ಭಾರತಕ್ಕೆ ಬೆಂಬಲ ಸೂಚಿಸಿರುವ ದೇಶಗಳಿಗೆ ಪಾಕಿಸ್ತಾನದ ವಿರುದ್ಧ ಕೋಪವಿದೆ: ಭಯೋತ್ಪಾದನೆ ಅಂತ್ಯಗೊಳಿಸುತ್ತೇವೆ

ಝಾನ್ಸಿ(ಉತ್ತರಪ್ರದೇಶ): ಜಗತ್ತಿನ ಎಲ್ಲ ರಾಷ್ಟ್ರಗಳು ನಮ್ಮೊಂದಿಗಿವೆ. ಭಯೋತ್ಪಾದನೆಯನ್ನು ಅಂತ್ಯಗೊಳಿಸಲು ದೇಶಗಳೆಲ್ಲವೂ ನಮ್ಮ ಕಡೆಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಝಾನ್ಸಿಯಲ್ಲಿ ಮಾತನಾಡಿರುವ ಪ್ರಧಾನಿ ಮೋದಿ, ” ಭಾರತೀಯರು ನೆರೆ ರಾಷ್ಟ್ರಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ಜಗತ್ತು ಇಂದು ನಮ್ಮ ಪರ ನಿಂತಿದೆ. ಅವರು ನಮ್ಮನ್ನು ಬೆಂಬಲಿಸಿದ್ದಾರೆ. ಹೀಗೆ ನಮ್ಮನ್ನು ಬೆಂಬಲಿಸುತ್ತಿರುವ ರಾಷ್ಟ್ರಗಳಿಗೆ ಬೇಸರ ಮಾತ್ರ ಇಲ್ಲ. ಪಾಕಿಸ್ತಾನದ ವಿರುದ್ಧ ಅತೀವ ಕೋಪವಿದೆ,” ಎಂದು ಅವರು ಹೇಳಿದರು.

ಅಲ್ಲದೆ, ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವತ್ತ ಎಲ್ಲ ದೇಶಗಳು ನಮಗೆ ಬೆಂಬಲ ಸೂಚಿಸಿವೆ ಎಂದು ಹೇಳಿದರು.

One Reply to “ಭಾರತಕ್ಕೆ ಬೆಂಬಲ ಸೂಚಿಸಿರುವ ದೇಶಗಳಿಗೆ ಪಾಕಿಸ್ತಾನದ ವಿರುದ್ಧ ಕೋಪವಿದೆ: ಭಯೋತ್ಪಾದನೆ ಅಂತ್ಯಗೊಳಿಸುತ್ತೇವೆ”

Comments are closed.