ಉಳ್ಳಾಗಡ್ಡಿ-ಖಾನಾಪುರ: ಶಿಕ್ಷಣದಷ್ಟೇ ಕ್ರೀಡೆಗೂ ಮಹತ್ವ ನೀಡಬೇಕು ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಕ್ರೀಡಾಂಗಣದಲ್ಲಿ ಕೇಂದ್ರ ಸರ್ಕಾರದ ಪ್ರಾಯೋಜಕತ್ವದಲ್ಲಿ ಖೇಲೋ ಇಂಡಿಯಾ ಯೋಜನೆಯಡಿ 17 ವರ್ಷ ವಯೋಮಿತಿ ಒಳಗಿನ ಬಾಲಕಿಯರಿಗೆ ಏರ್ಪಡಿಸಿದ್ದ ುಟ್ಬಾಲ್ ಪಂದ್ಯಾವಳಿಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಬಾಲಕಿಯರು ಕ್ರೀಡೆಯ ಸದುಪಯೋಗ ಪಡೆದುಕೊಂಡು ಸಾಧನೆ ಮಾಡಬೇಕು ಎಂದರು.
ಮುಖಂಡ ಬಾಬುಗೌಡ ಮಲಗೌಡನವರ ಮಾತನಾಡಿ, ಕೇಂದ್ರ ಸರ್ಕಾರ ಅಸ್ಮಿತಾ ಯೋಜನೆಯಡಿ 6 ಜಿಲ್ಲೆಗಳ ಮಕ್ಕಳಿಗೆ ತರಬೇತಿ ನೀಡುತ್ತಿದೆ ಎಂದರು.
ತಹಸೀಲ್ದಾರ್ ಮಂಜುಳಾ ನಾಯಿಕ, ಗ್ರಾಪಂ ಅಧ್ಯಕ್ಷ ಚಂದ್ರಕಾಂತ ಪಾಟೀಲ, ರಾಜು ಅವಟೆ, ಸುಧೀರ ಗಿರಿಗೌಡರ, ಸುಭಾಷ ಹೆಬ್ಬಾಳಿ, ಶಂಕರ ಹೆಬ್ಬಾಳಿ, ಮಹಾಂತೇಶ ಮಗದುಮ್ಮ, ಹನುಮಂತಗೌಡ ಪಾಟೀಲ, ತಾಲೂಕು ಕ್ರೀಡಾ ಸಂಯೋಜಕರಾದ ಬಾಯನ್ನವರ, ಮಲ್ಲಪ್ಪ ಮಾಳಗಿ, ಬಸೀರ್ ಲಾಡಖಾನ್, ಎಂ.ಎಂ.ಮಗದುಮ್ಮ, ಸುನೀತಾ ನಲವಡೆ, ಮಹಾವೀರ ಸನಕಿ, ಮಹಾವೀರ ಅವಟೆ, ಪ್ರಕಾಶ ಅವಲಕ್ಕಿ, ಪ್ರಕಾಶ ಬಸ್ಸಾಪುರಿ, ಸಚಿನ ಹೆಬ್ಬಾಳಿ, ಎಂ.ಎಂ.ಶೆಟ್ಟೆನ್ನವರ, ಜ್ಯೋತಿ ಮಿರ್ಜಿ ಇತರರಿದ್ದರು.