ಸಂಕೇಶ್ವರ ವೆಂಚರ್ಸ್ ಸಾಧನೆಗೆ ಮತ್ತೊಂದು ಗರಿ: ಅತ್ಯುತ್ತಮ ನೈಸರ್ಗಿಕ ಮಿನರಲ್ ವಾಟರ್ ಉತ್ಪಾದನೆ

ಬೆಂಗಳೂರು: ಪರಿಶುದ್ಧ ಮತ್ತು ರುಚಿಯುಕ್ತ ನೈಸರ್ಗಿಕ ಮಿನರಲ್ ವಾಟರ್ ಕೊಮಿನ್​ಗೆ ಅತ್ಯುನ್ನತ ಕುಡಿಯುವ ನೀರಿನ ಎಕ್ಸ್​ಪೊ-2019ರಲ್ಲಿ ಅಂತಾರಾಷ್ಟ್ರೀಯ ಮಾನ್ಯತೆ ಲಭಿಸಿದೆ. ಚೀನಾದ ಗ್ವಾಂಗ್​ರೆೊದಲ್ಲಿ ನಡೆದ ಅಂತಾರಾಷ್ಟ್ರೀಯ ಅತ್ಯುತ್ತಮ ರುಚಿ ಹೊಂದಿರುವ ಮಿನರಲ್ ವಾಟರ್ ಸ್ಪರ್ಧೆಯಲ್ಲಿ ಸ್ಥಿರ ನೀರಿನ ವಿಭಾಗದಲ್ಲಿ ನೈಸರ್ಗಿಕ ನೀರಿನ ಉತ್ಪನ್ನವಾಗಿರುವ ಕೊಮಿನ್​ಗೆ ಕಂಚಿನ ಪದಕ ಸಿಕ್ಕಿದೆ. ಖಾಸಗಿ ಹೋಟೆಲ್​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಕೇಶ್ವರ ವೆಂಚರ್ಸ್ ಪ್ರೖೆವೇಟ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಸಂಕೇಶ್ವರ ಅವರು, ಅತ್ಯುತ್ತಮ ರುಚಿ ಹೊಂದಿರುವ ಜಾಗತಿಕ ನೈಸರ್ಗಿಕ ಮಿನರಲ್ ವಾಟರ್ ನಮ್ಮ ಕಂಪನಿಯ ಹೆಮ್ಮೆಯ ಉತ್ಪಾದನೆಯಾಗಿದೆ ಎಂದರು.

2,200 ಬ್ರಾ್ಯಂಡ್​ಗಳ ಸ್ಪರ್ಧೆ: ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ರಷ್ಯಾ, ಜರ್ಮನಿ, ಬಲ್ಗೇರಿಯಾ, ನ್ಯೂಜಿಲ್ಯಾಂಡ್, ಅರ್ಜಂಟೈನಾ, ಕೊರಿಯಾ, ಇಟಲಿ, ಹಾಂಕಾಂಗ್, ತೈವಾನ್ ಸೇರಿ ಪ್ರಮುಖ ದೇಶಗಳ 2,200ಕ್ಕೂ ಹೆಚ್ಚು ಬ್ರಾ್ಯಂಡ್​ಗಳು ಪಾಲ್ಗೊಂಡಿದ್ದವು. ದೇಶದಿಂದ ಪಾಲ್ಗೊಂಡಿದ್ದ ನೈಸರ್ಗಿಕ ಮಿನರಲ್ ನೀರಿನ ಬ್ರಾ್ಯಂಡ್​ಗಳ ಪೈಕಿ ಕೊಮಿನ್ ಮಾತ್ರ ಪ್ರಶಸ್ತಿ ಗಿಟ್ಟಿಸಿದ ಬ್ರಾ್ಯಂಡ್ ಆಗಿದೆ. ದೇಶದ ಅತ್ಯುತ್ತಮ ಗುಣಮಟ್ಟದ ಕುಡಿಯುವ ನೀರಿನ ಉತ್ಪಾದನೆಗಳಲ್ಲಿ ಇದು ಹೆಮ್ಮೆಯ ಸ್ಥಾನ ಪಡೆದಿದೆ ಎಂದರು. ಕೊಮಿನ್ ವಾಟರ್​ಅನ್ನು ನೆರೆ ರಾಜ್ಯವಷ್ಟೇ ಅಲ್ಲದೆ ಹೊರ ದೇಶಗಳಿಗೂ ಕಳುಹಿಸಲು ಯೋಜನೆ ರೂಪಿಸಲಾಗಿದ್ದು, ಶೀಘ್ರವೇ ಕಾರ್ಯರೂಪಕ್ಕೆ ತರಲಾಗುವುದು ಎಂದರು.

ಬೆಟ್ಟದ ತಪ್ಪಲಿನಲ್ಲಿ ಕೊಮಿನ್: ಕೊಮಿನ್ ಉತ್ಪಾದನಾ ಘಟಕ ಸಹ್ಯಾದ್ರಿ ಬೆಟ್ಟಗಳ ನೈಸರ್ಗಿಕ ತಾಣದಲ್ಲಿದ್ದು, ಅಲ್ಲಿ ಲಭಿಸುವ ಶುದ್ಧ ನೀರನ್ನು ಅಲ್ಲೇ ನೇರವಾಗಿ ಪ್ಯಾಕ್ ಮಾಡಲಾಗುತ್ತದೆ. ಆ ನೀರಿಗೆ ಏನನ್ನೂ ಸೇರಿಸುವುದಿಲ್ಲ. ಯಾವುದೇ ಸಂಸ್ಕರಣೆಗೂ ಒಳಪಡಿಸುವುದಿಲ್ಲ ಎಂದರು.

ಹಿಮಾಲಯದಲ್ಲಿ 18 ತಾಣ: ನೈಸರ್ಗಿಕವಾಗಿ ಉತ್ಪತ್ತಿಯಾಗುವ ಜಲಮೂಲಗಳು ದೇಶದಲ್ಲಿ 22 ಕಡೆ ಮಾತ್ರವಿದ್ದು, ಆ ಪೈಕಿ 18 ಮೂಲಗಳು ಹಿಮಾಲಯದ ತಪ್ಪಲಿನಲ್ಲಿ, ಎರಡು ಗುಜರಾತ್​ನಲ್ಲಿವೆ. ಇನ್ನೆರಡು ಮೂಲಗಳು ಮಹಾರಾಷ್ಟ್ರದ ಸಹ್ಯಾದ್ರಿ ತಪ್ಪಲಿನಲ್ಲಿವೆ. ಅಂಥ ಒಂದು ತಾಣ ಲೋನಾವಳದಲ್ಲಿದ್ದು, ಅಲ್ಲಿಂದಲೇ ವಾಟರ್ ಪ್ಯಾಕ್ ಮಾಡಲಾಗುತ್ತಿದೆ. ಇದು ಪೋಷಕಾಂಶಗಳಿಂದ ಸಂಪೂರ್ಣ ಜೀವನಕ್ರಮ ಉತ್ತೇಜಿಸುವ ಅತ್ಯಂತ ಪರಿಶುದ್ಧ ನೈಸರ್ಗಿಕ ಶುದ್ಧ ನೀರು. ಈ ನೀರು ಜಗತ್ತಿಗೆ ದಕ್ಕಬೇಕೆಂಬ ಸದುದ್ದೇಶ ಕೊಮಿನ್ ಉತ್ಪನ್ನದ ಹಿಂದಿದೆ ಎಂದು ರವೀಂದ್ರ ಅವರು ತಿಳಿಸಿದರು.

ಆರೋಗ್ಯ ವೃದ್ಧಿಸುವ ನೀರು

ಕೊಮಿನ್ ನೈಸರ್ಗಿಕ ಮಿನರಲ್ ವಾಟರ್ ನಿಯಮಿತವಾಗಿ ಸೇವಿಸುವುದರಿಂದ ಹೃದಯದ ಆರೋಗ್ಯ ಸುಧಾರಣೆ, ಕೂದಲು ಹಾಗೂ ತ್ವಚೆಯ ಬೆಳವಣಿಗೆ ಆಗಲಿದೆ ಎಂದು ಸಂಕೇಶ್ವರ ವೆಂಚರ್ಸ್ ಪ್ರೖೆವೇಟ್ ಕಂಪನಿ ನಿರ್ದೇಶಕ ವಿಜಯ ಮಾನೆ ಹೇಳಿದರು. ಜೀರ್ಣಶಕ್ತಿ, ದೇಹದ ಚಯಾಪಚಯ ಕ್ರಿಯೆಗಳ ಸಾಮರ್ಥ್ಯ ಹೆಚ್ಚುತ್ತದೆ. ಮೂಳೆಗಳು ಬಲಗೊಂಡು ರೋಗನಿರೋಧಕ ಶಕ್ತಿ ಬರುತ್ತದೆ. ನೈಸರ್ಗಿಕವಾಗಿ ಸಮೃದ್ಧ, ನೈಸರ್ಗಿಕ, ಮೃದುತ್ವ, ಗರಿಷ್ಠ ಪಿಎಚ್ ಮತ್ತು ಕ್ಷಾರತೆ ಗುಣಗಳನ್ನು ಕೊಮಿನ್ ಹೊಂದಿದೆ. ಅವಶ್ಯಕ ಲವಣಗಳಾದ ಮ್ಯಾಗ್ನಿಷಿಯಂ, ಕ್ಯಾಲ್ಸಿಯಂ, ಪೊಟ್ಯಾಷಿಯಂ, ಸೋಡಿಯಂ ಮತ್ತು ನೈಟ್ರೇಟ್​ಗಳನ್ನು ನೈಸರ್ಗಿಕವಾಗಿ ಪಡೆಯಲಾಗಿದೆ ಮತ್ತು ಅವಶ್ಯಕ ಪ್ರಮಾಣದಲ್ಲಿದೆ. ಕೊಮಿನ್ ಜನಪ್ರಿಯ ಮಾರಾಟ ತಾಣಗಳಾದ ಅಮೆಜಾನ್, ಬಿಗ್​ಬಾಸ್ಕೆಟ್, ಫ್ಲಿಪ್​ಕಾರ್ಟ್ ಜತೆಗೆ ದೇಶದ ಎಲ್ಲ ತಾರಾ ಹೋಟೆಲ್​ಗಳು, ಜನಪ್ರಿಯ ಪ್ರವಾಸಿ ಸೇವಾ ಉದ್ಯಮಗಳು ಹಾಗೂ ಜಂಗಲ್ ರೆಸಾರ್ಟ್​ಗಳಲ್ಲಿ ಲಭ್ಯವಿದೆ ಎಂದರು.

Leave a Reply

Your email address will not be published. Required fields are marked *