More

  ಮಾಜಿ ಸಿಎಂ ಸಿದ್ದರಾಮಯ್ಯ ಪಾಠಕ್ಕೆ ಚಪ್ಪಾಳೆಯ ಸುರಿಮಳೆ!: ಎಲ್ಲಿ ಯಾರಿಗೆ ಪಾಠ ತಿಳಿಯುವ ಕುತೂಹಲವೇ ಮುಂದೆ ಓದಿ…

  ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಪಾಠ ಮಾಡಿ ಚಪ್ಪಾಳೆಯ ಸುರಿಮಳೆ ಗಿಟ್ಟಿಸಿಕೊಂಡಿದ್ದಾರೆ.

  ರಾಜಕೀಯ ಚಟುವಟಿಕೆಗಳ ಒತ್ತಡದ ನಡುವೆಯೇ ಸಿದ್ದರಾಮಯ್ಯ ಪಾಠ ಮಾಡಿದ್ದು ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ. ಈ ರೀತಿ ಪಾಠ ಮಾಡಿರುವುದು ಬಾಗಲಕೋಟೆ ಜಿಲ್ಲೆಯಲ್ಲಿ!
  ರಾಜಕೀಯ ಜಂಜಾಟದ ನಡುವೆ ಮಕ್ಕಳಿಗೆ ವ್ಯಾಕರಣ ಪಾಠ ಮಾಡಿದ ಮಾಜಿ ಸಿಎಂ, ಸಂಧಿ ಸಮಾಸದ ಸುದೀರ್ಘ ವಿವರಣೆಯನ್ನೆ ಕೊಟ್ಟರು. ಬಾದಾಮಿ ತಾಲೂಕಿನ ಜುಮ್ಮನಕಟ್ಟಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ದಿಢೀರ್ ಮೇಷ್ಟರಾದರು.

  ಕಾರಣ ಇಷ್ಟೆ- ಅಲ್ಲಿನ ಸಭೆಯಲ್ಲಿ ಪುಟಾಣಿ ವಿದ್ಯಾರ್ಥಿಗಳೇ ಹೆಚ್ಚಿದ್ದ ಕಾರಣ, ಮಕ್ಕಳಿಗೆ ಒಂದೊಂದು ಪದಗಳನ್ನು ಹೇಳಿ ಸಂಧಿ, ಸಮಾಸ ಯಾವುದು ಅಂತ ಪ್ರಶ್ನೆ ಮಾಡಇದರು. ಸವರ್ಣದೀರ್ಘ ಸಂಧಿ, ಗುಣಸಂಧಿ, ಆಗಮ ಸಂಧಿ, ಲೋಪ ಸಂಧಿ, ಯಣ್ ಸಂಧಿ, ಆಗಮ, ಆದೇಶ ಹೀಗೆ ವ್ಯಾಕರಣ ಪಾಠವನ್ನು ಮಾಡಿದರು.

  ಪ್ರಶ್ನೆಗಳನ್ನು ಕೇಳಿ, ಮಕ್ಕಳಿಂದ ಉತ್ತರವನ್ನೂ ಪಡೆದರು. ಹೀಗೆ, ಖುಷಿಖುಷಿಯಾಗಿ ವ್ಯಾಕರಣ ಪಾಠಕ್ಕೆ ಮಾಡಿದ ಸಿದ್ದರಾಮಯ್ಯನವರ ನಡೆಗೆ ಶಾಲಾ ವಿದ್ಯಾರ್ಥಿಗಳಷ್ಟೇ ಅಲ್ಲ, ಶಿಕ್ಷಕರು, ಗ್ರಾಮಸ್ಥರೂ ತಲೆದೂಗಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts