ್ನ ಹೆಂಡತಿ-ಮಕ್ಕಳು, ಗೆಳೆಯರು ನನ್ನನ್ನು ‘ಮದರ್ ಸರೋಗೆಟ್’ ಅಂತಲೇ ರೇಗಿಸುತ್ತಾರೆ. ಬದುಕಿನ ಬಹುದೊಡ್ಡ ಭಾಗವನ್ನು ನಾನು ಅಮ್ಮನೊಂದಿಗೇ ಕಳೆದೆನಾದ್ದರಿಂದ, ಜಗತ್ತಿನಲ್ಲಿ ನನಗೆ ಮತ್ಯಾವುದೇ ಗಾಢ, ಭಾವುಕ ಆಶ್ರಯವಿರಲಿಲ್ಲವಾದ್ದರಿಂದ ಅಮ್ಮನೆಡೆಗೆ ಅಂಥದೊಂದು ವಾತ್ಸಲ್ಯ ಮತ್ತು ಅವಲಂಬನೆ-ಎರಡೂ ಬೆಳೆದದ್ದು ಸಹಜ. ಹಾಗೆ ಅಮ್ಮನನ್ನು ಕಚ್ಚಿಕೊಂಡೇ ಬೆಳೆದೆನಾದ್ದರಿಂದ, ನನ್ನ ಹೆಣ್ಣುಮಕ್ಕಳೊಂದಿಗೆ ನನಗೆ ಅತ್ಯಂತ ಈಛಿಞಟ್ಚ್ಟಠಿಜ್ಚಿ ಆದ, ಆರೋಗ್ಯವಂತ ಬಾಂಧವ್ಯ, ಗೆಳೆತನ ಬೆಳೆಯಲು ಸಾಧ್ಯವಾಯಿತು. ಇವತ್ತಿಗೆ ನನ್ನನ್ನು ‘ಅಪ್ಪ’ ಅಂತಲೇ ಕರೆಯುವ, ನನ್ನೊಂದಿಗೆ ಮಕ್ಕಳಂತೆಯೇ ವ್ಯವಹರಿಸುವ ಕೆಲವು ಸಾವಿರ ಹೆಣ್ಣುಮಕ್ಕಳ ಪ್ರೀತಿ ನನಗೆ ಕರ್ನಾಟಕದಲ್ಲಿ ಸಿಕ್ಕಿರುವುದಕ್ಕೂ ಇದೇ ಕಾರಣವಿರಬಹುದು.

ಆದರೆ ನಾನು ಬೇರೆಯ ತರಹದ ತಾಯಂದಿರನ್ನೂ ನೋಡಿದ್ದೇನೆ. ಒಬ್ಬ ಹೆಣ್ಣುಮಗಳು ಬೇಕಿದ್ದೋ, ಬೇಡದೆಯೋ ಗರ್ಭವತಿಯಾಗಿ, ಒಂಬತ್ತು ತಿಂಗಳು ಯಾರ ಕಣ್ಣಿಗೂ ಬೀಳದೆ ಇದ್ದು, ಅಷ್ಟೇ ರಹಸ್ಯವಾಗಿ ಮಗುವೊಂದನ್ನು ಹೆತ್ತು, ಬೇರೆ ದಾರಿ ಕಾಣದೆ ಅದನ್ನು ಬಟ್ಟೆಯಲ್ಲಿ ಸುತ್ತಿ ತಿಪ್ಪೆಗೋ, ಚರಂಡಿಗೋ ಎಸೆದು ಹೋಗುತ್ತಾಳಲ್ಲ? ಆಕೆಯನ್ನು ‘ಇವಳೆಂತಹ ತಾಯಿ?’ ಎಂದು ಸಮಾಜ ಜರಿಯುತ್ತದೆ. ಆದರೆ ನನಗೆ ಆಕೆಯ ಸಂಕಟ ಅರ್ಥವಾಗುತ್ತದೆ. ನನ್ನ ದೃಷ್ಟಿಯಲ್ಲಿ ಆಕೆ ತಾಯಿಯೇ ಅಲ್ಲ. ಕೇವಲ ಹುಡುಗಿ. ಏಕೆಂದರೆ, ತಾಯ್ತನವೆಂಬುದು ಕೇವಲ ಹೆರಿಗೆ ಎಂಬ ದೈಹಿಕ ಅನುಭವದಿಂದ ಬರುವಂತಹುದಲ್ಲ. ಒಬ್ಬ ಹುಡುಗಿ ತಾಯಿಯಾಗಬೇಕು ಅಂದರೆ, ಗರ್ಭ ಧರಿಸಿದಾಗಿನಿಂದಲೇ ಅದಕ್ಕೆ ಮಾನಸಿಕವಾಗಿ ಸಿದ್ಧಳಾಗಬೇಕು. ತನ್ನ ಭ್ರೂಣದೊಂದಿಗೆ ಮಾತನಾಡಬೇಕು. ಅವಳಲ್ಲಿ ಹೆರಿಗೆಗೆ ಮುಂಚೆಯೇ ಜೋಗುಳವೊಂದು ಪಲ್ಲವಿಸಬೇಕು. ಮುಖ್ಯವಾಗಿ ಅವಳಲ್ಲಿ ತನ್ನ ಮಗುವಿನ ಬಗ್ಗೆ ನಿಚ್ಚಳದ ಕನಸೊಂದು ಮೂಡಬೇಕು. ಇದ್ಯಾವುದೂ ಇಲ್ಲದ ಹುಡುಗಿ, ಒಲ್ಲದ ಗರ್ಭ ಧರಿಸಿದಾಗ ಆ ಒಂಬತ್ತು ತಿಂಗಳುಗಳನ್ನು ಶಾಪದಂತೆ ಕಳೆಯುತ್ತಾಳೆ. ಅವಳಿಗೆ ಅದನ್ನು ‘ನೀಗಿ’ಕೊಂಡರೆ ಸಾಕು. ಆಕೆಯನ್ನು ನೀವು ‘ತಾಯಿ’ ಅಂತ ಪರಿಗಣಿಸಲು ಸಾಧ್ಯವೇ ಇಲ್ಲ. ಏಕೆಂದರೆ, ‘ತಾಯಿ’ ಎಂಬುದು ಒಂದು ಮನಃಸ್ಥಿತಿ. ಅದಕ್ಕೆ, ಮಕ್ಕಳಿರುವವಳೇ ಆಗಬೇಕು ಅಂತ ಇಲ್ಲ. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಹೇಳುವುದಾದರೆ ‘ತಾಯಿ’ಯಾಗಲಿಕ್ಕೆ ಹೆಣ್ಣೇ ಆಗಬೇಕು ಅಂತಲೂ ಇಲ್ಲ. ಅದಕ್ಕೆ ಬೇಕಾದದ್ದು ಕೇವಲ ಮನೋಸಿದ್ಧತೆ.

ಎರಡನೆಯ ವಿಷಯ: ಚಿಕ್ಕದೊಂದು ತುಂಟತನ ಮಾಡಿದ ಮಗುವನ್ನು ಅದರ ತಾಯಿ ರಸ್ತೆಯಲ್ಲೇ ಹಿಡಿದುಕೊಂಡು ಫಟಿ ಫಟಿ ಹೊಡೆಯುತ್ತಿರುತ್ತಾಳೆ. ತುಂಟತನ ಹಾಗಿರಲಿ, ಆಯತಪ್ಪಿ ಬಿದ್ದು ಮೊಳಕಾಲ ಗಾಯ ಮಾಡಿಕೊಂಡು ಬಂದ ಮಗುವನ್ನು ‘ಬೀಳ್ತಿಯಾ ಬೀಳ್ತಿಯಾ?’ ಅಂತ ಪ್ರಶ್ನಿಸುತ್ತ ಮನಸ್ಸಿಗೆ ಬಂದಂತೆ ಚಚ್ಚುತ್ತಿರುತ್ತಾಳೆ. ‘ಇವಳೆಂಥ ತಾಯಿ?’ ಅಂತ ನೋಡುವವರಿಗೆ ಅನ್ನಿಸುತ್ತಿರುತ್ತದೆ. ಆದರೆ ನಾನು ಆ ಗೃಹಿಣಿಯ ಮಾನಸಿಕ ಒತ್ತಡಗಳನ್ನು ಗಮನಿಸುತ್ತಿರುತ್ತೇನೆ. ಆಕೆ ಕೆಟ್ಟವಳಲ್ಲ. ಒಂಬತ್ತು ತಿಂಗಳು ಹೊತ್ತು, ನೋವು ತಿಂದು ಹೆತ್ತು, ಹಾಲೂಡಿಸಿ, ಮಗುವನ್ನು ಮುದ್ದಾಡಿಯೇ ಬೆಳೆಸಿದ್ದಾಳೆ. ಆದರೆ ಯಾಕೋ ಆಕೆಯ ಮನಸು ಸರಿಯಿಲ್ಲ. ವಿಚಲಿತಗೊಂಡಿದ್ದಾಳೆ. ಮನೆಯಲ್ಲಿ ಸಮಸ್ಯೆ ಇರಬಹುದು. ದಾಂಪತ್ಯದಲ್ಲಿ ವಿರಸವಿರಬಹುದು. ಖಜಛಿ ಜಿಠ ಛಛಿಠಟಚ್ಟಚಠಿಛಿ ಚ್ಞಛ ್ಚn್ಠಛಿಛ. ಏನು ಮಾಡಬೇಕು ಎಂಬುದು ಗೊತ್ತಿಲ್ಲದೆ ಗೊಂದಲಕ್ಕೆ ಬಿದ್ದ ಆಕೆ, ಚಿಕ್ಕ ಕಾರಣಕ್ಕಾಗಿ ಮಗುವನ್ನು ಛಟಿ ಛಟಿ ಹೊಡೆಯುತ್ತಿದ್ದಾಳೆ. ಆಕೆಯ ಬಗ್ಗೆ ನನಗೆ ಸಿಂಪಥಿ ಇದೆ. ಒಂದು ನೆಮ್ಮದಿವಂತ ಕುಟುಂಬ, ಕೌಟುಂಬಿಕ ಜೀವನ ಅನುಭವಿಸುವ ಗೃಹಿಣಿಯರ್ಯಾರೂ ತಮ್ಮ ಮಕ್ಕಳನ್ನು ಹಾಗೆ ವಿನಾಕಾರಣ ಹೊಡೆಯುವುದಿಲ್ಲ.

ಹಾಗೆ ಹೊಡೆಯುವ ಹೆಣ್ಣುಮಕ್ಕಳಿಗೆ ಚಿಕಿತ್ಸೆ ಬೇಕಾಗಿರುತ್ತದೆ. ದಾವಣಗೆರೆಯಲ್ಲಿ ಒಬ್ಬ ಗೃಹಿಣಿ ಇಂಥದೇ ಕ್ಷುಲ್ಲಕ ಕಾರಣಕ್ಕಾಗಿ ತನ್ನ ಮಗಳನ್ನು ಕೊಂದೇಬಿಟ್ಟಳು. ಇಂಥವು ‘ತಾಯ್ತನ’ದ ಪರಿಧಿಯಲ್ಲಿಟ್ಟುಕೊಂಡು ರ್ಚಚಿಸಬಹುದಾದ ಸಂಗತಿಗಳಲ್ಲ. ಆದರೆ ಕೆಲವು ಸಲ ‘ಕೆಟ್ಟ ತಾಯಂದಿರು’ ತಮ್ಮ ಮಕ್ಕಳು ಚೆನ್ನಾಗಿ ಬೆಳೆದು ದೊಡ್ಡವರಾದ ಮೇಲೆ ಇದ್ದಕ್ಕಿದ್ದಂತೆ ಪ್ರಕಟಗೊಳ್ಳುತ್ತಾರೆ.

ತಾನು ಹೆತ್ತ ಮಗ ಸುಖಿಯಾಗಿರಲಿ, ಯಶಸ್ವೀ ಜೀವನ ಸಾಗಿಸಲಿ, ಅವನಿಗೆ ಮಕ್ಕಳು-ಮರಿ ಆಗಿ ವಂಶ ಬೆಳೆಯಲಿ ಎಂಬ ಬಯಕೆ ಪ್ರತಿ ತಾಯಿಗೂ ಇರುತ್ತದೆ. ಆದರೆ ಕೆಲವು ತಾಯಂದಿರು ಮಗನ ಮದುವೆಯಾದ ಕೂಡಲೆ ‘ಅತ್ತೆ’ಯರಾಗಿಬಿಡುತ್ತಾರೆ. ತಮ್ಮ ಮಗನನ್ನು ಯಾವ ಪರಿ ನಿರ್ಬಂಧಿಸುತ್ತಾರೆ ಅಂದರೆ, ಅವನಿಗೆ ಹೆಂಡತಿಯೊಂದಿಗೆ ಮಲಗುವ ಅವಕಾಶವನ್ನೂ ಕೊಡುವುದಿಲ್ಲ. ಹೆಂಡತಿಯೊಂದಿಗೆ ಸಿನಿಮಾಕ್ಕೆ, ಮಾರುಕಟ್ಟೆಗೆ, ದೇವಸ್ಥಾನಕ್ಕೆ, ಪಿಕ್​ನಿಕ್​ಗೆ ಹೋಗಲು ಬಿಡುವುದಿಲ್ಲ. ಒಡವೆ ಮಾಡಿಸಿಕೊಡಲು ಬಿಡುವುದಿಲ್ಲ. ಅವತ್ತಿನ ತನಕ ಮಾತೃದೇವತೆಯಾಗಿದ್ದವಳು, ಮಗನ ಮದುವೆಯಾದ ಕೂಡಲೆ ಪರಿಶುದ್ಧ ಅತ್ತೆ! ಇಂಥ ವರ್ತನೆಗೆ ಪೊಸೆಸಿವ್​ನೆಸ್​ನಿಂದ ಹಿಡಿದು ಅಭದ್ರತೆಯ ತನಕ ನೂರಾರು ಕಾರಣಗಳಿರಬಹುದು. ‘ಅತ್ತೆಗಿರಿ’ ಎಂಬುದು ಬೇರೆಯೇ ತೆರನಾದ ಚರ್ಚೆಗೊಳಗಾಗಬೇಕಾದ ಅಧ್ಯಾಯ.

ಆದರೆ, ನೀವು ಇನ್ನೊಂದು ವೆರೈಟಿಯ ತಾಯಂದಿರನ್ನು ನೋಡಿದ್ದೀರಾ? ಅವರು ಹೆಣ್ಣು ಮಕ್ಕಳ ತಾಯಂದಿರು. ಅವರಿಗೆ ಬೆಳೆದ, ಮದುವೆಯಾದ ಹೆಣ್ಣು ಮಕ್ಕಳಿರುತ್ತಾರೆ. ಅವರಿಗೆ ತಾವೇ ನಿಂತು ಮದುವೆ ಮಾಡಿರುತ್ತಾರೆ. ಅಳಿಯನೂ ಅವರು ಹುಡುಕಿದ, ಅವರು ಒಪ್ಪಿದಂಥವನೇ. ಆದರೆ ಈ ತಾಯಂದಿರಿಗೆ ಅದೇನಾಗುತ್ತದೆಯೋ, ಗೊತ್ತಿಲ್ಲ: ತಮ್ಮ ಮಗಳ ಸಂಸಾರದಲ್ಲಿ ತಲೆ ಹಾಕಲಾರಂಭಿಸಿಬಿಡುತ್ತಾರೆ.

ಈ ತಲೆಹಾಕುವಿಕೆ ಕಡೆಗೆ ಯಾವ ಮಟ್ಟಕ್ಕೆ ಹೋಗುತ್ತದೆಯೆಂದರೆ, ಅವರು ತಮ್ಮ ಮಗಳಿಗೆ ಸಂಸಾರ ಮಾಡುವುದಕ್ಕೇ ಬಿಡುವುದಿಲ್ಲ. ‘ನಿನ್ನ ಅತ್ತೆ-ನಾದಿನಿಯೊಂದಿಗೆ ಹೊಂದಿಕೊಳ್ಳಬೇಡ’ ಎಂಬುದರಿಂದ ಹಿಡಿದು ‘ಗಂಡನಿಗೆ ಡಿವೋರ್ಸ್ ಕೊಡು’ ಎಂಬುದರ ತನಕ ಎಲ್ಲವನ್ನೂ ಮಗಳಿಗೆ ಬೋಧಿಸುತ್ತಾರೆ. ‘ನಿನಗೆ ಇನ್ನೂ ಒಳ್ಳೆಯ ಗಂಡ ಸಿಗುತ್ತಿದ್ದ. ಇಂಥ ಅನಾಗರಿಕ ಅತ್ತೆ-ಮಾವ ಇದ್ದಾರೆ ಅಂತ ಗೊತ್ತಿರಲಿಲ್ಲ. ಅವರ ಮನೆಯಲ್ಲಿ ತಂಗಳನ್ನದ ಚಿತ್ರಾನ್ನ ಮಾಡಿದರೆ ಹ್ಯಾಗೆ ತಿಂದುಕೊಂಡಿದ್ದೀಯ? ನಾಳೆ ಬೆಳೀತಾ ಬೆಳೀತಾ ನಿನ್ನ ಮಗೂನೂ ಅವರ ಮನೆಯವರ

ಥರಾ ಆಗಿಬಿಡುತ್ತೆ. ಇಷ್ಟಕ್ಕೂ, ನಿನ್ನ ಗಂಡ ಎರಡು ವರ್ಷದಲ್ಲಿ ಏನೇನು ಒಡವೆ ಮಾಡಿಸಿದ?’- ಹೀಗೆ ನಿರಂತರವಾಗಿ ಒಂದಾದ ಮೇಲೊಂದು ಸಬ್ಜೆಕ್ಟು ಎತ್ತಿಕೊಟ್ಟು ಮಗಳನ್ನು ಅವಳ ಅತ್ತೆ ಮನೆಯವರ ವಿರುದ್ಧ ‘ಪಿಚ್’ ಮಾಡಿ, ಕಡೆಗೂ ಸಂಸಾರ ಛಿದ್ರವಾಗುವಂತೆ ಮಾಡಿಬಿಡುತ್ತಾರೆ.

‘ನನ್ನ ಮಗಳು ವಾಪಸು ಬಂದು ನನ್ನ ಮನೇಲಿ ಎರಡು ಹೊತ್ತು ಉಂಡು-ತಿಂದು ರಾಣಿಯ ಹಾಗಿರ್ಲಿ. ನಮಗೆ ದೇವರು ಯಾವುದಕ್ಕೂ ಕಡಿಮೆ ಮಾಡಿಲ್ಲ. ಆ ನರಕದಲ್ಲಿ ಬದುಕೋಕ್ಕಿಂತ ನಮ್ಮನೇಲಿ ಜೀವನ ಪರ್ಯಂತ ಇರೋದು ವಾಸಿ. ಇವಳು ಮಗಳಲ್ಲ, ಮಗ ಅಂದುಕೊಳ್ತೀವಿ’ ಎಂದು ಮಾತನಾಡುತ್ತಿರುತ್ತಾರೆ. ಣ್ಛ ಇಟ್ಠ್ಟಛಿ, ಮದುವೆ ಮಾಡಿಕೊಟ್ಟ ಮೇಲೆ ಮಗಳು ಆ ಮನೆಯಲ್ಲಿ ಚೆನ್ನಾಗಿದ್ದಾಳೋ ಇಲ್ಲವೋ ಅಂತ ಕಾಳಜಿ ವಹಿಸುವುದು ಸಹಜ. ಅದು ಬೇಕೂ ಹೌದು. ಆದರೆ, ತೀರ ಅವಳು ಆ ಮನೆಗೆ ಹೊಂದಿಕೊಳ್ಳುವುದಕ್ಕೆ ಆಗದೇ ಇರುವಷ್ಟು ಯಾಕೆ ಇಂಟರ್​ಫಿಯರ್ ಆಗುತ್ತೀರಿ? ಅವಳನ್ನು ತವರಿಗೆ ವಾಪಸ್ ಕರೆತಂದು ‘ರಾಣಿ’ಯ ಹಾಗೆ ಇಟ್ಟುಕೊಳ್ಳುವ ಸಂಪತ್ತಿಗೆ, ಅವಳಿಗೊಬ್ಬ ‘ರಾಜ’ನನ್ನೇಕೆ ಗಂಟು ಹಾಕಿದಿರಿ? ಆ ಹುಡುಗಿಯನ್ನು ಅವಳ ಪಾಡಿಗೆ ಬಿಟ್ಟು, ಹೊಸ ಬದುಕು ಟಿಸಿಲೊಡೆಯಲು ಅವಕಾಶ ಮಾಡಿಕೊಡುವುದಿಲ್ಲವೇಕೆ? ಈ ಪ್ರಶ್ನೆಗಳನ್ನು ಅಂಥ ತಾಯಂದಿರಿಗೆ ಕೇಳಬೇಕು. ಇದು ಅನಾರೋಗ್ಯಕಾರಿಯಾದ, ಅನವಶ್ಯಕವಾದ ಪೊಸೆಸಿವ್​ನೆಸ್. ತಾಯಂದಿರು ಹೀಗೆ ವರ್ತಿಸಿ, ತಮ್ಮನ್ನು ಪ್ರತಿಯೊಂದರಲ್ಲೂ ಬೆಂಬಲಿಸುತ್ತಾರೆ ಎಂಬುದು ಖಚಿತವಾಗುತ್ತಿದ್ದಂತೆಯೇ ಅವರ ಹೆಣ್ಣುಮಕ್ಕಳು ಗಂಡನ ಮನೆಯಲ್ಲಿ ಚಿಕ್ಕ-ಸಂಗತಿಗಳಿಗೂ ವಿಪರೀತ ಊಠಠ ಮಾಡತೊಡಗುತ್ತಾರೆ. ಸಣ್ಣದಕ್ಕೂ ಮುನಿಸಿಕೊಂಡು ತವರಿಗೆ ಬರತೊಡಗುತ್ತಾರೆ. ಅತ್ತೆ-ಮಾವ-ಗಂಡ ಎಲ್ಲರೆಡೆಗೂ ತಿರಸ್ಕಾರ ಬೆಳೆಸಿಕೊಳ್ಳುತ್ತಾರೆ.

ನೋಡ ನೋಡುತ್ತ, ಒಂದು ಸಂಸಾರ ಮುರಿದು ಹೋಗುತ್ತದೆ. ಹೀಗೆ ತನ್ನ ಹೆಣ್ಣುಮಗಳ ಸಂಸಾರದಲ್ಲಿ ತಲೆಹಾಕಿ, ವಿಪರೀತ ಪೊಸೆಸಿವ್ ಆಗಿ ಆಡುತ್ತಿದ್ದ ಮಧ್ಯವಯಸ್ಕ ಮಹಿಳೆಯೊಬ್ಬರಿಗೆ ಮೊನ್ನೆ ಹೇಳಿದೆ-‘ನೀವು ನಿಮ್ಮ ಮಗಳಿಗೆ ದಿನಕ್ಕೆ ಎರಡು ಸಲ ಫೋನ್ ಮಾಡುವುದನ್ನು ನಿಲ್ಲಿಸಿ: ಅವಳ ಸಂಸಾರ ಸರಿ ಹೋಗುತ್ತದೆ’. ನನ್ನ ಸಲಹೆ ಜಾರಿಗೆ ಬಂದಂತಿದೆ.

Leave a Reply

Your email address will not be published. Required fields are marked *