More

    ಪ್ರತಿಯೊಬ್ಬರೂ ಸ್ವಾಮಿ ವಿವೇಕಾನಂದರ ಆದರ್ಶ ಪಾಲಿಸಿ

    ಗೋಕಾಕ: ಜಗತ್ತಿಗೆ ಭಾರತೀಯ ಆಧ್ಯಾತ್ಮಿಕತೆಯ ಶ್ರೇಷ್ಠತೆಯನ್ನು ಸಾರಿದ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರು ಎಂದು ವಿಎಚ್‌ಪಿಯ ಬೆಳಗಾವಿ ವಿಭಾಗದ ಪ್ರಧಾನ ಕಾರ್ಯದರ್ಶಿ ನಾರಾಯಣ ಮಠಾಕಾರಿ ಹೇಳಿದ್ದಾರೆ.

    ಗುರುವಾರ ನಗರದ ಎಲ್‌ಇಟಿಯ ವಿವಿಧ ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ವಿವೇಕಾನಂದರು ಆಧ್ಯಾತ್ಮಿಕ ಶಕ್ತಿ ಹಾಗೂ ತಮ್ಮಲ್ಲಿರುವ ಮೇಧಾವಿತನದಿಂದ ಇಡಿ ಜಗತ್ತನ್ನೆ ಗೆದ್ದು ಭಾರತೀಯ ಸಂಸ್ಕೃತಿ ಪರಂಪರೆಯಿಂದ ವಿಶ್ವಶಾಂತಿ ಸಾಧ್ಯವೆಂದು ಸಾರಿದ್ದರು ಎಂದು ವಿವೇಕಾನಂದರ ಕಾರ್ಯವನ್ನು ಸ್ಮರಿಸಿದರು.

    ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ, ಪ್ರಾಚಾರ್ಯ ಐ.ಎಸ್.ಪವಾರ, ಎನ್.ಕೆ.ಮಿರಾಸಿ, ಮುಖ್ಯಶಿಕ್ಷಕ ಬಿ.ಕೆ.ಕುಲಕರ್ಣಿ, ಉಪನ್ಯಾಸಕ ವಿ.ಬಿ.ಕಣಿಲದಾರ ಇತರರು ಇದ್ದರು.
    ಮೂಡಲಗಿ ವರದಿ: ಭಾರತದ ಸಂಸ್ಕೃತಿ, ಕೀರ್ತಿಯನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದ ಅವರಿಗೆ ಸಲ್ಲುತ್ತದೆ. ಯುವಕರು ವಿವೇಕಾನಂದರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಚಿಕ್ಕೋಡಿಯ ಶ್ರೀಕಾಂತ ಕುಲಕರ್ಣಿ ಹೇಳಿದ್ದಾರೆ.

    ಗುರುವಾರ ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನಿಂದ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಕರುನಾಡ ಸೈನಿಕ ತರಬೇತಿ ಸಂಸ್ಥೆಯ ಅಧ್ಯಕ್ಷ, ಮಾಜಿ ಯೋಧ ಶಂಕರ ತುಕ್ಕನ್ನವರ ಮಾತನಾಡಿ, ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ಸಮಯ ಹಾಳು ಮಾಡುವ ಬದಲು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಗುಣಮಟ್ಟದ ಶಿಕ್ಷಣ ಪಡೆದು ಸರ್ಕಾರಿ ಕೆಲಸಕ್ಕೆ ಸೇರುವ ಮೂಲಕ ಸಮಾಜ ಸೇವೆ ಮಾಡಬೇಕು ಎಂದರು.

    ಅಭಾವಿಪದ ನಗರ ಅಧ್ಯಕ್ಷ ಪ್ರೊ.ಸಂಜಯ ಖೋತ ಹಾಗೂ ಸುಣಧೋಳಿಯ ಜಡಿಸಿದ್ದೇಶ್ವರ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಮಾತನಾಡಿದರು. ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯ ಸೋನವಾಲ್ಕರ್, ಚಿಕ್ಕೋಡಿ ಜಿಲ್ಲಾ ಅಭಾವಿಪದ ಸಂಚಾಲಕ ಸಚಿನ ಬಳ್ಳೋಳಿ, ಉಪನ್ಯಾಸಕ ಶಿವಾಜಿ ಮುಳಿಕ, ನಗರ ಕಾರ್ಯದರ್ಶಿ ಬಸವರಾಜ ಜೋಡಟ್ಟಿ, ತಾಲೂಕು ಸಂಚಾಲಕ ಮಲ್ಲಪ್ಪ ಮುಕ್ಕುಂದ ಇತರರು ಇದ್ದರು. ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts