ಹನುಮಸಾಗರ: ಮನೆ ಬಳಿ ಕಸದ ವಾಹನ ಬಂದಾಗ ಸಾರ್ವಜನಿಕರು ಹಸಿ ಹಾಗೂ ಒಣ ಕಸ ವಿಂಗಡಿಸಿ ಹಾಕಬೇಕು ಎಂದು ಪಿಡಿಒ ನಿಂಗಪ್ಪ ಮೂಲಿಮನಿ ಹೇಳಿದರು.

ಇಲ್ಲಿನ ಗ್ರಾಪಂ ವತಿಯಿಂದ ಶುಕ್ರವಾರ ಹಮ್ಮಿಕೊಂಡ ಕಸ ಸಂಗ್ರಹಣೆಯ ಕರ ವಸೂಲಾತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಬಿಸಾಡಬಾರದು. ಗ್ರಾಮದ ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ಗ್ರಾಪಂನಿಂದ ಮನೆ ಮನೆಗೆ ತೆರಳಿ ಕಸ ಸಂಗ್ರಹಣೆ ಮಾಡಲಾಗುತ್ತದೆ. ನಂತರ ಆ ಕಸವನ್ನು ಘನ ತ್ಯಾಜ್ಯವಿಲೇವಾರಿ ಘಟಕದಲ್ಲಿ ಸಂಗ್ರಹಣೆ ಮಾಡಲಾಗುತ್ತದೆ. ಸ್ವಚ್ಛತೆ ಕಾಪಾಡಲು ಸಾರ್ವಜನಿಕರು ಗ್ರಾಪಂನೊಂದಿಗೆ ಕೈ ಜೋಡಿಸಬೇಕು ಎಂದರು.
ಗ್ರಾಪಂ ಕಾರ್ಯದರ್ಶಿ ಅಮರೇಶ ಕರಡಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೀರನಗೌಡ ಪಾಟೀಲ್, ಸಿಬ್ಬಂದಿ ಮಹಾಂತಯ್ಯ ಕೋಮಾರಿ, ಚಂದಯ್ಯ ಹಿರೇಮಠ, ಬಸವರಾಜ ಶಿವಸಿಂಪಿ, ಹನುಮೇಶ ನರೇಗಲ್, ವೀರೇಶ ಕೂರ್ನಾಳ, ಮೈಬೂಬ ಇಟಗಿ ಇತರರಿದ್ದರು.